Shah Rukh Khan: ಎರಡು ದಿನಕ್ಕೆ ವಿಶ್ವಾದ್ಯಂತ 219 ಕೋಟಿ ರೂ. ಗಳಿಸಿದ ‘ಪಠಾಣ್’; ಶಾರುಖ್ ಚಿತ್ರಕ್ಕೆ ಜಯಭೇರಿ
Pathan Movie World-wide Box Office Collection: ಅಂದುಕೊಂಡಿದ್ದಕ್ಕಿಂತಲೂ ಉತ್ತಮ ರೀತಿಯಲ್ಲಿ ‘ಪಠಾಣ್’ ಸಿನಿಮಾಗೆ ಕಲೆಕ್ಷನ್ ಆಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಶಾರುಖ್ ಖಾನ್ ಚಿತ್ರ ಅಬ್ಬರಿಸುತ್ತಿದೆ.
Updated on: Jan 27, 2023 | 8:11 PM

ನಟ ಶಾರುಖ್ ಖಾನ್ ಅವರು ಗೆದ್ದು ಬೀಗಿದ್ದಾರೆ. ಅವರು ನಟಿಸಿರುವ ‘ಪಠಾಣ್’ ಚಿತ್ರ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಸಖತ್ ಕಮಾಯಿ ಮಾಡುತ್ತಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.

ಮೊದಲ ದಿನ ವಿಶ್ವಾದ್ಯಂತ ‘ಪಠಾಣ್’ ಚಿತ್ರಕ್ಕೆ 106 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. 2ನೇ ದಿನ 113.60 ಕೋಟಿ ರೂಪಾಯಿ ಆಗಿದೆ. ಎರಡು ದಿನಕ್ಕೆ ಒಟ್ಟು 219.60 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.

ಇದು ಶಾರುಖ್ ಖಾನ್ ಅವರ ಕಮ್ಬ್ಯಾಕ್ ಸಿನಿಮಾ. ಆ ಕಾರಣದಿಂದ ಅಭಿಮಾನಿಗಳಿಗೆ ನಿರೀಕ್ಷೆ ಜೋರಾಗಿತ್ತು. ನಿರೀಕ್ಷೆಯ ಮಟ್ಟವನ್ನು ತಲುಪುವ ರೀತಿಯಲ್ಲಿ ‘ಪಠಾಣ್’ ಚಿತ್ರ ಮೂಡಿಬಂದಿದೆ. ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

‘ಪಠಾಣ್’ ಸಿನಿಮಾಗೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಮತ್ತು ಶಾರುಖ್ ಖಾನ್ ಕಾಂಬಿನೇಷನ್ಗೆ ಜನಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ ಅವರು ವಿಲನ್ ಆಗಿ ನಟಿಸಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರು ‘ಪಠಾಣ್’ ಚಿತ್ರದ ಮೂಲಕ ನಾಲ್ಕನೇ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ. ಅವರ ಅಭಿಮಾನಿಗಳಿಗೆ ಈ ಸಿನಿಮಾ ಮನರಂಜನೆಯ ರಸದೌತಣ ನೀಡಿದೆ. ಎಲ್ಲೆಡೆ ಹೌಸ್ ಪುಲ್ ಆಗುತ್ತಿದೆ.
























