Oscars 2023: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಿಲ್ಲ ಆಸ್ಕರ್ ನಾಮಿನೇಷನ್; ಪ್ರತಿಷ್ಠಿತ ಪ್ರಶಸ್ತಿಗೆ ನೆಟ್ಟಿಗರ ಬಹಿಷ್ಕಾರ
The Kashmir Files | Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ‘ಆಸ್ಕರ್ ಪ್ರಶಸ್ತಿ’ ಸ್ಪರ್ಧೆಗೆ ನಾಮಿನೇಟ್ ಆಗದೇ ಇರುವುದರಿಂದ ಟ್ವಿಟರ್ನಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಪ್ರಿಯರು ಬಹುದಿನಗಳಿಂದ ಕಾದಿದ್ದ ‘ಆಸ್ಕರ್ ನಾಮಿನೇಷನ್ ಪಟ್ಟಿ’ (Oscars 2023 Nomination) ಪ್ರಕಟ ಆಗಿದೆ. 300ಕ್ಕೂ ಅಧಿಕ ಸಿನಿಮಾಗಳು ನಾಮನಿರ್ದೇಶನಗೊಳ್ಳಲು ಅರ್ಹತೆ ಪಡೆದಿದ್ದವು. ಆ ಪೈಕಿ ಒಂದಷ್ಟು ಸಿನಿಮಾಗಳಿಗೆ ಮಾತ್ರ ನಾಮಿನೇಟ್ ಆಗುವ ಅವಕಾಶ ಸಿಕ್ಕಿದೆ. ಇನ್ನುಳಿದ ಸಿನಿಮಾಗಳಿಗೆ ತೀವ್ರ ನಿರಾಸೆ ಆಗಿದೆ. ಕನ್ನಡದ ‘ಕಾಂತಾರ’, ‘ವಿಕ್ರಾಂತ್ ರೋಣ’, ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾಗಳು ರೇಸ್ನಿಂದ ಹೊರಗುಳಿದಿವೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಹಾಗಾಗಿ ಆಸ್ಕರ್ ಪ್ರಶಸ್ತಿಯನ್ನೇ ಬಹಿಷ್ಕರಿಸಲು ಕೆಲವು ನೆಟ್ಟಿಗರು ಮುಂದಾಗಿದ್ದಾರೆ. #boycottoscars ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಶುರು ಮಾಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಕಥೆ ಏನಾಯ್ತು ಎಂದು ಅನೇಕರು ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರನ್ನು ಪ್ರಶ್ನಿಸುತ್ತಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಡಿಮೆ ಬಜೆಟ್ನಲ್ಲಿ ತಯಾರಾಗಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಲವು ಆಯಾಮದಿಂದ ಈ ಸಿನಿಮಾ ಚರ್ಚೆಗೆ ಒಳಗಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಘಟನೆಗಳನ್ನು ಆಧರಿಸಿ ಮೂಡಿಬಂದ ಈ ಸಿನಿಮಾಗೆ ಆಸ್ಕರ್ ಸಿಗಬೇಕು ಎಂಬುದು ಹಲವರ ಆಸೆ ಆಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.
ಅತ್ಯುತ್ತಮ ಭಾಷಾ ಚಿತ್ರ ವಿಭಾಗಕ್ಕೆ ಭಾರತದಿಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಆಯ್ಕೆ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಅಲ್ಲಿ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಯ್ಕೆ ಆಗಿದ್ದರಿಂದ ಸ್ವತಂತ್ರವಾಗಿಯಾದರೂ ‘ದಿ ಕಾಶ್ಮೀರ್ ಫೈಲ್ಸ್’ ನಾಮಿನೇಟ್ ಆಗಬಹುದು ಎಂದು ಊಹಿಸಲಾಗಿತ್ತು. ಆ ಮಾರ್ಗದಲ್ಲಿಯೂ ಆಸ್ಕರ್ ಸ್ಪರ್ಧೆಗೆ ಎಂಟ್ರಿ ಪಡೆಯುವಲ್ಲಿ ಈ ಸಿನಿಮಾ ವಿಫಲ ಆಗಿದೆ.
Only #NaatuNaatu got nominations?
What about Fakeu Fakeu #TheKashmirfiles by @vivekagnihotri @AnupamPKher?? #BoycottOscars
— Chozhathozhan (@Chozhathozhan) January 24, 2023
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ‘ಆಸ್ಕರ್ ಪ್ರಶಸ್ತಿ’ ಸ್ಪರ್ಧೆಗೆ ನಾಮಿನೇಟ್ ಆಗದೇ ಇರುವುದರಿಂದ ಟ್ವಿಟರ್ನಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. #boycottoscars ಹ್ಯಾಶ್ ಟ್ಯಾಗ್ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬಹಿಷ್ಕರಿಸಲು ನೆಟ್ಟಿಗರು ಮುಂದಾಗಿದ್ದಾರೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ.
ಭಾರತದಿಂದ ಆಸ್ಕರ್ಗೆ 3 ನಾಮಿನೇಷನ್:
ಜ.24ರಂದು ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್ವಿನ್ ಥಿಯೇಟರ್ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಮಿನೇಷನ್ ಲಿಸ್ಟ್ ಅನೌನ್ಸ್ ಮಾಡಲಾಗಿದೆ. ಭಾರತದ ಒಂದಷ್ಟು ಸಿನಿಮಾಗಳು ಈ ಬಾರಿ ಶಾರ್ಟ್ಲಿಸ್ಟ್ ಆಗಿದ್ದರಿಂದ ನಾಮಿನೇಷನ್ ಪ್ರಕ್ರಿಯೆ ಮೇಲೆ ಸಖತ್ ನಿರೀಕ್ಷೆ ಮೂಡಿತ್ತು. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಭಾರತದ ‘ಆಲ್ ದಟ್ ಬ್ರೀಥ್ಸ್’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್ ಗೆಲ್ಲುವ ಚಾನ್ಸ್ ದಟ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:47 pm, Tue, 24 January 23