Pathaan: ‘ದೇಶ ಮಾತ್ರವಲ್ಲ, ಇಡೀ ಪ್ರಪಂಚವೇ ಶಾರುಖ್​ ಅವರನ್ನು ಮಿಸ್​ ಮಾಡಿಕೊಂಡಿದೆ’: ಜಾನ್​ ಅಬ್ರಾಹಂ

John Abraham | Shah Rukh Khan: ‘ಪಠಾಣ್​’ ಚಿತ್ರ ಜ.25ಕ್ಕೆ ಬಿಡುಗಡೆ ಆಗುತ್ತಿದೆ. ಶಾರುಖ್​ ಖಾನ್​ ಅವರು ಕಮ್​ಬ್ಯಾಕ್​ ಮಾಡುತ್ತಿರುವ ಬಗ್ಗೆ ನಿಮಗೆ ಏನು ಅನಿಸುತ್ತಿದೆ ಎಂಬ ಪ್ರಶ್ನೆಗೆ ಜಾನ್​ ಅಬ್ರಾಹಂ ಉತ್ತರ ನೀಡಿದ್ದಾರೆ.

Pathaan: ‘ದೇಶ ಮಾತ್ರವಲ್ಲ, ಇಡೀ ಪ್ರಪಂಚವೇ ಶಾರುಖ್​ ಅವರನ್ನು ಮಿಸ್​ ಮಾಡಿಕೊಂಡಿದೆ’: ಜಾನ್​ ಅಬ್ರಾಹಂ
ಪಠಾಣ್ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on:Jan 20, 2023 | 2:57 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಬರೋಬ್ಬರಿ 4 ವರ್ಷಗಳ ಬಳಿಕ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಚಿತ್ರ (Pathaan Movie) ಜನವರಿ 25ರಂದು ಗ್ರ್ಯಾಂಡ್​ ಆಗಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಲು ಹಲವು ಕಾರಣಗಳಿವೆ. ಶಾರುಖ್​ ಖಾನ್​ ಅವರ ಎದುರು ವಿಲನ್​ ಆಗಿ ಜಾನ್​ ಅಬ್ರಾಹಂ ನಟಿಸಿದ್ದಾರೆ. ಅವರಿಬ್ಬರ ನಡುವಿನ ಮುಖಾಮುಖಿ ಸನ್ನಿವೇಶಗಳನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ‘ಪಠಾಣ್​’ ಬಿಡುಗಡೆಗೆ ದಿನಗಣನೆ ಆರಂಭ ಆಗಿರುವ ಈ ಸಮಯದಲ್ಲಿ ಶಾರುಖ್​ ಖಾನ್​ ಬಗ್ಗೆ ಜಾನ್​ ಅಬ್ರಾಹಂ (John Abraham) ಮಾತನಾಡಿದ್ದಾರೆ.

ಸ್ಟಾರ್​ ನಟರ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗಲಿ ಎಂಬುದು ಅವರ ಅಭಿಮಾನಿಗಳ ಆಸೆ ಆಗಿರುತ್ತದೆ. ಶಾರುಖ್​ ಖಾನ್​ ಫ್ಯಾನ್ಸ್​ ಕೂಡ ಅದನ್ನೇ ಬಯಸುತ್ತಾರೆ. ಆದರೆ 2018ರ ಡಿಸೆಂಬರ್​ನಲ್ಲಿ ಬಂದ ‘ಜೀರೋ’ ಸಿನಿಮಾದ ಸೋಲಿನ ನಂತರ ಶಾರುಖ್​ ಖಾನ್​ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಅಂತೂ ಇಂತೂ ನಾಲ್ಕು ವರ್ಷಗಳ ನಂತರ ಅವರ ‘ಪಠಾಣ್​’ ಸಿನಿಮಾ ರಿಲೀಸ್​ ಆಗುತ್ತಿದೆ. ಶಾರುಖ್​ ಖಾನ್​ ಅವರನ್ನು ತಾವು ಇಷ್ಟು ದಿನಗಳ ಕಾಲ ಮಿಸ್​ ಮಾಡಿಕೊಂಡಿರುವುದಾಗಿ ಜಾನ್​ ಅಬ್ರಾಹಂ ತಿಳಿಸಿದ್ದಾರೆ.

ಇದನ್ನೂ ಓದಿ: Shah Rukh Khan: 2000 ರೂಪಾಯಿ ಮೀರಿತು ‘ಪಠಾಣ್​’ ಟಿಕೆಟ್​ ದರ; ಮುಗಿಬಿದ್ದು ಬುಕ್​ ಮಾಡಿದ ಅಪ್ಪಟ ಅಭಿಮಾನಿಗಳು

ಇದನ್ನೂ ಓದಿ
Image
Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ
Image
Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​
Image
Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ
Image
Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

ಶಾರುಖ್​ ಖಾನ್​ ಅವರು ಕಮ್​ಬ್ಯಾಕ್​ ಮಾಡುತ್ತಿರುವ ಬಗ್ಗೆ ನಿಮಗೆ ಏನು ಅನಿಸುತ್ತಿದೆ ಎಂಬ ಪ್ರಶ್ನೆಗೆ ಜಾನ್​ ಅಬ್ರಾಹಂ ಉತ್ತರ ನೀಡಿದ್ದಾರೆ. ‘ಶಾರುಖ್​ ಖಾನ್​ ಅವರನ್ನು ಕೇವಲ ಈ ದೇಶ ಮಿಸ್​ ಮಾಡಿಕೊಂಡಿದೆ ಅಂತ ನನಗೆ ಅನಿಸುವುದಿಲ್ಲ. ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಇಡೀ ಪ್ರಪಂಚವೇ ಬಯಸುತ್ತಿದೆ. ಈ ಸಿನಿಮಾದಲ್ಲಿ ಅವರು ಅದ್ಭುತವಾಗಿ ನಟಿಸಿದ್ದಾರೆ’ ಎಂದು ಜಾನ್​ ಅಬ್ರಾಹಂ ಹೇಳಿದ್ದಾರೆ.

ಇದನ್ನೂ ಓದಿ: Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ

ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರು ಜೋಡಿಯಾಗಿ ನಟಿಸಿದ ನಾಲ್ಕನೇ ಸಿನಿಮಾ ‘ಪಠಾಣ್​’. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ವಾರ್​’ ಖ್ಯಾತಿಯ ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಿದೆ.

ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​

‘ಪಠಾಣ್​’ ಚಿತ್ರಕ್ಕೆ ಈಗಾಗಲೇ ಅಡ್ವಾನ್ಸ್​ ಬುಕಿಂಗ್​ ಓಪನ್​ ಆಗಿದೆ. ಟಿಕೆಟ್​ ಬೆಲೆ ದುಬಾರಿ ಆಗಿದ್ದರೂ ಕೂಡ ಅಪ್ಪಟ ಅಭಿಮಾನಿಗಳು ಮುಗಿಬಿದ್ದು ಬುಕ್​ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ಓಪನಿಂಗ್​ ಸಿಗುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Fri, 20 January 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ