‘ಕೆಜಿಎಫ್ 2’ ದಾಖಲೆ ಮುರಿಯಲ್ಲ ‘ಪಠಾಣ್’; ಶಾರುಖ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ?
ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರಕ್ಕೆ ಮುಂಗಡ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಈಗಾಗಲೇ 1.17 ಲಕ್ಷ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ.
ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ಈ ಚಿತ್ರದಿಂದ ಶಾರುಖ್ ಖಾನ್ ಅವರು ದೊಡ್ಡ ಮಟ್ಟದ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ನಾಲ್ಕು ವರ್ಷಗಳ ಬಳಿಕ ಕಂಬ್ಯಾಕ್ ಮಾಡುತ್ತಿರುವ ಅವರನ್ನು ಸ್ವಾಗತಿಸಲು ಫ್ಯಾನ್ಸ್ ರೆಡಿ ಆಗಿದ್ದಾರೆ. ‘ಪಠಾಣ್’ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಆದರೆ, ಶಾರುಖ್ ಚಿತ್ರದ ಬಳಿ ‘ಕೆಜಿಎಫ್ 2’ (KGF: Chapter 2) ಮೊದಲ ದಿನ ಮಾಡಿದ ಗಳಿಕೆಯ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಬಾಕ್ಸ್ ಆಫೀಸ್ ಪಂಡಿತರು ಹೇಳಿದ್ದಾರೆ.
ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರಕ್ಕೆ ಮುಂಗಡ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಈಗಾಗಲೇ 1.17 ಲಕ್ಷ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಒಂದು ವಾರ ಮೊದಲೇ ಟಿಕೆಟ್ ಬುಕಿಂಗ್ ಆರಂಭ ಆದರೂ ಜನರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಸಿಂಗಲ್ಸ್ಕ್ರೀನ್ ಥಿಯೇಟರ್ಗಳ ಲೆಕ್ಕ ಇನ್ನೂ ಸರಿಯಾಗಿ ಸಿಕ್ಕಿಲ್ಲ.
ಗುರುವಾರ (ಜನವರಿ 19) ರಾತ್ರಿ 11 ಗಂಟೆವರೆಗಿನ ಲೆಕ್ಕಾಚಾರದ ಪ್ರಕಾರ ಐನಾಕ್ಸ್ನಲ್ಲಿ 51 ಸಾವಿರ, ಪಿವಿಆರ್ನಲ್ಲಿ 38 ಸಾವಿರ ಹಾಗೂ ಸಿನಿಪೋಲಿಸ್ನಲ್ಲಿ 27 ಸಾವಿರ ಟಿಕೆಟ್ಗಳು ಮಾರಾಟ ಆಗಿವೆ. ‘ಪಠಾಣ್’ ಸಿನಿಮಾದ ಮೊದಲ ದಿನದ ಗಳಿಕೆ 39 ಕೋಟಿ ರೂಪಾಯಿಯಿಂದ 41 ಕೋಟಿ ರೂಪಾಯಿ ಆಗಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಊಹಿಸಿದ್ದಾರೆ. ‘ಕೆಜಿಎಫ್ 2’ ಚಿತ್ರ 53 ಕೋಟಿ ರೂಪಾಯಿಯನ್ನು ಮೊದಲ ದಿನ ಗಳಿಸಿತ್ತು. ಈ ಚಿತ್ರದ ಗಳಿಕೆಯನ್ನು ಹಿಂದಿಕ್ಕಲು ಶಾರುಖ್ ಖಾನ್ ಸಿನಿಮಾ ಬಳಿ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಮೊದಲಾದವರು ನಟಿಸಿದ್ದರು.
ಇದನ್ನೂ ಓದಿ:‘ಪಠಾಣ್’ ಚಿತ್ರಕ್ಕಾಗಿ ಶಾರುಖ್ ಖಾನ್ ಪಡೆದ ಸಂಭಾವನೆ ಇಷ್ಟೇನಾ? ಅಕ್ಷಯ್ ಕುಮಾರ್ಗಿಂತ ಕಡಿಮೆ
ವಿಶೇಷ ಎಂದರೆ 2018ರಲ್ಲಿ ಶಾರುಖ್ ಖಾನ್ ನಟನೆಯ ‘ಜೀರೋ’ ಹಾಗೂ ಯಶ್ ನಟನೆಯ ‘ಕೆಜಿಎಫ್’ ಚಿತ್ರಗಳು ಒಟ್ಟಿಗೆ ತೆರೆಗೆ ಬಂದವು. ಈ ವೇಳೆ ‘ಕೆಜಿಎಫ್’ ಸಿನಿಮಾ ಗೆದ್ದು ಬೀಗಿತ್ತು. ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ. 2022 ಬಾಲಿವುಡ್ ಪಾಲಿಗೆ ಉತ್ತಮವಾಗಿರಲಿಲ್ಲ. ರಿಲೀಸ್ ಆದ ನೂರಾರು ಸಿನಿಮಾಗಳ ಪೈಕಿ ಗೆದ್ದಿದ್ದು ಕೆಲವೇ ಕೆಲವು ಚಿತ್ರಗಳು ಮಾತ್ರ. ಈ ವರ್ಷದ ಆರಂಭದಲ್ಲಿ ‘ಪಠಾಣ್’ ಗೆದ್ದರೆ ಬಾಲಿವುಡ್ಗೆ ಹೊಸ ಹುಮ್ಮಸ್ಸು ಸಿಗಲಿದೆ. ಶಾರುಖ್ ಅಭಿನಯದ ‘ಹ್ಯಾಪಿ ನ್ಯೂ ಇಯರ್’ ಸಿನಿಮಾ ಮೊದಲ ದಿನ 44 ಕೋಟಿ ರೂಪಾಯಿ ಗಳಿಸಿತ್ತು. ‘ಚೆನ್ನೈ ಎಕ್ಸ್ಪ್ರೆಸ್’ 33.12 ಕೋಟಿ ರೂ ಬಾಚಿಕೊಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 20 January 23