Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ

Kangana Ranaut | Kashmir: ಕಂಗನಾ ರಣಾವತ್​ ಜೊತೆ ಖ್ಯಾತ ನಿರ್ದೇಶಕ ಮಧುರ್​ ಭಂಡಾರ್ಕರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಷಯ ಕೇಳಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
ಕಂಗನಾ ರಣಾವತ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 03, 2022 | 8:20 AM

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಈ ವರ್ಷ ಮಾರ್ಚ್​ ತಿಂಗಳಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಬಾಕ್ಸ್​ ಆಫೀಸ್​ನಲ್ಲಿ 250 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಗಳಿಸಿದ್ದು ಮಾತ್ರವಲ್ಲದೇ ದೇಶಾದ್ಯಂತ ಸಂಚಲನ ಮೂಡಿಸುವಲ್ಲಿ ಆ ಚಿತ್ರ ಯಶಸ್ವಿ ಆಯಿತು. ಈಗ ಕಾಶ್ಮೀರದ (Kashmir) ಇನ್ನಷ್ಟು ಕಥೆಯನ್ನು ಸಿನಿಮಾ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಖ್ಯಾತ ನಿರ್ದೇಶಕ ಮಧುರ್​ ಭಂಡಾರ್ಕರ್​ (Madhur Bhandarkar) ಅವರು ಇಂಥದ್ದೊಂದು ಸಿನಿಮಾ ಮಾಡುವ ಬಗ್ಗೆ ಸುದ್ದಿ ಕೇಳಿಬಂದಿದೆ. ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಗಾಯಕಿಯ ಕಥೆ ಈ ಸಿನಿಮಾದಲ್ಲಿ ಇರಲಿದೆ. ನಟಿ ಕಂಗನಾ ರಣಾವತ್​ (Kangana Ranaut) ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡದಿಂದ ಈವರೆಗೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

‘ಫ್ಯಾಷನ್​’, ‘ಹೀರೋಯಿನ್​’, ಕ್ಯಾಲೆಂಡರ್​ ಗರ್ಲ್ಸ್​’, ‘ಇಂದೂ ಸರ್ಕಾರ್​’, ‘ಪೇಜ್​ 3’ ಮುಂತಾದ ಸಿನಿಮಾಗಳನ್ನು ಮಾಡಿದ ಖ್ಯಾತಿ ಮಧುರ್​ ಭಂಡಾರ್ಕರ್​ ಅವರಿಗೆ ಸಲ್ಲುತ್ತದೆ. ಈಗ ಅವರು ‘ಬಬ್ಲಿ ಬೌನ್ಸರ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನಂತರ ಕಂಗನಾ ರಣಾವತ್​ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದೆ.

ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಆದರೆ ಕಂಗನಾ ರಣಾವತ್​ ಅವರಾಗಲೀ, ಮಧುರ್​ ಭಂಡಾರ್ಕರ್​ ಅವರಾಗಲೀ ಈ ಪ್ರಾಕೆಜ್ಟ್​ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇನ್ನೊಂದು ಮೂಲದ ಪ್ರಕಾರ, ಈ ಚಿತ್ರ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ. ಯಾಕೆಂದರೆ, ಕಂಗನಾ ರಣಾವತ್​ ಅವರ ಇತ್ತೀಚಿನ ಚಿತ್ರಗಳು ಗೆದ್ದಿಲ್ಲ. ನಾಯಕಿ ಪ್ರಧಾನ ಕಥೆಯನ್ನು ಆಯ್ಕೆ ಮಾಡಿಕೊಂಡ ಅವರಿಗೆ ಸೂಕ್ತ ಫಲ ಸಿಗುತ್ತಿಲ್ಲ. ‘ಪಂಗಾ’, ‘ಧಾಕಡ್​’ ಮುಂತಾದ ಚಿತ್ರಗಳು ಸೋತಿವೆ. ಹಾಗಾಗಿ ಮಧುರ್​ ಭಂಡಾರ್ಕರ್​ ಕೊಂಚ ಹಿಂದೇಟು ಹಾಕುತ್ತಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ.

ಇದನ್ನೂ ಓದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​
Image
ನಿರ್ಮಾಪಕರ​ ಹೊಟ್ಟೆ ಮೇಲೆ ಹೊಡೆದ ಕಂಗನಾ; ಒಟಿಟಿಯಲ್ಲೂ ‘ಧಾಕಡ್​’ ಚಿತ್ರಕ್ಕೆ ಬೇಡಿಕೆ ಇಲ್ಲ

ಕಂಗನಾ ರಣಾವತ್​ ಅವರು ಸದ್ಯ ‘ಎಮರ್ಜೆನ್ಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಇಂದಿರಾ ಗಾಂಧಿ ಪಾತ್ರವನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಇದರ ಟೀಸರ್​ ಮತ್ತು ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ. ಆ ಚಿತ್ರದ ಕೆಲಸಗಳು ಮುಗಿದ ನಂತರವೇ ಅವರು ಮುಂದಿನ ಸಿನಿಮಾದ ಬಗ್ಗೆ ಅನೌನ್ಸ್​ ಮಾಡುವ ನಿರೀಕ್ಷೆ ಇದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ