Jaggesh: ನವರಸ ನಾಯಕನ ಜೀವನದಲ್ಲಿ ಅತೀ ದೊಡ್ಡ ನೋವೇನು?; ಜಗ್ಗೇಶ್ ಹೇಳಿದ ಸತ್ಯ

Jaggesh: ನವರಸ ನಾಯಕನ ಜೀವನದಲ್ಲಿ ಅತೀ ದೊಡ್ಡ ನೋವೇನು?; ಜಗ್ಗೇಶ್ ಹೇಳಿದ ಸತ್ಯ

TV9 Web
| Updated By: shivaprasad.hs

Updated on:Sep 29, 2021 | 12:51 PM

Kaage Motte: ನವರಸ ನಾಯಕ ಜಗ್ಗೇಶ್ ತಮ್ಮ ಪುತ್ರ ಗುರುರಾಜ್ ಅಭಿನಯದ ‘ಕಾಗೆ ಮೊಟ್ಟೆ’ ಸಿನಿಮಾದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಜೀವನದ ಅತೀ ದೊಡ್ಡ ತಪ್ಪು ಯಾವುದು ಎಂಬುದನ್ನು ಬಹಳ ಬೇಸರದಿಂದ ಹೇಳಿಕೊಂಡಿದ್ದಾರೆ.

ಚಂದನವನದ ಹಿರಿಯ ನಟ ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ ‘ಕಾಗೆ ಮೊಟ್ಟೆ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಈ ವೇಳೆ ಜಗ್ಗೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಚಿತ್ರತಂಡಕ್ಕೆ ಶಹಬ್ಬಾಸ್​ಗಿರಿ ನೀಡಿದ್ದಾರೆ. ಹಿಂದಿಯಲ್ಲಿ ಬಂದ ‘ಮಿರ್ಜಾಪುರ್’ ಮೊದಲಾದ ಸೀರೀಸ್​ಗಳನ್ನು ನೋಡಿರುತ್ತಾರೆ. ಆ ಮಾದರಿಯಲ್ಲಿ ಈ ಚಿತ್ರ ಇರಲಿದೆ. ಅದಕ್ಕಾಗಿ ನಿರ್ದೇಶಕರು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಅವರು ನುಡಿದಿದ್ದಾರೆ.

ಪುತ್ರ ಗುರುರಾಜ್ ಪ್ರತಿಭೆಯ ಕುರಿತಂತೆ ಮಾತನಾಡಿದ ಜಗ್ಗೇಶ್, ಆತ ನನ್ನ ಮೊದಲ ಪ್ರೇಕ್ಷಕ. ಸಣ್ಣ ವಯಸ್ಸಿನಿಂದಲೂ ನನ್ನನ್ನು ನೋಡಿ ಬೆಳೆದಿದ್ದಾನೆ ಎಂದಿದ್ದಾರೆ. ಪುತ್ರನ ಸಿನಿ ಪಯಣದ ಕುರಿತು ಮಾತನಾಡಿರುವ ಜಗ್ಗೇಶ್, ಪುತ್ರನಿಗೆ ಪರ ಭಾಷೆಯಲ್ಲಿ ಹತ್ತಾರು ಅವಕಾಶಗಳು ಬಂದಾಗಲೂ, ಬೇಡ ಎಂದು ನಿರಾಕರಿಸಿದೆ. ಅದು ಈಗಲೂ ನನ್ನನ್ನು ಕಾಡುತ್ತಿದೆ. ಹಾರುವ ಪಕ್ಷಿಯಂತೆ, ಆತನಿಗೆ (ಗುರುರಾಜ್) ತಡೆಯೊಡ್ಡದೇ ಉಳಿದಿದ್ದರೆ, ಎಲ್ಲಿಗೋ ಹೋಗಿ ತಲುಪುತ್ತಿದ್ದ. ಈಗಲೂ ಅದು ಬಹಳ ಕಾಡುತ್ತದೆ. ನನ್ನ ಜೀವನದ ಅತೀ ದೊಡ್ಡ ತಪ್ಪದು ಎಂದು ಜಗ್ಗೇಶ್ ನುಡಿದಿದ್ದಾರೆ. ಪುತ್ರ ಗುರುರಾಜ್ ಕುರಿತು ಜಗ್ಗೇಶ್​ಗೆ ಮತ್ತೇನು ಇಷ್ಟವಾಗುತ್ತದೆ? ಪುತ್ರನ ಕನಸೇನು? ಎಲ್ಲವನ್ನೂ ಜಗ್ಗೇಶ್ ಸಂದರ್ಶನದಲ್ಲಿ ವಿವರಿಸಿದ್ದಾರೆ. ನೋಡಿ.

ಇದನ್ನೂ ಓದಿ:

Hombale Films: ಹೊಂಬಾಳೆ 12ನೇ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’​ಗೆ ಜಗ್ಗೇಶ್​ ಹೀರೋ; ನಿರ್ದೇಶನ ಯಾರದ್ದು?

ಡಾರ್ಲಿಂಗ್​ ಕೃಷ್ಣ ಜೊತೆ ಮೇಘಾ ಶೆಟ್ಟಿ ‘ದಿಲ್​ ಪಸಂದ್’​; ‘ಜೊತೆ ಜೊತೆಯಲಿ’ ನಟಿಗೆ ಸಿಕ್ಕ ಪಾತ್ರ ಹೇಗಿದೆ?

(Jaggesh shares his biggest mistake of his life in Kaage Motte press meet)

Published on: Sep 28, 2021 05:17 PM