Pathaan Movie: ಮುಂಜಾನೆ 6 ಗಂಟೆಗೆ ಶುರುವಾಗಲಿದೆ ‘ಪಠಾಣ್’ ಶೋ; ಅಬ್ಬರಿಸಲು ರೆಡಿಯಾದ ಶಾರುಖ್ ಖಾನ್
Pathaan First Day First Show: ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರವನ್ನು ನೋಡಲು ಜನರು ಎಲ್ಲಿಲ್ಲದಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಮುಂಜಾನೆಯೇ ಶೋಗಳನ್ನು ಆಯೋಜಿಸಲಾಗುತ್ತಿದೆ.
ನಟ ಶಾರುಖ್ ಖಾನ್ (Shah Rukh Khan) ಅವರ ವೃತ್ತಿಜೀವನದಲ್ಲಿ ‘ಪಠಾಣ್’ ಸಿನಿಮಾ ಸಾಕಷ್ಟು ಮಹತ್ವದ್ದಾಗಲಿದೆ. ಯಾಕೆಂದರೆ ಬರೋಬ್ಬರಿ 4 ವರ್ಷಗಳ ಗ್ಯಾಪ್ ಬಳಿಕ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಜನವರಿ 25ರಂದು ‘ಪಠಾಣ್’ ಚಿತ್ರ (Pathaan Movie) ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ. ಎಲ್ಲ ಚಿತ್ರಮಂದಿರಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣ ಆಗಲಿದೆ. ಸೆಲೆಬ್ರೇಷನ್ಗೆ ಶಾರುಖ್ ಖಾನ್ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅನೇಕ ಚಿತ್ರಮಂದಿರಗಳಲ್ಲಿ ಮುಂಜಾನೆಯೇ ‘ಪಠಾಣ್’ ಶೋ ಆರಂಭ ಆಗಲಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಸೌತ್ ಇಂಡಿಯಾದಲ್ಲಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆದಾಗ ಫ್ಯಾನ್ಸ್ ಸಲುವಾಗಿ ಮುಂಜಾನೆ ಶೋಗಳನ್ನು ಏರ್ಪಡಿಸುವುದು ಸಹಜ. ಈ ಟ್ರೆಂಡ್ ಈಗ ಬಾಲಿವುಡ್ನಲ್ಲೂ ಜೋರಾಗಿದೆ. ಅದರಲ್ಲೂ ಶಾರುಖ್ ಖಾನ್ ಅವರ ‘ಪಠಾಣ್’ ಚಿತ್ರವನ್ನು ನೋಡಲು ಜನರು ಎಲ್ಲಿಲ್ಲದಷ್ಟು ಆಸಕ್ತಿ ತೋರಿಸುತ್ತಿರುವುದರಿಂದ ಮುಂಜಾನೆಯೇ ಶೋ ಆಯೋಜಿಸಲಾಗುತ್ತಿದೆ. ದೆಹಲಿ, ಮುಂಬೈನಲ್ಲಿ ಈ ಶೋಗಳ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಮೊದಲ ದಿನ ‘ಪಠಾಣ್’ ಚಿತ್ರಕ್ಕೆ ಭಾರಿ ಓಪನಿಂಗ್ ಸಿಗುವುದು ಖಚಿತವಾಗಿದೆ. ಈಗಾಗಲೇ ಲಕ್ಷಾಂತರ ಟಿಕೆಟ್ಗಳು ಬುಕ್ ಆಗಿರುವುದರಿಂದ ಬಾಕ್ಸ್ ಆಫೀಸ್ನಲ್ಲಿ ಬಹುಕೋಟಿ ರೂಪಾಯಿ ಬಿಸ್ನೆಸ್ ಆಗುವುದು ಪಕ್ಕಾ ಆಗಿದೆ. ಟ್ರೇಡ್ ವಿಶ್ಲೇಷಕರು ಕೂಡ ಇದನ್ನೇ ಅಂದಾಜಿಸಿದ್ದಾರೆ. ಫಸ್ಟ್ ಡೇ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಮೂಡಿದೆ.
ಇದನ್ನೂ ಓದಿ: Pathaan: ‘ಶಾರುಖ್ ಖಾನ್ ಯಾಕೆ ಮನೆಯಿಂದ ಹೊರಗೆ ಬಂದಿಲ್ಲ?’; ನೇರ ಪ್ರಶ್ನೆ ಕೇಳಿದ ಅಭಿಮಾನಿಗೆ ಸಿಕ್ತು ಉತ್ತರ
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್ ಅಬ್ರಾಹಂ ಅವರಿಗೆ ಈ ಚಿತ್ರದಲ್ಲಿ ವಿಲನ್ ಪಾತ್ರವಿದೆ. ಈ ಸಿನಿಮಾದ ಟ್ರೇಲರ್ ಧೂಳೆಬ್ಬಿಸಿದೆ. ‘ಬೇಷರಂ ರಂಗ್..’ ಹಾಗೂ ‘ಜೂಮೇ ಜೋ ಪಠಾಣ್..’ ಹಾಡುಗಳು ಶಾರುಖ್ ಅಭಿಮಾನಿಗಳ ಮನ ಗೆದ್ದಿವೆ.
ಇದನ್ನೂ ಓದಿ: Pathaan: ‘ದೇಶ ಮಾತ್ರವಲ್ಲ, ಇಡೀ ಪ್ರಪಂಚವೇ ಶಾರುಖ್ ಅವರನ್ನು ಮಿಸ್ ಮಾಡಿಕೊಂಡಿದೆ’: ಜಾನ್ ಅಬ್ರಾಹಂ
ಶಾರುಖ್ ಖಾನ್ ಅವರಿಗೆ ‘ಪಠಾಣ್’ ಸಿನಿಮಾದ ಗೆಲುವು ಬಹಳ ಮುಖ್ಯವಾಗಲಿದೆ. ಈ ಹಿಂದೆ ಅವರು ನಟಿಸಿದ್ದ ‘ಜೀರೋ’ ಚಿತ್ರ ಹೀನಾಯವಾಗಿ ಸೋತಿತ್ತು. ಆ ಬಳಿಕ ಅವರು ನಾಲ್ಕು ವರ್ಷ ಗ್ಯಾಪ್ ತೆಗೆದುಕೊಂಡರು. ಈಗ ಭರ್ಜರಿಯಾಗಿ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ವರ್ಷನ್ನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.