Vivek Agnihotri: ಹೆಡ್ಲೈನ್ ಓದಿ ಯಾಮಾರಿದ ವಿವೇಕ್ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇ ಬೇರೆ
Anurag Kashyap | Kantara Movie: ಅನೇಕ ವಿಚಾರಗಳ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಇದರಿಂದ ಅವರು ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಕನ್ನಡದ ‘ಕಾಂತಾರ’ ಸಿನಿಮಾ (Kantara Movie) ಬಗ್ಗೆ ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಈ ಚಿತ್ರವನ್ನು ಅನೇಕ ಸೆಲೆಬ್ರಿಟಿಗಳು ಕೊಂಡಾಡಿದ್ದಾರೆ. ಎಲ್ಲ ಭಾಷೆಯ ಗಡಿಯನ್ನು ಮೀರಿ ಈ ಸಿನಿಮಾ ಯಶಸ್ವಿ ಆಗಿದ್ದಕ್ಕೆ ಕಾರಣ ಏನು ಎಂದು ಹಲವರು ವಿಶ್ಲೇಷಣೆ ಮಾಡುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಸುಬಿನ ಬಗ್ಗೆ ದೇಶಾದ್ಯಂತ ಮೆಚ್ಚುಗೆ ಮಾತುಗಳು ಕೇಳಿಬಂದಿವೆ. ಇದೇ ವಿಚಾರದಲ್ಲಿ ಚರ್ಚೆ ಮಾಡುವಾಗ ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅವರ ಮಾತುಗಳಿಗೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಹಾಗೆ ವಿರೋಧಿಸಿದವರಲ್ಲಿ ವಿವೇಕ್ ಅಗ್ನಿಹೋತ್ರಿ (Vivek Agnihotri) ಕೂಡ ಪ್ರಮುಖರು. ವಿಪರ್ಯಾಸ ಏನೆಂದರೆ, ಅನುರಾಗ್ ಕಶ್ಯಪ್ ಹೇಳಿದ್ದೇ ಒಂದು, ಪ್ರಕಟ ಆಗಿದ್ದು ಮತ್ತೊಂದು!
ಇತ್ತೀಚೆಗೆ ಮಾಧ್ಯಮವೊಂದರ ಸಂವಾದದಲ್ಲಿ ಅನುರಾಗ್ ಕಶ್ಯಪ್ ಭಾಗವಹಿಸಿದ್ದರು. ಆ ವೇಳೆ ಅವರು ದಕ್ಷಿಣ ಭಾರತದ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡಿದ್ದರು. ‘ಕಾಂತಾರ’ ಮತ್ತು ‘ಪುಷ್ಪ’ ಸಿನಿಮಾಗಳನ್ನು ಕಾಪಿ ಮಾಡಿದರೆ ಅಂಥವರು ಯಶಸ್ಸು ಕಾಣುವುದಿಲ್ಲ ಎಂದು ಅವರು ಹೇಳಿದ್ದರು. ಅವರ ಈ ಹೇಳಿಕೆಯನ್ನು ಮಾಧ್ಯಮವೊಂದರಲ್ಲಿ ತಿರುಚಿ ಹೆಡ್ಲೈನ್ ನೀಡಲಾಗಿದೆ. ‘ಕಾಂತಾರ ಹಾಗೂ ಪುಷ್ಪ ರೀತಿಯ ಸಿನಿಮಾಗಳು ಚಿತ್ರರಂಗವನ್ನು ನಾಶ ಮಾಡುತ್ತಿವೆ’ ಎಂಬ ತಲೆಬರಹ ನೀಡಿ ಸುದ್ದಿ ಪ್ರಕಟ ಮಾಡಲಾಗಿದೆ.
ಇದನ್ನೂ ಓದಿ: Vivek Agnihotri: ಶಾರುಖ್ ನಟನೆಯ ‘ಬೇಷರಂ ರಂಗ್’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ
ಕೇವಲ ಈ ಹೆಡ್ಲೈನ್ ಓದಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಇದನ್ನು ನಾನು ಖಂಡಿತಾ ಒಪ್ಪುವುದಿಲ್ಲ. ನೀವು ಒಪ್ಪುತ್ತೀರಾ’ ಎಂಬ ಪ್ರಶ್ನೆಯೊಂದಿಗೆ ಅವರು ಟ್ವೀಟ್ ಮಾಡಿದ್ದಾರೆ. ಪೂರ್ತಿ ಸುದ್ದಿ ಓದದೇ ಕೇವಲ ತಪ್ಪಾದ ತಲೆಬರಹವನ್ನು ಓದಿಕೊಂಡು ಟೀಕೆ ಮಾಡಿದ ವಿವೇಕ್ ಅಗ್ನಿಹೋತ್ರಿಗೆ ಜನರು ಬುದ್ಧಿಮಾತು ಹೇಳಿದ್ದಾರೆ.
ಇದನ್ನೂ ಓದಿ: Vivek Agnihotri: ‘ಸತ್ಯ ಅಲ್ಲ ಅಂತ ಸಾಬೀತಾದ್ರೆ ಸಿನಿಮಾ ಮಾಡೋದು ಬಿಟ್ಟು ಬಿಡ್ತೀನಿ’; ವಿವೇಕ್ ಅಗ್ನಿಹೋತ್ರಿ ಸವಾಲು
ಅನೇಕ ವಿಚಾರಗಳ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಇದರಿಂದ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ಹೊಸ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಅದರ ಬಗ್ಗೆಯೂ ಪರೋಕ್ಷವಾಗಿ ಅವರು ವ್ಯಂಗ್ಯವಾಡಿದ್ದಾರೆ. ಈ ವಿಚಾರದ ಬಗ್ಗೆ ಪರ-ವಿರೋಧದ ಚರ್ಚೆ ಆಗುತ್ತಿದೆ.
I totally totally totally disagree with the views of Bollywood’s one & only Milord.
Do you agree? pic.twitter.com/oDdAsV8xnx
— Vivek Ranjan Agnihotri (@vivekagnihotri) December 13, 2022
‘ಮೊದಲೆಲ್ಲ ಇನ್ಸ್ಟಾಗ್ರಾಮ್ ರೀಲ್ಸ್ ನೋಡಿದರೆ ಬಾಲಿವುಡ್ ಹಾಡಿನ ಕೆಟ್ಟ ಕಾಪಿ ಎನಿಸುತ್ತಿತ್ತು. ಈಗ ಬಾಲಿವುಡ್ ಹಾಡುಗಳೇ ಇನ್ಸ್ಟಾಗ್ರಾಮ್ ರೀಲ್ಸ್ನ ಕೆಟ್ಟ ಕಾಪಿ ರೀತಿ ಕಾಣಿಸುತ್ತಿವೆ’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ. ಇದು ‘ಬೇಷರಂ ರಂಗ್..’ ಹಾಡಿನ ಕುರಿತಾಗಿಯೇ ಹೇಳಿರುವುದು ಎಂದು ನೆಟ್ಟಿಗರು ಊಹಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Wed, 14 December 22