Aishwarya Rai: ಖ್ಯಾತ ನಟಿ ಐಶ್ವರ್ಯಾ ರೈಗೆ ಭೂ ಸಂಕಷ್ಟ, ಮನೆಗೆ ಬಂತು ನೋಟಿಸ್
ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ನಾಸಿಕ್ ಭೂಕಂದಾಯ ಇಲಾಖೆ ನೋಟಿಸ್ ನೀಡಿದೆ. ಹೌದು ನಾಸಿಕ್‌ನಲ್ಲಿ ಆಸ್ತಿ ಹೊಂದಿರುವ ನಟಿ ಐಶ್ವರ್ಯಾ ರೈ ಭೂ ತೆರಿಗೆ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಮಹಾರಾಷ್ಟ್ರ: ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಅವರಿಗೆ ನಾಸಿಕ್ ಭೂಕಂದಾಯ ಇಲಾಖೆ ನೋಟಿಸ್ ನೀಡಿದೆ. ಹೌದು ನಾಸಿಕ್‌ನಲ್ಲಿ ಆಸ್ತಿ ಹೊಂದಿರುವ ನಟಿ ಐಶ್ವರ್ಯಾ ರೈ ಅವರು ಭೂ ತೆರಿಗೆ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ನಟಿ ಐಶ್ವರ್ಯಾ ರೈಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಟಿ ನಾಸಿಕ್‌ನಲ್ಲಿ ಆಸ್ತಿಯನ್ನು ಹೊಂದಿದ್ದು ಇದೀಗ ಒಂದು ವರ್ಷದಿಂದ ಆ ಭೂಮಿಗೆ ಸಂಬಂಧಿಸಿದಂತೆ ಯಾವುದೇ ತೆರಿಗೆ ಪಾವತಿಸಿಲ್ಲ. ಹೀಗಾಗಿ, ಜಿಲ್ಲಾಡಳಿತದ ಸಂಬಂಧಪಟ್ಟ ಅಧಿಕಾರಿಗಳು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಗೆ ನೋಟಿಸ್ ಕಳುಹಿಸಿದ್ದಾರೆ.
ವರದಿಗಳ ಪ್ರಕಾರ, ಐಶ್ವರ್ಯಾ ಅವರು ಸಿನ್ನಾರ್‌ನ ತಂಗಾವ್ ಬಳಿಯ ನಾಸಿಕ್‌ನ ಅಡ್ವಾಡಿಯಲ್ಲಿ ಆಸ್ತಿ ಹೊಂದಿದ್ದಾರೆ. ಅವರು ಈ ಪ್ರದೇಶದಲ್ಲಿ ಸುಮಾರು ಒಂದು ಹೆಕ್ಟೇರ್ ಭೂಮಿಯನ್ನು ಹೊಂದಿದ್ದಾರೆಂದು ವರದಿಯಾಗಿದೆ. ಹಲವಾರು ಜ್ಞಾಪನೆಗಳ ಹೊರತಾಗಿಯೂ ಕಳೆದ ಮೌಲ್ಯಮಾಪನ ವರ್ಷದಿಂದ ಈ ಭೂಮಿಗೆ ತೆರಿಗೆ ಪಾವತಿಸಲಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದರ ಪರಿಣಾಮವಾಗಿ ಸಿನ್ನಾರ್ ತಹಸೀಲ್ದಾರ್ ಇದೀಗ ನಟಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ: Aishwarya Rai Bachchan: ಮಗಳು ಆರಾಧ್ಯಾ ತುಟಿಗೆ ಮುತ್ತು ನೀಡಿ ಬರ್ತ್ಡೇ ವಿಶ್ ಮಾಡಿದ ಐಶ್ವರ್ಯಾ ರೈ; ನೆಟ್ಟಿಗರ ತಕರಾರು
ಐಶ್ವರ್ಯಾ ಅವರು ಭೂ ತೆರಿಗೆಯಲ್ಲಿ 21,960 ರೂ. ಬಾಕಿಯನ್ನು ಸ್ವೀಕರಿಸಿದ 10 ದಿನಗಳಲ್ಲಿ ಪಾವತಿಸದಿದ್ದರೆ, ಐಶ್ವರ್ಯಾ ವಿರುದ್ಧ ಮಹಾರಾಷ್ಟ್ರ ಭೂಕಂದಾಯ ಕಾಯಿದೆ, 1966 ರ ಕಲಂ 174 ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ಹೇಳುತ್ತದೆ ಎಂದು ಏಷ್ಯಾನೆಟ್ ವರದಿ ಉಲ್ಲೇಖಿಸಿದೆ.
ಜನವರಿ 9ರಂದು ನೋಟಿಸ್ ನೀಡಲಾಗಿದೆ ಆದರೆ ಐಶ್ವರ್ಯಾ ಅವರು ನೋಟಿಸ್ ಸ್ವೀಕರಿಸಿದ್ದಾರೆಯೇ ಅಥವಾ ಅದಕ್ಕೆ ಪ್ರತಿಕ್ರಿಯಿಸಿದ್ದಾರೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಸಿನ್ನಾರ್‌ನಲ್ಲಿರುವ 1200 ಆಸ್ತಿ ಮಾಲೀಕರಲ್ಲಿ ಐಶ್ವರ್ಯಾ ಕೂಡ ಒಬ್ಬರು, ಅವರು ತಮ್ಮ ತೆರಿಗೆಯನ್ನು ಪಾವತಿಸದಕ್ಕೆ ಈ ನೋಟಿಸ್‌ಗಳನ್ನು ಕಳುಹಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ (ಮಾರ್ಚ್ ಅಂತ್ಯದೊಳಗೆ) ಎಲ್ಲಾ ಬಾಕಿಗಳನ್ನು ಸಂಗ್ರಹಿಸಲು ಮಹಾರಾಷ್ಟ್ರದ ಭೂಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ, ಅದಕ್ಕಾಗಿಯೇ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Tue, 17 January 23