ರಿಲೀಸ್ಗೂ ಮೊದಲೇ ‘ಕೆಜಿಎಫ್ 2’ ದಾಖಲೆ ಮುರಿಯಲು ರೆಡಿ ಆದ ‘ಪಠಾಣ್’ ಸಿನಿಮಾ
‘ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಅಡ್ವಾನ್ಸ್ ಬುಕಿಂಗ್ ಸಾಕ್ಷಿ.

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಬುಧವಾರ (ಜನವರಿ 25) ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳುತ್ತಿರುವುದರಿಂದ ಸಹಜವಾಗಿಯೇ ಅವರ ಅಭಿಮಾನಿಗಳ ವಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಈಗ ‘ಪಠಾಣ್’ ಚಿತ್ರ (Pathan Movie) ಹಲವು ದಾಖಲೆ ಬರೆಯಲು ರೆಡಿ ಆಗಿದೆ. ಅದೇ ರೀತಿ ಅಡ್ವಾನ್ಸ್ ಬುಕಿಂಗ್ನಲ್ಲಿ ‘ಕೆಜಿಎಫ್ 2’ ಸಿನಿಮಾ ದಾಖಲೆಯನ್ನು ‘ಪಠಾಣ್’ ಮುರಿಯಲಿದೆ ಎನ್ನಲಾಗುತ್ತಿದೆ.
‘ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಅಡ್ವಾನ್ಸ್ ಬುಕಿಂಗ್ ಸಾಕ್ಷಿ. ಇಲ್ಲಿಯವರೆಗೆ ಬರೋಬ್ಬರಿ 4.10 ಲಕ್ಷ ಟಿಕೆಟ್ಗಳು ಮಲ್ಟಿಪ್ಲೆಕ್ಸ್ನಲ್ಲಿ ಮಾರಾಟ ಆಗಿವೆ. ಇಂದು (ಜನವರಿ 24) ರಾತ್ರಿ ವೇಳೆಗೆ ಈ ಸಂಖ್ಯೆ 5.25 ಲಕ್ಷ ದಾಟುವ ಸೂಚನೆ ಇದೆ.
‘ಕೆಜಿಎಫ್ 2’ ಸಿನಿಮಾದ ಹಿಂದಿ ವರ್ಷನ್ನ ಅಡ್ವಾನ್ಸ್ ಬುಕಿಂಗ್ನಲ್ಲಿ 5.15 ಲಕ್ಷ ಟಿಕೆಟ್ಗಳು ಮಾರಾಟ ಆಗಿದ್ದವು. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಕಾರಣ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಈಗ ಅಡ್ವಾನ್ಸ್ ಬುಕಿಂಗ್ನಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ಮುರಿಯಲು ಶಾರುಖ್ ಖಾನ್ ಸಿನಿಮಾ ರೆಡಿ ಆಗಿದೆ. ‘ಬಾಹುಬಲಿ 2’ ಚಿತ್ರ ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಈ ಚಿತ್ರದ ಹಿಂದಿ ವರ್ಷನ್ನಲ್ಲಿ 6.50 ಲಕ್ಷ ಟಿಕೆಟ್ಗಳು ಮಾರಾಟ ಆಗಿದ್ದವು.
ಇದನ್ನೂ ಓದಿ: Pathaan Movie: ಮುಂಜಾನೆ 6 ಗಂಟೆಗೆ ಶುರುವಾಗಲಿದೆ ‘ಪಠಾಣ್’ ಶೋ; ಅಬ್ಬರಿಸಲು ರೆಡಿಯಾದ ಶಾರುಖ್ ಖಾನ್
‘ಪಠಾಣ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ ಎನ್ನುವ ಕುತೂಹಲ ಮೂಡಿದೆ. ಬುಧವಾರ (ಜನವರಿ 25) ಓಪನಿಂಗ್ ಡೇ ಎಂದು ಅನೇಕರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಇನ್ನು, ಗುರುವಾರ (ಜನವರಿ 26) ಗಣರಾಜ್ಯೋತ್ಸವದ ಪ್ರಯುಕ್ತ ರಜೆ ಇದೆ. ನಂತರ ವೀಕೆಂಡ್ ಇದೆ. ಹೀಗಾಗಿ, ಮೊದಲ ಐದು ದಿನಗಳಲ್ಲಿ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:52 am, Tue, 24 January 23