100 ಕೋಟಿ ರೂ. ಸಂಭಾವನೆ ಪಡೆಯುವ ಬಗ್ಗೆ ನಟ ಅಕ್ಷಯ್ ಕುಮಾರ್​​ ಅಭಿಪ್ರಾಯ ಏನು?

ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಗೆಲುವು ಕಾಣುತ್ತಿಲ್ಲ. ಅಕ್ಷಯ್ ಕುಮಾರ್ ಸಂಭಾವನೆಯನ್ನು ಭರಿಸೋದು ಅನೇಕ ನಿರ್ಮಾಪಕರಿಗೆ ಕಷ್ಟ ಆಗುತ್ತಿದೆ.

100 ಕೋಟಿ ರೂ. ಸಂಭಾವನೆ ಪಡೆಯುವ ಬಗ್ಗೆ ನಟ ಅಕ್ಷಯ್ ಕುಮಾರ್​​ ಅಭಿಪ್ರಾಯ ಏನು?
ಅಕ್ಷಯ್ ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Jan 23, 2023 | 5:54 PM

ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಬೇಡಿಕೆಯ ನಟ. ಅವರ ಸಿನಿಮಾಗೆ ಬಂಡವಾಳ ಹೂಡಿದರೆ ನಷ್ಟ ಆಗುವುದಿಲ್ಲ ಎಂಬ ಅಭಿಪ್ರಾಯ ಇತ್ತು. ಆದರೆ, ಇತ್ತೀಚೆಗೆ ಈ ಅಭಿಪ್ರಾಯ ಬದಲಾಗಿದೆ. ಅವರ ಸಿನಿಮಾಗಳು ಸತತವಾಗಿ ಸೋಲು ಕಾಣುತ್ತಿವೆ. ಆದರೆ, ಅಕ್ಷಯ್ ಕುಮಾರ್ ಅವರು ಪಡೆಯುವ ಸಂಭಾವನೆ ಕಡಿಮೆ ಆಗಿಲ್ಲ. ಪ್ರತಿ ಚಿತ್ರಕ್ಕೆ ಅವರು 50-100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಗೆಲುವು ಕಾಣುತ್ತಿಲ್ಲ. ಅಕ್ಷಯ್ ಕುಮಾರ್ ಸಂಭಾವನೆಯನ್ನು ಭರಿಸೋದು ಅನೇಕ ನಿರ್ಮಾಪಕರಿಗೆ ಕಷ್ಟ ಆಗುತ್ತಿದೆ. ಆದರೆ, ಅಕ್ಷಯ್ ಕುಮಾರ್ ಅವರು ಸಂಭಾವನೆ ಕಡಿಮೆ ಮಾಡಿಕೊಂಡಿಲ್ಲ. ಇದೇ ಕಾರಣಕ್ಕೆ ಅನೇಕ ನಿರ್ಮಾಪಕರು ಅಕ್ಷಯ್ ಜತೆ ಸಿನಿಮಾ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. 100 ಕೋಟಿ ಸಂಭಾವನೆ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.

ಅಕ್ಷಯ್ ಕುಮಾರ್ ಅವರು ‘ಸೆಲ್ಫಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ಸೂಪರ್​ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಮ್ರಾನ್ ಹಶ್ಮಿ ಅವರು ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್​ ವೇಳೆ ಸಂಭಾವನೆ ಬಗ್ಗೆ ಅವರ ಪ್ರತಿಕ್ರಿಯೆ ಕೇಳಲಾಯಿತು. ‘ನನ್ನ ಪ್ರತಿಕ್ರಿಯೆ ಯಾವಾಗಲೂ ಉತ್ತಮವಾಗಿರುತ್ತದೆ’ ಎಂದಷ್ಟೇ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ
Image
Akshay Kumar: ಖ್ಯಾತ ನಿರ್ಮಾಪಕನ ಚಿತ್ರದಿಂದ ಅಕ್ಷಯ್ ಕುಮಾರ್ ಔಟ್​; ಕೈತಪ್ಪಿತು ದೊಡ್ಡ ಬಜೆಟ್ ಸಿನಿಮಾ
Image
Akshay Kumar: ಛತ್ರಪತಿ ಶಿವಾಜಿ ಪಾತ್ರದಲ್ಲಿ ಅಕ್ಷಯ್ ಕುಮಾರ್​; ಮರಾಠಿ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ

ಇದನ್ನೂ ಓದಿ: Akshay Kumar: ಖ್ಯಾತ ನಿರ್ಮಾಪಕನ ಚಿತ್ರದಿಂದ ಅಕ್ಷಯ್ ಕುಮಾರ್ ಔಟ್​; ಕೈತಪ್ಪಿತು ದೊಡ್ಡ ಬಜೆಟ್ ಸಿನಿಮಾ

ಈ ಮೊದಲು ಮಾತನಾಡಿದ್ದ ಅಕ್ಷಯ್ ಕುಮಾರ್ ಅವರು ತಮ್ಮ ಸಂಭಾವನೆಯಲ್ಲಿ ಶೇ. 30-40 ಸಂಭಾವನೆಯನ್ನು ತಗ್ಗಿಸಿಕೊಳ್ಳುವುದಾಗಿ ಹೇಳಿದ್ದರು. ಇದನ್ನು ಅವರು ಜಾರಿಗೆ ತಂದಿದ್ದಾರೋ ಅಥವಾ ಇಲ್ಲವೋ ತಿಳಿದಿಲ್ಲ.

‘ಸೆಲ್ಫಿ’ ಸಿನಿಮಾ ಫೆಬ್ರವರಿ 24ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದೆ. 2022ರಲ್ಲಿ ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಉತ್ತಮ ಬಿಸ್ನೆಸ್ ಮಾಡಿಲ್ಲ. ಈ ವರ್ಷ ಅವರ ನಟನೆಯ ಹಲವು ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಅವು ಉತ್ತಮ ರೀತಿಯಲ್ಲಿ ಕಲೆಕ್ಷನ್​ ಮಾಡಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ