‘777 ಚಾರ್ಲಿ ಪಾರ್ಟ್​ 2’: ಸೀಕ್ವೆಲ್​ ಬಗ್ಗೆ ತಮ್ಮ ನಿರ್ಧಾರ ಏನೆಂದು ಸ್ಪಷ್ಟವಾಗಿ ತಿಳಿಸಿದ ರಕ್ಷಿತ್​ ಶೆಟ್ಟಿ

‘777 ಚಾರ್ಲಿ ಪಾರ್ಟ್​ 2’ ಬರಲಿದೆಯೇ? ಆ ಕುರಿತು ತಮ್ಮ ನಿರ್ಧಾರ ಏನು ಎಂಬುದನ್ನು ರಕ್ಷಿತ್​ ಶೆಟ್ಟಿ ಅವರು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

TV9kannada Web Team

| Edited By: Madan Kumar

Jun 15, 2022 | 9:33 AM

‘ಸಿಂಪಲ್​ ಸ್ಟಾರ್’ ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie) ಸೂಪರ್ ಹಿಟ್​ ಆಗಿದೆ. ಈ ಚಿತ್ರಕ್ಕೆ ಕಿರಣ್​ ರಾಜ್​ ನಿರ್ದೇಶನ ಮಾಡಿದ್ದಾರೆ. ನಾಯಿ ಮತ್ತು ಶ್ವಾನದ ನಡುವೆ ಇರುವ ಬಾಂಧವ್ಯದ ಕಥೆಯನ್ನು ಇಟ್ಟುಕೊಂಡು ಈ ಚಿತ್ರ ಮೂಡಿಬಂದಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಸಖತ್​ ಮೆಚ್ಚಿಕೊಂಡಿದ್ದಾರೆ. ರಕ್ಷಿತ್​ ಶೆಟ್ಟಿ (Rakshit Shetty) ಅವರ ಪರಂವಾ ಸ್ಟುಡಿಯೋಸ್​ ಬ್ಯಾನರ್​ ಮೂಲಕ ನಿರ್ಮಾಣವಾದ ‘777 ಚಾರ್ಲಿ’ಗೆ ಬಾಕ್ಸ್​ ಆಫೀಸ್​ನಲ್ಲಿ ಗೆಲುವು ಸಿಕ್ಕಿದೆ. ಹಾಗಾದರೆ ಇದರ ಇನ್ನೊಂದು ಪಾರ್ಟ್​ ಬರಲಿದೆಯೇ? ಕ್ಲೈಮ್ಯಾಕ್ಸ್​ ನೋಡಿದ ಬಳಿಕ ಅಭಿಮಾನಿಗಳ ಮನದಲ್ಲಿ ಹೀಗೊಂದು ಪ್ರಶ್ನೆ ಮೂಡಿದೆ. ‘777 ಚಾರ್ಲಿ ಪಾರ್ಟ್​ 2’ (777 Charlie 2) ಮಾಡುವ ಕುರಿತು ತಮ್ಮ ನಿರ್ಧಾರ ಏನು ಎಂಬುದನ್ನು ರಕ್ಷಿತ್​ ಶೆಟ್ಟಿ ಅವರು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ‘ಕಿರಣ್ ರಾಜ್​ ಬೇಕಿದ್ದರೆ ‘ಪಾರ್ಟ್​ 2’ ಮಾಡಲಿ. ಆದರೆ ನಾನು ನಟಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada