Sanjay Dutt: ಸಂಜಯ್ ದತ್ ಹೆಸರಿಗೆ 72 ಕೋಟಿ ರೂಪಾಯಿ ಆಸ್ತಿ ಬರೆದಿಟ್ಟು ಮೃತಪಟ್ಟಿದ್ದ ವೃದ್ಧೆ

ನಿಶಾ ಪಾಟೀಲ್ ಹೆಸರಿನ 62 ವರ್ಷದ ವೃದ್ಧೆ ಮುಂಬೈನಲ್ಲಿ ವಾಸವಾಗಿದ್ದರು. ಅವರು ಸಂಜಯ್ ದತ್​ ಅವರ ಹುಚ್ಚು ಅಭಿಮಾನಿ. ಈ ಕಾರಣಕ್ಕೆ ಅವರು ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿದ್ದರು.

Sanjay Dutt: ಸಂಜಯ್ ದತ್ ಹೆಸರಿಗೆ 72 ಕೋಟಿ ರೂಪಾಯಿ ಆಸ್ತಿ ಬರೆದಿಟ್ಟು ಮೃತಪಟ್ಟಿದ್ದ ವೃದ್ಧೆ
ಸಂಜಯ್ ದತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 25, 2023 | 2:23 PM

ನೆಚ್ಚಿನ ಸೆಲೆಬ್ರಿಟಿಗಳ ಟ್ಯಾಟೂನ ದೇಹದ ಮೇಲೆ ಹಾಕಿಸಿಕೊಳ್ಳುವವರಿದ್ದಾರೆ. ಮನೆಯಲ್ಲಿ ನೆಚ್ಚಿನ ಸ್ಟಾರ್​ನ ಫೋಟೋ ಹಾಕಿಕೊಳ್ಳುವವರೂ ಇದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಕ್ಕಳಿಗೆ ನೆಚ್ಚಿನ ಹೀರೋ ಹೆಸರನ್ನು ಇಟ್ಟವರಿದ್ದಾರೆ. ಆದರೆ, ಇಲ್ಲೋರ್ವ ವೃದ್ಧೆ ಸಾಯುವುದಕ್ಕೂ ಮುನ್ನ ತನ್ನ 72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನಟ ಸಂಜಯ್ ದತ್ (Sanjay Dutt) ಹೆಸರಿಗೆ ಬರೆದಿದ್ದರು. ಈ ಘಟನೆ ನಡೆದಿದ್ದು 2018ರಲ್ಲಿ. ಕೆಲ ಅಭಿಮಾನಿಗಳು ಈ ಘಟನೆಯನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ (Social Media) ನೆನಪಿಸಿಕೊಂಡಿದ್ದಾರೆ.

ನಿಶಾ ಪಾಟೀಲ್ ಹೆಸರಿನ 62 ವರ್ಷದ ವೃದ್ಧೆ ಮುಂಬೈನಲ್ಲಿ ವಾಸವಾಗಿದ್ದರು. ಅವರು ಸಂಜಯ್ ದತ್​ ಅವರ ಹುಚ್ಚು ಅಭಿಮಾನಿ. ಅವರು 2018ರ ಜನವರಿ 15ರಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟರು. ತಮ್ಮ ಆಸ್ತಿಯನ್ನು ಅವರು ಮಕ್ಕಳಿಗೆ ಬರೆದಿಟ್ಟಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ತಮ್ಮ ಎಲ್ಲಾ ಆಸ್ತಿಯನ್ನು ಸಂಜಯ್ ದತ್​ಗೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರು.

ನಿಶಾ ಮೃತಪಟ್ಟ ನಂತರದಲ್ಲಿ ಪೊಲೀಸರಿಗೆ ವಿಲ್ ವಿಚಾರ ಗೊತ್ತಾಗಿದೆ. ಹೀಗಾಗಿ, ಸಂಜಯ್ ದತ್​ಗೆ ಕರೆ ಮಾಡಿ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್​ನಲ್ಲಿರುವ ಹಣ, ಜ್ಯುವೆಲರಿ, ಮನೆ ಸೇರಿ 72 ಕೋಟಿ ಮೌಲ್ಯದ ಆಸ್ತಿಯನ್ನು ನಿಶಾ ಹೊಂದಿದ್ದರು. ಎಲ್ಲವೂ ಸಂಜಯ್ ದತ್ ಹೆಸರಿಗೆ ಅವರು ಬರೆದಿದ್ದರು.

ಈ ವಿಚಾರ ತಿಳಿದ ನಂತರದಲ್ಲಿ ಸಂಜಯ್ ದತ್​ಗೆ ಶಾಕ್ ಆಗಿತ್ತು. ಅವರು ಈ ಹಣವನ್ನು ಮುಟ್ಟಿಲ್ಲ. ಬದಲಿಗೆ ನಿಶಾ ಪಾಟಿಲ್ ಅವರ ಮಕ್ಕಳ ಹೆಸರಿಗೆ ಇದನ್ನು ವರ್ಗಾವಣೆ ಮಾಡಿದ್ದರು. 2018ರಲ್ಲಿ ಈ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.

ಸಂಜಯ್ ದತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರನ್ನು ಕಂಡರೆ ಅನೇಕರಿಗೆ ಇಷ್ಟ. ಅವರಿಗೆ ಈ ರೀತಿಯ ಹುಚ್ಚು ಅಭಿಮಾನ ತೋರುವವರೂ ಇದ್ದಾರೆ ಎಂಬುದು 2018ರಲ್ಲಿ ಗೊತ್ತಾಗಿತ್ತು.

ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಗಳನ್ನು ಕೊಂಡಾಡಿದ ಸಂಜಯ್ ದತ್; ‘ಕೆಡಿ’ ವೇದಿಕೆ ಮೇಲೆ ಬಾಲಿವುಡ್​ ಹೀರೋ ಹೇಳಿದ್ದಿಷ್ಟು

ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದಿಂದ ಕನ್ನಡಕ್ಕೆ ಕಾಲಿಟ್ಟರು. ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್