AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ‘ಬಾಹುಬಲಿ 2’ ದಾಖಲೆಯನ್ನು ಮುರಿದ ‘ಕೆಜಿಎಫ್ 2’; ಇದು ಯಶ್ ಸಿನಿಮಾ ಸಾಧನೆ  

ಈ ವರ್ಷ ಹಲವು ಸಿನಿಮಾಗಳು ಗೆದ್ದಿವೆ. ಆ ಪೈಕಿ ದಕ್ಷಿಣ ಭಾರತದ ಚಿತ್ರಗಳೇ ಮೇಲುಗೈ ಸಾಧಿಸಿವೆ. ಬುಕ್ ಮೈ ಶೋ ವರದಿ ಮೂಲಕವೂ ಇದು ಸಾಬೀತಾಗಿದೆ.

Yash: ‘ಬಾಹುಬಲಿ 2’ ದಾಖಲೆಯನ್ನು ಮುರಿದ ‘ಕೆಜಿಎಫ್ 2’; ಇದು ಯಶ್ ಸಿನಿಮಾ ಸಾಧನೆ  
ಯಶ್​-ಪ್ರಭಾಸ್
TV9 Web
| Edited By: |

Updated on: Dec 20, 2022 | 7:52 AM

Share

ಈ ವರ್ಷ ತೆರೆಗೆ ಬಂದ ‘ಕೆಜಿಎಫ್ 2’ (KGF: Chapter 2) ಸಿನಿಮಾ ಮಾಡಿದ ಸಾಧನೆ ತುಂಬಾನೇ ದೊಡ್ಡದು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದೆ. ಬಾಲಿವುಡ್​​​ನ ಅದೆಷ್ಟೋ ಚಿತ್ರಗಳ ದಾಖಲೆಯನ್ನು ಈ ಸಿನಿಮಾ ಉಡೀಸ್ ಮಾಡಿದೆ. 2022 ಪೂರ್ಣಗೊಳ್ಳುತ್ತಾ ಬಂದರೂ ಈ ಚಿತ್ರದ ಬಗೆಗಿನ ಚರ್ಚೆ ನಿಂತಿಲ್ಲ. ಈ ಸಿನಿಮಾದಿಂದ ಯಶ್​ಗೆ (Yash) ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಹೋದಲ್ಲಿ ಬಂದಲ್ಲಿ ಅವರನ್ನು ಫ್ಯಾನ್ಸ್ ಮುತ್ತಿಕೊಳ್ಳುತ್ತಿದ್ದಾರೆ. ಈಗ ಯಶ್ ಸಿನಿಮಾ ಅಪರೂಪದ ದಾಖಲೆ ಬರೆದಿದೆ. ಈ ಬಗ್ಗೆ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ ವರದಿ ಬಿಡುಗಡೆ ಮಾಡಿದೆ. ‘ಬಾಹುಬಲಿ 2’ ಮಾಡಿದ್ದ ದಾಖಲೆಯನ್ನು ಇದು ಮುರಿದು ಹಾಕಿದೆ.

ಈ ವರ್ಷ ಹಲವು ಸಿನಿಮಾಗಳು ಗೆದ್ದಿವೆ. ಆ ಪೈಕಿ ದಕ್ಷಿಣ ಭಾರತದ ಚಿತ್ರಗಳೇ ಮೇಲುಗೈ ಸಾಧಿಸಿವೆ. ಬುಕ್ ಮೈ ಶೋ ವರದಿ ಮೂಲಕವೂ ಇದು ಸಾಬೀತಾಗಿದೆ. ಕೆಜಿಎಫ್ 2, ಆರ್​ಆರ್​ಆರ್, ದಿ ಕಾಶ್ಮೀರ್ ಫೈಲ್ಸ್​, ಪೊನ್ನಿಯಿನ್ ಸೆಲ್ವನ್: ಪಾರ್ಟ್​ 1, ಬ್ರಹ್ಮಾಸ್ತ್ರ: ಪಾರ್ಟ್​ 1: ಶಿವ, ವಿಕ್ರಮ್ ಹಾಗೂ ಡಾಕ್ಟರ್ ಸ್ಟ್ರೇಂಜ್: ಇನ್ ದಿನ ಮಲ್ಟಿವರ್ಸ್ ಆಫ್ ಮ್ಯಾಡ್​ನೆಸ್ ಚಿತ್ರಗಳು ‘ಬುಕ್ ಮೈ ಶೋ’ನ ಪಾಪ್ಯುಲರ್ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್​ 2, 777 ಚಾರ್ಲಿ

ಇದನ್ನೂ ಓದಿ
Image
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
Image
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

‘ಬುಕ್ ಮೈ ಶೋ’ನಲ್ಲಿ ಈವರೆಗೆ ಅತಿ ಹೆಚ್ಚು ಟಿಕೆಟ್ ಮಾರಾಟವಾದ ದಾಖಲೆ ‘ಬಾಹುಬಲಿ 2’ ಬಳಿ ಇತ್ತು. ಈ ಬಾರಿ ಅದು ‘ಕೆಜಿಎಫ್ 2’ ಪಾಲಾಗಿದೆ. ‘ಬುಕ್​ ಮೈ ಶೋ’ ಆ್ಯಪ್​ನಲ್ಲಿ ‘ಕೆಜಿಎಫ್ 2’ನ 1.77 ಕೋಟಿ ಟಿಕೆಟ್​ಗಳು ಮಾರಾಟವಾಗಿವೆ. ಈ ಮೂಲಕ ‘ಬಾಹುಬಲಿ 2’ ದಾಖಲೆಯನ್ನು ಯಶ್ ಸಿನಿಮಾ ಮುರಿದಿದೆ. ಮೊದಲ ದಿನವೇ ಈ ಚಿತ್ರದ 21 ಲಕ್ಷ ಟಿಕೆಟ್​ಗಳು ಮಾರಾಟವಾಗಿದ್ದವು ಅನ್ನೋದು ವಿಶೇಷ.

ಇದನ್ನೂ ಓದಿ: KGF Chapter 2: ವಿಶ್ವದ ಟಾಪ್​ 10 ಚಿತ್ರಗಳ ಪಟ್ಟಿಯಲ್ಲಿ ‘ಕೆಜಿಎಫ್​ 2’; ಹಾಲಿವುಡ್​ ಹೀರೋಗಳಿಗೆ ಯಶ್​ ಪೈಪೋಟಿ

ಬುಕ್ ಮೈ ಶೋನಲ್ಲಿ ದುಡ್ಡು ಕೊಟ್ಟು ಸಿನಿಮಾ ವೀಕ್ಷಿಸಲು ಅವಕಾಶ ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸ್ಟ್ರೀಮಿಂಗ್ ಅವಧಿಯ ಸಂಖ್ಯೆ ಹೆಚ್ಚಿದೆ. ಜನರು ಹೆಚ್ಚೆಚ್ಚು ಒಟಿಟಿ ಕಡೆ ವಾಲುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ