AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR ಕಲೆಕ್ಷನ್​ಗೆ ದೊಡ್ಡ ಹೊಡೆತ; ‘ಬಾಹುಬಲಿ 2’ ದಾಖಲೆ ಮುರಿಯೋದು ಕಷ್ಟ?

ತಂತ್ರಜ್ಞಾನ ಮುಂದುವರಿದಂತೆ, ಇಂಟರ್​ನೆಟ್​ ಬಳಕೆ ಹೆಚ್ಚಿದಂತೆ ಪೈರಸಿ ಕಾಟ ಜೋರಾಗಿದೆ. ಸಿನಿಮಾ ರಿಲೀಸ್​ ಆಗುತ್ತಿದ್ದಂತೆ ಆನ್​ಲೈನ್​ನಲ್ಲಿ ಸಿನಿಮಾಗಳು ಲೀಕ್​ ಆಗುತ್ತವೆ. ಸಣ್ಣ ಚಿತ್ರಗಳಿಂದ ಹಿಡಿದು, ದೊಡ್ಡ ಬಜೆಟ್​ ಚಿತ್ರಗಳವರೆಗೆ ಎಲ್ಲರೂ ಪೈರಸಿ ಕಾಟದ ಸಂತ್ರಸ್ತರು.

RRR ಕಲೆಕ್ಷನ್​ಗೆ ದೊಡ್ಡ ಹೊಡೆತ; ‘ಬಾಹುಬಲಿ 2’ ದಾಖಲೆ ಮುರಿಯೋದು ಕಷ್ಟ?
‘ಆರ್​ಆರ್​ಆರ್​’ ಪೋಸ್ಟರ್
TV9 Web
| Edited By: |

Updated on: Mar 25, 2022 | 7:40 PM

Share

ಎಸ್​.ಎಸ್​. ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಇಂದು (ಮಾರ್ಚ್​ 25) ರಿಲೀಸ್ ಆಗಿ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ವಿಶ್ವಾದ್ಯಂತ 8,000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಿಂದ ರಾಜಮೌಳಿ ಖಾತೆಗೆ ಮತ್ತೊಂದು ಯಶಸ್ಸು ಸೇರ್ಪಡೆ ಆಗಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಸಿನಿಮಾದ ಒಟ್ಟೂ ಕಲೆಕ್ಷನ್​ಗೆ ಹೊಡೆತ ನೀಡುವ ಘಟನೆ ಒಂದು ನಡೆದಿದೆ. ‘ಆರ್​ಆರ್​ಆರ್​’ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಆನ್​ಲೈನ್​ನಲ್ಲಿ ಲೀಕ್​ ಆಗಿದೆ.

ತಂತ್ರಜ್ಞಾನ ಮುಂದುವರಿದಂತೆ, ಇಂಟರ್​ನೆಟ್​ ಬಳಕೆ ಹೆಚ್ಚಿದಂತೆ ಪೈರಸಿ ಕಾಟ ಜೋರಾಗಿದೆ. ಸಿನಿಮಾ ರಿಲೀಸ್​ ಆಗುತ್ತಿದ್ದಂತೆ ಆನ್​ಲೈನ್​ನಲ್ಲಿ ಸಿನಿಮಾಗಳು ಲೀಕ್​ ಆಗುತ್ತವೆ. ಸಣ್ಣ ಚಿತ್ರಗಳಿಂದ ಹಿಡಿದು, ದೊಡ್ಡ ಬಜೆಟ್​ ಚಿತ್ರಗಳವರೆಗೆ ಎಲ್ಲರೂ ಪೈರಸಿ ಕಾಟದ ಸಂತ್ರಸ್ತರು. ಈಗ ‘ಆರ್​ಆರ್​ಆರ್​’ ಚಿತ್ರ ಕೂಡ ಪೈರಸಿ ಕಾಟಕ್ಕೆ ಒಳಗಾಗಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರ ಟೊರೆಂಟ್, ಟೆಲಿಗ್ರಾಮ್​ ಮೊದಲಾದ ಕಡೆಗಳಲ್ಲಿ ಹರಿದಾಡಿದೆ. ಇದು ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪ್ರಭಾವ ಬೀರಬಹುದು.

ಮೊದಲ ದಿನದ ಕಲೆಕ್ಷನ್​ ವಿಚಾರದಲ್ಲಿ ‘ಬಾಬುಬಲಿ 2’ ದಾಖಲೆಯನ್ನು ‘ಆರ್​ಆರ್​ಆರ್​’ ಮುರಿಯುವ ನಿರೀಕ್ಷೆ ಇದೆ. ಮೊದಲ ದಿನ ಬಹುತೇಕ ಶೋಗಳು ಸೋಲ್ಡ್​​ಔಟ್​ ಆಗಿರುವುದರಿಂದ ಚಿತ್ರದ ಗಳಿಕೆ ಹೆಚ್ಚಬಹುದು. ಆದರೆ, ಸಿನಿಮಾ ಲೀಕ್​ ಆಗಿರುವುದರಿಂದ ಒಟ್ಟಾರೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಾಣಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ, ಒಟ್ಟಾರೆ ಕಲೆಕ್ಷನ್​ ವಿಚಾರದಲ್ಲಿ ‘ಬಾಹುಬಲಿ 2’ ಚಿತ್ರವನ್ನು ‘ಆರ್​ಆರ್​ಆರ್​’ ಹಿಂದಿಕ್ಕಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಅಭಿಮಾನಿಗಳು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಕಡೆಗಳಿಂದಲೂ ಸೂಪರ್​ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ನಿರ್ದೇಶಕ ರಾಜಮೌಳಿ ಅವರ ಕೆಲಸಕ್ಕೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಕರ್ನಾಟಕದಲ್ಲೂ ‘ಆರ್​ಆರ್​ಆರ್​’ ಸಿನಿಮಾದ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭ ಆಗಿತ್ತು. ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಮುಗಿಬಿದ್ದು ಟಿಕೆಟ್​ ಖರೀದಿಸಿ, ಮೊದಲ ಶೋ ಕಣ್ತುಂಬಿಕೊಂಡ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕಲಾವಿದರ ಅಭಿನಯ, ಮನಸೆಳೆಯುವ ಕಥೆ, ರಾಜಮೌಳಿ ಅವರ ನಿರ್ದೇಶನವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ಕಲಾವಿದರಾದ ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ಕೂಡ ನಟಿಸಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: RRR Review: ಆರ್​​ಆರ್​ಆರ್​ ವಿಮರ್ಶೆ; ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್​

‘RRR​’ ನೋಡಲು ಬಂದರು, ಪುನೀತ್​ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?