ಅರ್ಜುನ್ ಕಪೂರ್​ಗಿಂತ 12 ವರ್ಷ ದೊಡ್ಡವರು ಮಲೈಕಾ; ನಟಿಯ ವಿಚ್ಛೇದನಕ್ಕೆ ಕಾರಣವಾಗಿದ್ದು ಅಫೇರ್?

Arjun Kapoor Birthday: ಅರ್ಬಾಜ್ ಹಾಗೂ ಮಲೈಕಾ ದಾಂಪತ್ಯ ಜೀವನ ನಡೆಸುತ್ತಿದ್ದ ಸಂದರ್ಭದಲ್ಲೇ ಅರ್ಜುನ್ ಕಪೂರ್​ಗೆ ನಟಿಯ ಮೇಲೆ ಒಂದು ಅಫೆಕ್ಷನ್ ಬೆಳೆದಿತ್ತು.

ಅರ್ಜುನ್ ಕಪೂರ್​ಗಿಂತ 12 ವರ್ಷ ದೊಡ್ಡವರು ಮಲೈಕಾ; ನಟಿಯ ವಿಚ್ಛೇದನಕ್ಕೆ ಕಾರಣವಾಗಿದ್ದು ಅಫೇರ್?
ಅರ್ಜುನ್ ಕಪೂರ್​ಗಿಂತ 12 ವರ್ಷ ದೊಡ್ಡವರು ಮಲೈಕಾ
TV9kannada Web Team

| Edited By: Rajesh Duggumane

Jun 26, 2022 | 8:21 AM

ಅರ್ಜುನ್ ಕಪೂರ್ (Arjun Kapoor) ಅವರು ಇಂದು 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಸಿನಿಮಾಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಅವರು ಹೋದಲ್ಲಿ ಬಂದಲ್ಲಿ ಸುದ್ದಿ ಆಗೋದು ಪ್ರೇಯಸಿ ಮಲೈಕಾ ಅರೋರ (Malaika Arora) ಅವರ ಜತೆಗಿನ ಪ್ರೀತಿ-ಪ್ರೇಮದ ವಿಚಾರದಿಂದ. ವಯಸ್ಸಿನಲ್ಲಿ ಮಲೈಕಾಗಿಂತ ಅರ್ಜುನ್ ಕಪೂರ್​ 12 ವರ್ಷ ಚಿಕ್ಕವರು. ಆದಾಗ್ಯೂ ಇವರ ಪ್ರೀತಿಗೆ ವಯಸ್ಸು ಅಡ್ಡಿ ಆಗಿಲ್ಲ. ಅರ್ಜುನ್ ಕಪೂರ್ ಅವರು ಮಲೈಕಾಗೆ ತೋರುವ ಪ್ರೀತಿ-ಕಾಳಜಿ ಬಗ್ಗೆ ಅನೇಕರಿಗೆ ಖುಷಿ ಇದೆ. ಕೆಲವರು ಈ ಬಗ್ಗೆ ಟ್ರೋಲ್ ಮಾಡುತ್ತಾರೆ. ಹಾಗಾದರೆ, ಅರ್ಜುನ್ ಕಪೂರ್ ಹಾಗೂ ಮಲೈಕಾ ನಡುವೆ ಪ್ರೀತಿ ಮೂಡಿದ್ದು ಹೇಗೆ? ಇಲ್ಲಿದೆ ಉತ್ತರ.

ಅರ್ಜುನ್ ಕಪೂರ್ ಅವರು ಸ್ಟಾರ್ ಕಿಡ್. ಖ್ಯಾತ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರ. ಆರಂಭದಲ್ಲಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಜತೆ ಅರ್ಜುನ್ ಸುತ್ತಾಟ ನಡೆಸುತ್ತಿದ್ದರು. ಇವರ ಸಂಬಂಧ ಮುರಿದುಬಿತ್ತು. ಈ ವೇಳೆ ಅರ್ಜುನ್​ ಕಪೂರ್​ಗೆ ಕಂಡಿದ್ದು ಸಲ್ಲು ಸಹೋದರ ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ. ಅರ್ಬಾಜ್ ಹಾಗೂ ಮಲೈಕಾ ದಾಂಪತ್ಯ ಜೀವನ ನಡೆಸುತ್ತಿದ್ದ ಸಂದರ್ಭದಲ್ಲೇ ಅರ್ಜುನ್ ಕಪೂರ್​ಗೆ ನಟಿಯ ಮೇಲೆ ಒಂದು ಅಫೆಕ್ಷನ್ ಬೆಳೆದಿತ್ತು.

ಅರ್ಜುನ್ ಕಪೂರ್ ಆಗತಾನೇ ಬಾಲಿವುಡ್​ನಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಇದರ ಜತೆ ಮಲೈಕಾ ಜತೆಗಿನ ಬಾಂಧವ್ಯ ಗಟ್ಟಿ ಆಗುತ್ತಾ ಹೋಗುತ್ತಿತ್ತು. ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. 2016ರಲ್ಲಿ ಮಲೈಕಾ ಮತ್ತು ಅರ್ಬಾಜ್ ಅವರ 19 ವರ್ಷಗಳ ದಾಂಪತ್ಯ ಕೊನೆ ಆಯಿತು. ಅರ್ಜುನ್ ಹಾಗೂ ಮಲೈಕಾ ಸುತ್ತಾಟ ಆರಂಭಿಸಿದ್ದರಿಂದಲೇ ವಿಚ್ಛೇದನ ಆಯಿತು ಎನ್ನುವ ಆರೋಪ ಕೂಡ ಇದೆ. ಆದರೆ, ‘ನಮ್ಮ ನಡುವೆ ಯಾವುದೇ ಪ್ರೀತಿ ಇಲ್ಲ, ನಮ್ಮ ಮಧ್ಯೆ ಇರುವುದು ಒಳ್ಳೆಯ ಫ್ರೆಂಡ್​ಶಿಪ್’ ಎಂದು ಈ ಜೋಡಿ ಹೇಳುತ್ತಾ ಬಂತು.

ಡಿವೋರ್ಸ್ ಪಡೆದ ನಂತರದಲ್ಲಿ ಮಲೈಕಾ ಹಾಗೂ ಅರ್ಜುನ್ ಕಪೂರ್ ಪರಸ್ಪರ ಭೇಟಿ ಆಗುವುದು ಹೆಚ್ಚಿತು. 2018ರಲ್ಲಿ ಈ ಜೋಡಿ ಒಟ್ಟಾಗಿ ಕ್ಯಾಮೆರಾಗೆ ಪೋಸ್ ನೀಡಿ ಗಮನ ಸೆಳೆಯಿತು. 2019ರಲ್ಲಿ ಮಲೈಕಾ ‘ಕಾಫಿ ವಿತ್ ಕರಣ್​’ ಶೋಗೆ ಬಂದಿದ್ದರು. ಈ ವೇಳೆ ಕರಣ್ ಜೋಹರ್ ಎದುರು ಅರ್ಜುನ್ ಕಪೂರ್ ಅವರನ್ನು ಪ್ರೀತಿಸುತ್ತಿರುವ ವಿಚಾರದ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡಿದ್ದರು. ಈಗ ಅರ್ಜುನ್-ಮಲೈಕಾ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಪ್ರೀತಿ ವಿಚಾರವನ್ನು ಅಧಿಕೃತ ಮಾಡಲಾಗಿದೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಲೈಕಾ- ಅರ್ಜುನ್ ಮದುವೆಯ ಬಗ್ಗೆ ಜೋರಾಯ್ತು ಗಾಸಿಪ್; ರೂಮರ್​ಗಳಿಗೆ ನಟ ನೀಡಿದ ಉತ್ತರವೇನು?

ಇದನ್ನೂ ಓದಿ

‘ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆ ಇದೆ’; ಅರ್ಜುನ್ ಕಪೂರ್ ಬಗ್ಗೆ ಮಲೈಕಾ ಮಾತು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada