AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ವಿಶ್ವದ ಟಾಪ್​ 10 ಚಿತ್ರಗಳ ಪಟ್ಟಿಯಲ್ಲಿ ‘ಕೆಜಿಎಫ್​ 2’; ಹಾಲಿವುಡ್​ ಹೀರೋಗಳಿಗೆ ಯಶ್​ ಪೈಪೋಟಿ

Top 10 Most Searched Movies in 2022: ಪ್ರಪಂಚದಾದ್ಯಂತ ಜನರು ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಿದ ಟಾಪ್​ 10 ಸಿನಿಮಾಗಳ ಪಟ್ಟಿ ಪ್ರಕಟ ಆಗಿದೆ. ಅದರಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗೆ 8ನೇ ಸ್ಥಾನ ಸಿಕ್ಕಿದೆ.

KGF Chapter 2: ವಿಶ್ವದ ಟಾಪ್​ 10 ಚಿತ್ರಗಳ ಪಟ್ಟಿಯಲ್ಲಿ ‘ಕೆಜಿಎಫ್​ 2’; ಹಾಲಿವುಡ್​ ಹೀರೋಗಳಿಗೆ ಯಶ್​ ಪೈಪೋಟಿ
ಯಶ್
TV9 Web
| Edited By: |

Updated on: Dec 08, 2022 | 9:31 AM

Share

ನಟ ಯಶ್​ ಅವರು ಭಾರತೀಯ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾಗಳು ಬಿಡುಗಡೆ ಆದ ಬಳಿಕ ಅವರ ಹವಾ ವಿಶ್ವಮಟ್ಟದಲ್ಲಿ ಹೆಚ್ಚಿತು. ಹಾಲಿವುಡ್​ ಮಂದಿಗೆ ಅವರು ಪೈಪೋಟಿ ನೀಡುತ್ತಿದ್ದಾರೆ. ಇದು ಬರೀ ಬಾಯಿ ಮಾತಿನ ವಿಚಾರ ಅಲ್ಲ. ಗೂಗಲ್​ (Google) ನೀಡುತ್ತಿರುವ ಅಂಕಿ ಅಂಶಗಳ ಸಾಕ್ಷಿ ಕೂಡ ಹೌದು. 2022ರಲ್ಲಿ ವಿಶ್ವಾದ್ಯಂತ ಜನರು ಅತಿ ಹೆಚ್ಚು ಸರ್ಚ್​ ಮಾಡಿದ ಸಿನಿಮಾಗಳ ಪಟ್ಟಿಯನ್ನು ಗೂಗಲ್​ ಪ್ರಕಟ ಮಾಡಿದೆ. ಇದರಲ್ಲಿ ‘ಕೆಜಿಎಫ್​ 2’ ಸಿನಿಮಾ 8ನೇ ಸ್ಥಾನ ಪಡೆದುಕೊಂಡಿದೆ. ಇದು ಯಶ್​ (Yash) ಅಭಿಮಾನಿಗಳಿಗೆ ಹೆಮ್ಮೆ ತಂದಿದೆ. ಇಡೀ ಕನ್ನಡ ಚಿತ್ರರಂಗವೇ ಖುಷಿ ಪಡುವಂತಾಗಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಮಾರುಕಟ್ಟೆ ಸಣ್ಣದು ಎಂದು ಹೇಳಲಾಗುತ್ತಿತ್ತು. ಆದರೆ ಆ ಮಾತನ್ನು ಸುಳ್ಳು ಎಂದು ಸಾಬೀತು ಮಾಡಿದ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 2’. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್​’ ಬಂಡವಾಳ ಹೂಡಿತ್ತು. ವಿಶ್ವಾದ್ಯಂತ 1200 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್​ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಗಲ್ಲಾಪೆಟ್ಟಿಗೆ ಕಲೆಕ್ಷನ್​ ಮಾತ್ರವಲ್ಲದೇ ಜನಪ್ರಿಯತೆಯ ವಿಷಯದಲ್ಲೂ ಈ ಸಿನಿಮಾ ಸದ್ದು ಮಾಡಿದೆ.

ಇದನ್ನೂ ಓದಿ: Yatharv Yash: ಯಶ್​-ರಾಧಿಕಾ ಪಂಡಿತ್​ ಪುತ್ರ ಯಥರ್ವ್ ಜನ್ಮದಿನ; ವಿಶೇಷ ಫೋಟೋ ಹಂಚಿಕೊಂಡ ರಾಕಿ ಭಾಯ್​

ಇದನ್ನೂ ಓದಿ
Image
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
Image
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಪ್ರಪಂಚದಾದ್ಯಂತ ಜನರು ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಿದ ಟಾಪ್​ 10 ಸಿನಿಮಾಗಳ ಪಟ್ಟಿ ಪ್ರಕಟ ಆಗಿದೆ. ಅದರಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗೆ 8ನೇ ಸ್ಥಾನ ಸಿಕ್ಕಿದೆ. ಘಟಾನುಘಟಿ ಹಾಲಿವುಡ್ ಚಿತ್ರಗಳಿಗೆ ಕನ್ನಡದ ಈ ಸಿನಿಮಾ ಪೈಪೋಟಿ ನೀಡಿದೆ. ಈ ಪಟ್ಟಿಯಲ್ಲಿ ಇರುವ ಭಾರತದ ಇನ್ನೊಂದು ಸಿನಿಮಾ ಎಂದರೆ ‘ಬ್ರಹ್ಮಾಸ್ತ್ರ’ ಮಾತ್ರ. ಈ ಚಿತ್ರ 6ನೇ ಸ್ಥಾನದಲ್ಲಿದೆ.

ಟಾಪ್​ 10 ಸಿನಿಮಾಗಳ ಪಟ್ಟಿ ಹೀಗಿದೆ:

  1. ಥೋರ್​: ಲವ್​ ಆ್ಯಡ್​​ ಥಂಡರ್​
  2. ಬ್ಲಾಕ್​ ಆ್ಯಡಮ್​
  3. ಟಾಪ್​ ಗನ್​
  4. ದಿ ಬ್ಯಾಟ್​ ಮ್ಯಾನ್​
  5. ಎನ್​ಕಾಂಟೋ
  6. ಬ್ರಹ್ಮಾಸ್ತ್ರ
  7. ಜುರಾಸಿಕ್​ ವರ್ಲ್ಡ್​: ಡೊಮಿನಿಯನ್​
  8. ಕೆಜಿಎಫ್​: ಚಾಪ್ಟರ್​ 2
  9. ಅನ್​ಚಾರ್ಟೆಡ್​
  10. ಮಾರ್ಬಿಯಸ್​

ಇದನ್ನೂ ಓದಿ: Top 5 Googled Films in India: ‘ಗೂಗಲ್​ ಟಾಪ್​ 5’ ಪಟ್ಟಿಯಲ್ಲಿ ಕಾಂತಾರ, ಕೆಜಿಎಫ್​ 2; ಇಡೀ ದೇಶಕ್ಕೆ ಗೊತ್ತು ಕನ್ನಡದ ತಾಕತ್ತು

ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್​ 5 ಸಿನಿಮಾಗಳ ಪಟ್ಟಿಯನ್ನು ಕೂಡ ಗೂಗಲ್​ ಪ್ರಕಟ ಮಾಡಿದೆ. ಅದರಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ 2ನೇ ಸ್ಥಾನ ಪಡೆದುಕೊಂಡಿದ್ದು, ‘ಕಾಂತಾರ’ ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ಇದು ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆ ತಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್