ಒಂದು ಚಿತ್ರಕ್ಕಾಗಿ 144 ಕೋಟಿ ರೂ. ಬೇಡಿಕೆ ಇಟ್ಟ ಅಕ್ಷಯ್ ಕುಮಾರ್; ನಿರ್ಮಾಪಕರು ಏನಂದ್ರು?
ಈ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಹೆಚ್ಚಿನ ಕಾಲ್ಶೀಟ್ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು 144 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು.
ಅಕ್ಷಯ್ ಕುಮಾರ್ (Akshay Kumar) ಅವರು ಇಷ್ಟು ದಿನ ಬಾಲಿವುಡ್ನಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದ್ದರು. ಕಡಿಮೆ ಬಜೆಟ್ನಲ್ಲಿ ಸಿದ್ಧಗೊಳ್ಳುವ ಅವರ ಸಿನಿಮಾಗಳು ಬಾಲಿವುಡ್ನಲ್ಲಿ ಕಮಾಲ್ ಮಾಡುತ್ತಿತ್ತು. ಆದರೆ, ಇತ್ತೀಚೆಗೆ ಚಿತ್ರಣ ಬದಲಾಗಿದೆ. ಅವರ ಸಿನಿಮಾಗಳು ಸಾಲು ಸಾಲು ಸೋಲು ಕಾಣುತ್ತಿವೆ. ಆದಾಗ್ಯೂ ಅಕ್ಷಯ್ ಕುಮಾರ್ ಅವರು ಸಂಭಾವನೆ ಕಡಿಮೆ ಮಾಡಿಕೊಳ್ಳುತ್ತಿಲ್ಲ. ಅಕ್ಷಯ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ 144 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ನಿರ್ಮಾಪಕರು ಸಿನಿಮಾವನ್ನೇ ಹೋಲ್ಡ್ನಲ್ಲಿ ಇಟ್ಟಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಈಗ ನಿರ್ಮಾಪಕರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಅಲಿ ಅಬ್ಬಾಸ್ ನಿರ್ದೇಶನ ಮಾಡುತ್ತಿದ್ದಾರೆ. ಜಾಕಿ ಭಗ್ನಾನಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಒಟ್ಟಾಗಿ ನಟಿಸುತ್ತಿದ್ದಾರೆ. ಇದು ಆ್ಯಕ್ಷನ್ ಸಿನಿಮಾ. ಈ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಹೆಚ್ಚಿನ ಕಾಲ್ಶೀಟ್ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು 144 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಆದರೆ, ಇಷ್ಟೊಂದು ಹಣ ನೀಡಲು ನಿರ್ಮಾಪಕರು ನೋ ಎಂದಿದ್ದರು ಎಂದು ವರದಿ ಆಗಿತ್ತು. ಅಷ್ಟೇ ಅಲ್ಲ ಈ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ತಮ್ಮ ಶೇ.50 ರಷ್ಟು ಸಂಭಾವನೆಯನ್ನು ಇಳಿಸಿಕೊಂಡಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಮಾಡಿದ ವರದಿಯ ಟ್ವೀಟ್ಅನ್ನು ಜಾಕಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ಈ ವರದಿ ಸುಳ್ಳು ಎಂಬುದು ನಿರ್ಮಾಪಕರ ಮೂಲಗಳ ಮಾಹಿತಿ. ಆ್ಯಕ್ಷನ್ ಪ್ಯಾಕ್ ಧಮಾಕಾ ನೋಡಲು ರೆಡಿ ಆಗಿ’ ಎಂದು ಜಾಕಿ ಬರೆದುಕೊಂಡಿದ್ದಾರೆ. ಈ ವಿಚಾರ ಕೇಳಿ ಅಕ್ಷಯ್ ಕುಮಾರ್ ಫ್ಯಾನ್ಸ್ ಖುಷಿಯಾಗಿದ್ದಾರೆ.
Absolutely InCorrect !! Source-The Producer ( i am sure i am reliable ?) Get ready for this action packed Dhamaka which was always on track? https://t.co/NtSwiIjgdX
— Jackky Bhagnani (@jackkybhagnani) August 2, 2022
ಇದನ್ನೂ ಓದಿ: ‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರಿಗೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ ಸಿಕ್ಕಿತ್ತು. ಅತಿ ಹೆಚ್ಚು ಟ್ಯಾಕ್ಸ್ ಪಾವತಿ ಮಾಡಿದ ಸೆಲೆಬ್ರಿಟಿ ಎಂಬ ಖ್ಯಾತಿ ಅಕ್ಷಯ್ ಕುಮಾರ್ಗೆ ಸಿಕ್ಕಿದೆ. ಈ ಕಾರಣಕ್ಕೆ ಅವರಿಗೆ ಆದಾಯ ತೆರಿಗೆ ಇಲಾಖೆ ವಿಶೇಷ ಗೌರವ ಸಲ್ಲಿಕೆ ಮಾಡಿತ್ತು.