‘777 ಚಾರ್ಲಿ’ ಡೈರೆಕ್ಟರ್ಗೆ ಬಂತು ಬಾಲಿವುಡ್ ಸ್ಟಾರ್ ನಟ ಜಾನ್ ಅಬ್ರಾಹಂ ಕಾಲ್; ಎಲ್ಲಾ ಚಾರ್ಲಿ ಮಹಿಮೆ
‘777 ಚಾರ್ಲಿ’ ಸಿನಿಮಾಗೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಶ್ವಾನ ಹಾಗೂ ಮನುಷ್ಯನ ನಡುವಿನ ಭಾವನಾತ್ಮಕ ಕಥೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾ
‘777 ಚಾರ್ಲಿ’ ಸಿನಿಮಾ (777 Charlie Movie) ರಿಲೀಸ್ ಆಗಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಹಿಂದಿಯಲ್ಲಿ ‘777 ಚಾರ್ಲಿ’ ಚಿತ್ರಕ್ಕೆ ಥಿಯೇಟರ್ಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆ. ಕೆಲ ಬಾಲಿವುಡ್ ಸೆಲೆಬ್ರಿಟಿಗಳು ಕನ್ನಡದ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈಗ ನಟ ಜಾನ್ ಅಬ್ರಾಹಂ (John Abraham) ಸರದಿ. ಅವರು ಚಿತ್ರದ ನಿರ್ದೇಶಕ ಕಿರಣ್ ರಾಜ್ಗೆ ಕರೆ ಮಾಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ವಿಚಾರವನ್ನು ಕಿರಣ್ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘777 ಚಾರ್ಲಿ’ ಸಿನಿಮಾಗೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಶ್ವಾನ ಹಾಗೂ ಮನುಷ್ಯನ ನಡುವಿನ ಭಾವನಾತ್ಮಕ ಕಥೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈಗ ಜಾನ್ ಅಬ್ರಾಹಂ ಅವರು ಚಿತ್ರತಂಡದ ಬೆನ್ನು ತಟ್ಟಿರುವುದು ‘777 ಚಾರ್ಲಿ’ ಬಲವನ್ನು ಹೆಚ್ಚಿಸಿದೆ.
ಜಾನ್ ಅಬ್ರಾಹಂ ಅವರು ಮಾಸ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಆ್ಯಕ್ಷನ್ ಪ್ರಿಯರಾದ ಅವರಿಗೆ ಈ ಶ್ವಾನದ ಮೇಲಿನ ಸಿನಿಮಾದ ಟ್ರೇಲರ್ ಇಷ್ಟವಾಗಿದೆ. ‘777 ಚಾರ್ಲಿ’ ಸಿನಿಮಾದ ಟ್ರೇಲರ್ ನೋಡಿರುವ ಅವರು ಕಿರಣ್ ರಾಜ್ಗೆ ಕರೆ ಮಾಡಿ ಪ್ರೀತಿಯಿಂದ ನಾಲ್ಕು ಮಾತನಾಡಿದ್ದಾರೆ. ಮೊದಲ ಪ್ರಯತ್ನಕ್ಕೆ ಇಷ್ಟೊಂದು ಮೆಚ್ಚುಗೆ ಸಿಗುತ್ತಿರುವುದಕ್ಕೆ ಕಿರಣ್ ರಾಜ್ ಖುಷಿಯಾಗಿದ್ದಾರೆ.
Received a call from @TheJohnAbraham sir today. And it made my day❤️. He watched the trailer, expressed his earnest, from-the-heart words. Feeling so so grateful??
— Kiranraj K (@Kiranraj61) June 15, 2022
ಬಾಕ್ಸ್ ಆಫೀಸ್ನಲ್ಲೂ ‘777 ಚಾರ್ಲಿ’ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಮೊದಲ ವಾರಾಂತ್ಯಕ್ಕೆ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ. ಈ ವಾರವೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶೀಘ್ರವೇ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ‘777 ಚಾರ್ಲಿ ಪಾರ್ಟ್ 2’: ಸೀಕ್ವೆಲ್ ಬಗ್ಗೆ ತಮ್ಮ ನಿರ್ಧಾರ ಏನೆಂದು ಸ್ಪಷ್ಟವಾಗಿ ತಿಳಿಸಿದ ರಕ್ಷಿತ್ ಶೆಟ್ಟಿ
ಜಾನ್ ಅಬ್ರಾಹಂ ನಟನೆಯ ‘ಅಟ್ಯಾಕ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಸಿನಿಮಾ ಮಕಾಡೆ ಮಲಗಿದೆ. ಈ ಚಿತ್ರ ಗೆಲ್ಲಲಿಲ್ಲ. ಈ ಚಿತ್ರದ ಪ್ರಚಾರದ ವೇಳೆ ಜಾನ್ ಅಬ್ರಾಹಂ ಆಡಿದ ಮಾತು ಅನೇಕರ ಕೋಪಕ್ಕೆ ಕಾರಣವಾಗಿತ್ತು. ‘ನಾನು ಬಾಲಿವುಡ್ ನಟ. ಪ್ರಾದೇಶಿಕ ಸಿನಿಮಾಗಳಲ್ಲಿ ನಾನು ನಟಿಸಲ್ಲ’ ಎಂದು ಹೇಳಿದ್ದರು. ಆದರೆ, ಈಗ ಅವರಿಂದ ಪ್ರಾದೇಶಿಕ ಸಿನಿಮಾಗಳಿಗೆ ಬೆಂಬಲ ಸಿಗುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 pm, Wed, 15 June 22