AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pathaan Collection: ‘ಪಠಾಣ್​’ಗೆ ಭರ್ಜರಿ ಓಪನಿಂಗ್​ ಸಿಗೋದು ಖಚಿತ; ‘ಬಾಹುಬಲಿ 2’ ದಾಖಲೆ ಮುರಿಯುತ್ತಾ ಈ​ ಚಿತ್ರ?

Pathaan Box Office Prediction: ರಜಾ ದಿನಗಳನ್ನು ಹೊರತುಪಡಿಸಿ ರಿಲೀಸ್​ ಆದ ಸಿನಿಮಾಗಳ ಪೈಕಿ ಹಿಂದಿಯಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಖ್ಯಾತಿ ‘ಬಾಹುಬಲಿ 2’ ಚಿತ್ರಕ್ಕಿದೆ. ಆ ದಾಖಲೆಯನ್ನು ‘ಪಠಾಣ್​’ ಮುರಿಯುವ ಸಾಧ್ಯತೆ ಇದೆ.

Pathaan Collection: ‘ಪಠಾಣ್​’ಗೆ ಭರ್ಜರಿ ಓಪನಿಂಗ್​ ಸಿಗೋದು ಖಚಿತ; ‘ಬಾಹುಬಲಿ 2’ ದಾಖಲೆ ಮುರಿಯುತ್ತಾ ಈ​ ಚಿತ್ರ?
ಶಾರುಖ್​ ಖಾನ್​. ಪ್ರಭಾಸ್​
ಮದನ್​ ಕುಮಾರ್​
|

Updated on: Jan 21, 2023 | 8:30 AM

Share

‘ಪಠಾಣ್​’ (Pathaan Movie) ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಫ್ಯಾನ್ಸ್​ ಸಜ್ಜಾಗಿದ್ದಾರೆ. ಜನವರಿ 25ರಂದು ಹಿಂದಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ವರ್ಷನ್​ನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ‘ಪಠಾಣ್​’ ಮೂಲಕ ಶಾರುಖ್​ ಖಾನ್​ (Shah Rukh Khan) ಅವರು ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಆ ಕಾರಣದಿಂದ ನಿರೀಕ್ಷೆ ಜೋರಾಗಿದೆ. 2022ರಲ್ಲಿ ಹಿಂದಿ ಚಿತ್ರರಂಗಕ್ಕೆ ಹೇಳಿಕೊಳ್ಳುವಂತಹ ಲಾಭ ಆಗಿರಲಿಲ್ಲ. 2023ರಲ್ಲಿ ‘ಪಠಾಣ್​’ ಚಿತ್ರದ ಮೂಲಕ ಶುಭಾರಂಭ ಆಗುವ ನಿರೀಕ್ಷೆ ಇದೆ. ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್​ (Pathaan Box Office Collection) ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ರೇಡ್​ ವಿಶ್ಲೇಷಕರ ಪ್ರಕಾರ ಅಂದಾಜು 45ರಿಂದ 50 ಕೋಟಿ ರೂಪಾಯಿ ಬಿಸ್ನೆಸ್​ ಮಾಡುವ ಸಾಧ್ಯತೆ ದಟ್ಟವಾಗಿದೆ.

ರಜಾ ದಿನಗಳನ್ನು ಹೊರತುಪಡಿಸಿ ರಿಲೀಸ್​ ಆದ ಸಿನಿಮಾಗಳ ಪೈಕಿ ಹಿಂದಿಯಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಖ್ಯಾತಿ ‘ಬಾಹುಬಲಿ 2’ ಚಿತ್ರಕ್ಕಿದೆ. ಆ ಚಿತ್ರದ ಹಿಂದಿ ವರ್ಷನ್​ನಿಂದ 41 ಕೋಟಿ ರೂಪಾಯಿ ಆದಾಯ ಹರಿದುಬಂದಿತ್ತು. ಈಗ ‘ಪಠಾಣ್​’ ಸಿನಿಮಾ ಆ ಚಿತ್ರದ ದಾಖಲೆಯನ್ನು ಮುರಿಯಲಿದೆ ಎಂದು ಅನೇಕರು ಊಹಿಸಿದ್ದಾರೆ.

ಇದನ್ನೂ ಓದಿ: Shah Rukh Khan: 2000 ರೂಪಾಯಿ ಮೀರಿತು ‘ಪಠಾಣ್​’ ಟಿಕೆಟ್​ ದರ; ಮುಗಿಬಿದ್ದು ಬುಕ್​ ಮಾಡಿದ ಅಪ್ಪಟ ಅಭಿಮಾನಿಗಳು

ಇದನ್ನೂ ಓದಿ
Image
Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ
Image
Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​
Image
Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ
Image
Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

ಈಗಾಗಲೇ ಈ ಚಿತ್ರಕ್ಕೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಓಪನ್​ ಆಗಿದೆ. ಇದು ಹೈವೋಲ್ಟೇಜ್​ ಸಿನಿಮಾ ಆದ್ದರಿಂದ ಟಿಕೆಟ್​ ಬೆಲೆ ಜಾಸ್ತಿ ಆಗಿದೆ. ಹಾಗಿದ್ದರೂ ಕೂಡ ಅಪ್ಪಟ ಅಭಿಮಾನಿಗಳು ಮುಗಿಬಿದ್ದು ಟಿಕೆಟ್​ ಬುಕ್​ ಮಾಡಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್​ ಆಗಲಿದೆ ಎಂಬ ನಂಬಿಕೆ ಬಲವಾಗಿದೆ.

ಇದನ್ನೂ ಓದಿ: Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ

ಈ ಸಿನಿಮಾಗಾಗಿ ಶಾರುಖ್​ ಖಾನ್​ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಿಕ್ಸ್​ ಪ್ಯಾಕ್​ ಗೆಟಪ್​ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅನೇಕ ದೇಶಗಳಲ್ಲಿ ಈ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರಿಸಲಾಗಿದೆ. ಹಲವು ವಿವಾದಗಳನ್ನು ಎದುರಿಸುತ್ತ ‘ಪಠಾಣ್​’ ಬಿಡುಗಡೆ ಆಗುತ್ತಿದೆ. ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದೆ.

ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​

‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್​ ಅಬ್ರಾಹಂ ಅವರಿಗೆ ಈ ಚಿತ್ರದಲ್ಲಿ ವಿಲನ್​ ಪಾತ್ರವಿದೆ. ಈ ಸಿನಿಮಾದ ಟ್ರೇಲರ್​ ಧೂಳೆಬ್ಬಿಸಿದೆ. ‘ಬೇಷರಂ ರಂಗ್​..’ ಹಾಗೂ ‘ಜೂಮೇ ಜೋ ಪಠಾಣ್​..’ ಹಾಡುಗಳು ಶಾರುಖ್​ ಅಭಿಮಾನಿಗಳ ಮನ ಗೆದ್ದಿವೆ. ಈ ಎಲ್ಲ ಕಾರಣಗಳಿಂದಾಗಿ ನಿರೀಕ್ಷೆ ಜೋರಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More