Temple Tour: ಬಾಗಲಕೋಟೆಯಲ್ಲಿ ಶಕ್ತಿ ಸ್ವರೂಪಿಣಿಯಾಗಿ ನೆಲೆ ನಿಂತಿದ್ದಾಳೆ ಬನಶಂಕರಿ

ಗ ಇರುವ ದೇವಾಲಯಕ್ಕೂ ಮುಂಚೆ ಇದ್ದ ಮಂದಿರ ಗರ್ಭಗುಡಿಯ ಮಣ್ಣಿನಲ್ಲಿ ಹೂತು ಹೋಗಿದೆ. ಈಗ ಇರುವಂತಾ ದೇವಿಯ ಪೀಠದ ಮೇಲೆ ಶಾಲಿವಾಹನ ಶಕ 603 ಎಂದು ಬರೆದಿದೆ.

Temple Tour: ಬಾಗಲಕೋಟೆಯಲ್ಲಿ ಶಕ್ತಿ ಸ್ವರೂಪಿಣಿಯಾಗಿ ನೆಲೆ ನಿಂತಿದ್ದಾಳೆ ಬನಶಂಕರಿ
| Updated By: ಆಯೇಷಾ ಬಾನು

Updated on: Sep 29, 2021 | 7:53 AM

ಬಾಗಲಕೋಟೆ ಜಿಲ್ಲೆಯ ಬಾದಾಮಿ ಯಾರಿಗೆ ತಾನೇ ಗೊತ್ತಿಲ್ಲ. ಐತಿಹಾಸಿಕ ನಗರಿಯಾಗಿರುವ ಬಾದಾಮಿ ಶಕ್ತಿ ದೇವತೆಯ ವಾಸಸ್ಥಾನವಾಗಿಯೂ ಪ್ರಸಿದ್ಧಿ ಪಡೆದಿದೆ. ಬಾದಾಮಿಯ ಬನಶಂಕರಿ ದೇಗುಲ ಶಕ್ತಿಪೀಠವಾಗಿ ಗುರುತಿಸಿಕೊಂಡಿದೆ. ಬಾಗಲಕೋಟೆ ಅಂದರೆ ಇತಿಹಾಸದಲ್ಲಿ ಗುರುತಿಸಿಕೊಂಡಿರುವುದೇ ಚಾಲುಕ್ಯರ ನಾಡು ಅಂತ. ಚಾಲುಕ್ಯರ ಆಳ್ವಿಕೆಯಲ್ಲಿ ಬಾದಾಮಿ ರಾಜಧಾನಿಯಾಗಿತ್ತು. ಇಲ್ಲಿ ಶಕ್ತಿ ದೇವತೆಯಾಗಿ ನೆಲೆ ನಿಂತು ಎಲ್ಲರನ್ನೂ ಸಲಹುತ್ತಿದ್ದಾಳೆ ಆ ಜಗನ್ಮಾತೆ ಬನಶಂಕರಿ. ಬಾದಾಮಿಯ ಬನಶಂಕರಿ ಮಾತೆಯ ಆಲಯ ಪುರಾಣ ಪುಣ್ಯಕಾಲದಿಂದಲೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಬಾದಾಮಿಯ ಬನಶಂಕರಿ ದೇಗುಲ ನಾಡಿನ ಶಕ್ತಿ ಪೀಠಗಳಲ್ಲಿ ಒಂದು. ಆದರೆ ಶಕ್ತಿ ಪೀಠಗಳಲ್ಲೇ ಈ ದೇಗುಲ ಶಾಖಾಂಬರಿ ಶಕ್ತಿ ಪೀಠವಾಗಿ ಗುರುತಿಸಿಕೊಂಡಿದೆ. ಬಾದಾಮಿ ಚಾಲುಕ್ಯರ ಕುಲದೇವತೆಯಾಗಿ ಅವರ ಆಳ್ವಿಕೆಯ ಕಾಲದಲ್ಲಿ ಆರಾಧ್ಯ ದೇವತೆಯಾಗಿದ್ದ ಬನಶಂಕರಿ ಅಮ್ಮನವರ ಆಲಯ ಯಾವ ಕಾಲಘಟ್ಟದ್ದು ಎನ್ನುವ ಬಗ್ಗೆ ಇಂದಿಗೂ ಖಚಿತತೆ ಇಲ್ಲ. ಈಗ ಇರುವ ದೇವಾಲಯಕ್ಕೂ ಮುಂಚೆ ಇದ್ದ ಮಂದಿರ ಗರ್ಭಗುಡಿಯ ಮಣ್ಣಿನಲ್ಲಿ ಹೂತು ಹೋಗಿದೆ. ಈಗ ಇರುವಂತಾ ದೇವಿಯ ಪೀಠದ ಮೇಲೆ ಶಾಲಿವಾಹನ ಶಕ 603 ಎಂದು ಬರೆದಿದೆ. ಐದು ಅಡಿ ಎತ್ತರ ಇರುವಂತಾ ಬನಶಂಕರಿ ದೇವಿಯ ವಿಗ್ರಹ ಕಪ್ಪು ಶಿಲೆಯಿಂದ ಕೂಡಿದೆ. ಸಿಂಹ ಸ್ವರೂಪಿಣಿಯಾಗಿ ನೆಲೆಸಿರುವ ಬನಶಂಕರಿ ತಾಯಿ ಅಷ್ಟ ಕರಗಳನ್ನ ಹೊಂದಿದ್ದಾಳೆ.

Follow us