AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ಟಾಪ್​ಲೆಸ್​ ಆಗಿ ಉಪಹಾರ ಸವಿದ ಉರ್ಫಿ ಜಾವೇದ್​; ತಿಂಡಿ ಪ್ಲೇಟ್​, ಜ್ಯೂಸ್​ ಲೋಟ ಇಲ್ಲದಿದ್ರೆ ದೇವರೇ ಗತಿ

Urfi Javed Topless: ದಿನದಿಂದ ದಿನಕ್ಕೆ ಉರ್ಫಿ ಜಾವೇದ್​ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಈಗ ಅವರು ಟಾಪ್​ಲೆಸ್​ ಆಗಿ ಕ್ಯಾಮೆರಾ ಎದುರು ಬಂದಿದ್ದಾರೆ.

Urfi Javed: ಟಾಪ್​ಲೆಸ್​ ಆಗಿ ಉಪಹಾರ ಸವಿದ ಉರ್ಫಿ ಜಾವೇದ್​; ತಿಂಡಿ ಪ್ಲೇಟ್​, ಜ್ಯೂಸ್​ ಲೋಟ ಇಲ್ಲದಿದ್ರೆ ದೇವರೇ ಗತಿ
ಊರ್ಫಿ ಜಾವೇದ್
TV9 Web
| Edited By: |

Updated on:Dec 27, 2022 | 5:15 PM

Share

ನಟಿ ಉರ್ಫಿ ಜಾವೇದ್​ (Urfi Javed) ಅವರು ಮಾಡುವ ಸಾಹಸಗಳು ಒಂದೆರಡಲ್ಲ. ಬಟ್ಟೆಗಳ ವಿಚಾರದಲ್ಲಿ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಪ್ರತಿ ದಿನ ವಿಚಿತ್ರವಾಗಿ ಡ್ರೆಸ್​ ಮಾಡಿಕೊಳ್ಳದೇ ಇದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಪ್ರತಿ ಬಾರಿ ಅವರು ಕ್ಯಾಮೆರಾ ಮುಂದೆ ಬಂದಾಗಲೂ ನೆಟ್ಟಿಗರನ್ನು ಅಚ್ಚರಿಗೆ ದೂಡುತ್ತಾರೆ. ಅಷ್ಟರಮಟ್ಟಿಗೆ ವಿಚಿತ್ರವಾಗಿರುತ್ತವೆ ಉರ್ಫಿ ಜಾವೇದ್​ ಡ್ರೆಸ್​ಗಳು (Urfi Javed Dress). ಈ ಬಾರಿ ಅವರು ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಉಪಹಾರ ಸೇವಿಸುವಾಗ ಉರ್ಫಿ ಜಾವೇದ್​ ಅವರು ಟಾಪ್​ಲೆಸ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು (Urfi Javed Video) ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಪ್ರತಿ ಬಾರಿ ಉರ್ಫಿ ಜಾವೇದ್​ ಅವರ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದಾಗ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತದೆ. ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡಿಲ್ಲ. ದಿನದಿಂದ ದಿನಕ್ಕೆ ಉರ್ಫಿ ಜಾವೇದ್​ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಈಗ ಅವರು ಟಾಪ್​ಲೆಸ್​ ಆಗಿ ಕ್ಯಾಮೆರಾ ಎದುರು ಬಂದಿದ್ದಾರೆ. ಬಲಗೈಯಲ್ಲಿ ಹಿಡಿದುಕೊಂಡ ತಿಂಡಿ ಪ್ಲೇಟ್​ ಮತ್ತು ಎಡಗೈಯಲ್ಲಿ ಇರುವ ಜ್ಯೂಸ್​ ಲೋಟದಿಂದ ಅವರು ಎದೆ ಭಾಗವನ್ನು ಮುಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Urfi Javed: ನಟಿ ಉರ್ಫಿ ಜಾವೇದ್​ಗೆ ಅತ್ಯಾಚಾರ​, ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ಉರ್ಫಿ ಜಾವೇದ್​ ಅವರು ಇಂಥ ಅವತಾರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಅವರಿಗೆ ಹಲವರಿಂದ ಬೆದರಿಕೆ ಕೂಡ ಬಂದಿದೆ. ಆದರೂ ಉರ್ಫಿ ಜಾವೇದ್​ ಕಿಂಚಿತ್ತೂ ಹೆದರಿಲ್ಲ. ಬೆದರಿಕೆ ಹಾಕುವವರಿಗೆ ಸಾವಾಲೊಡ್ಡುವ ರೀತಿಯಲ್ಲಿ ಅವರು ಫೋಟೋಶೂಟ್​ ಮಾಡಿಸುತ್ತಲೇ ಇದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: Urfi Javed: ಚಿಕ್ಕ ಹುಡುಗರ ವಿರುದ್ಧ ಪೊಲೀಸರಿಗೆ​ ದೂರು ನೀಡಲು ಮುಂದಾದ ಉರ್ಫಿ ಜಾವೇದ್​; ಬಾಲಕರ ತಪ್ಪೇನು?

ವಿವಾದಕ್ಕೂ ಉರ್ಫಿ ಜಾವೇದ್​ ಅವರಿಗೂ ಬಹಳ ಹತ್ತಿರದ ನಂಟು. ಅವರ ವಿರುದ್ಧ ಅನೇಕರು ಕೇಸ್​ ದಾಖಲು ಮಾಡಿದ್ದಾರೆ. ಇತ್ತೀಚೆಗೆ ಅವರು ದುಬೈನಲ್ಲಿ ಅರೆಬೆತ್ತಲಾಗಿ ಫೋಟೋಶೂಟ್​ ಮಾಡುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂಬ ಸುದ್ದಿ ಹರಡಿತ್ತು. ಆ ಬಗ್ಗೆ ಮಾಧ್ಯಮಗಳಿಗೆ ಉರ್ಫಿ ಜಾವೇದ್​ ಸ್ಪಷ್ಟನೆ ನೀಡಿದರು. ಫೋಟೋಶೂಟ್​ ನಡೆಯುತ್ತಿದ್ದ ಸ್ಥಳದಲ್ಲಿ ಅನುಮತಿ ಪಡೆಯುವ ವಿಚಾರದಲ್ಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆಯೇ ಹೊರತು ಬಟ್ಟೆಯ ಬಗ್ಗೆ ಯಾವುದೇ ತಕರಾರು ವ್ಯಕ್ತವಾಗಿಲ್ಲ ಎಂದು ಉರ್ಫಿ ಜಾವೇದ್​ ಹೇಳಿದರು.

View this post on Instagram

A post shared by Uorfi (@urf7i)

ಒಂದಷ್ಟು ದಿನಗಳ ಹಿಂದೆ ಉರ್ಫಿ ಜಾವೇದ್​ ಅವರು ಮಾದಕವಾಗಿ ಸೀರೆಯುಟ್ಟು ಮ್ಯೂಸಿಕ್​ ವಿಡಿಯೋ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಅವರು ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಅವರ ವಿರುದ್ಧ ಕೆಲವರು ಕೇಸ್​ ಹಾಕಿದ್ದರು. ಆ ಬಗ್ಗೆ ಉರ್ಫಿ ಜಾವೇದ್​ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:44 pm, Tue, 27 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್