AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಸಿನಿಮಾ ಕ್ರೇಜ್: ‘ಗೈಟಿ ಗ್ಯಾಲಕ್ಸಿ’ ಚಿತ್ರಮಂದಿರದಲ್ಲಿ ನಿರ್ಮಾಣ ಆಗಲಿದೆ ಹೊಸ ಇತಿಹಾಸ

ಮುಂಬೈನ ‘ಗೈಟಿ ಗ್ಯಾಲಕ್ಸಿ’ ಥಿಯೇಟರ್​ನಲ್ಲಿ ಬೆಳಗ್ಗೆ 6 ಗಂಟೆಗೆ ‘ಜವಾನ್​’ ಸಿನಿಮಾದ ಮೊದಲ ಶೋ ಆಯೋಜನೆ ಮಾಡಲಾಗುತ್ತಿದೆ. ಶಾರುಖ್ ಖಾನ್​ ಅವರ ‘ಎಸ್.ಆರ್.ಕೆ. ಯೂನಿವರ್ಸ್’ ಅಭಿಮಾನಿ ಬಳಗ ಇದರ ಉಸ್ತುವಾರಿ ವಹಿಸಿಕೊಂಡಿದೆ. ಈ ಚಿತ್ರಮಂದಿರದ 51 ವರ್ಷಗಳ ಇತಿಹಾಸದಲ್ಲಿ ಮುಂಜಾನೆ 6 ಗಂಟೆಗೆ ಸಿನಿಮಾ ಪ್ರದರ್ಶನ ಆಗುತ್ತಿರುವುದು ಇದೇ ಮೊದಲು!

‘ಜವಾನ್’ ಸಿನಿಮಾ ಕ್ರೇಜ್: ‘ಗೈಟಿ ಗ್ಯಾಲಕ್ಸಿ’ ಚಿತ್ರಮಂದಿರದಲ್ಲಿ ನಿರ್ಮಾಣ ಆಗಲಿದೆ ಹೊಸ ಇತಿಹಾಸ
ಶಾರುಖ್​ ಖಾನ್​
TV9 Web
| Edited By: |

Updated on: Aug 29, 2023 | 7:25 PM

Share

ಬಾಲಿವುಡ್ ನಟ ಶಾರುಖ್ ಖಾನ್​ (Shah Rukh Khan) ಅವರ ಹೊಸ ಸಿನಿಮಾ ‘ಜವಾನ್’ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಸೆಪ್ಟೆಂಬರ್ 7ರಂದು ಬಿಡುಗಡೆಗೊಳ್ಳುವ ಈ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಸಿನಿಮಾದ ಬಿಡುಗಡೆಗೂ ಮುನ್ನವೇ ಸಖತ್ ಟ್ರೆಂಡ್ ಸೃಷ್ಟಿ ಆಗಿದೆ. ಜವಾನ್’ (Jawan) ಚಿತ್ರದ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ನೋಡುತ್ತಿದ್ದರೆ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಶಾರುಖ್ ಖಾನ್​ ಅವರಿಗೆ ಇರುವ ಅಭಿಮಾನಿ ಬಳಗ ತುಂಬ ದೊಡ್ಡದು. ಈಗ ಅವರ ಅಭಿಮಾನಿ ಸಂಘವು ತಮ್ಮ ನೆಚ್ಚಿನ ನಟನಿಗಾಗಿ ಹೊಸ ದಾಖಲೆ ಬರೆಯಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಮುಂಬೈನ ‘ಗೈಟಿ ಗ್ಯಾಲಕ್ಸಿ’ (Gaiety Galaxy) ಥಿಯೇಟರ್​ನಲ್ಲಿ ಬೆಳಗ್ಗೆ 6 ಗಂಟೆಗೆ ‘ಜವಾನ್​’ ಸಿನಿಮಾದ ಮೊದಲ ಶೋ ಆಯೋಜನೆ ಮಾಡಲಾಗುತ್ತಿದೆ. ಈ ರೀತಿ 6 ಗಂಟೆಗೆ ಪ್ರದರ್ಶನ ಕಾಣುತ್ತಿರುವ ಬಾಲಿವುಡ್​ನ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ‘ಜವಾನ್’ ಸಿನಿಮಾ ಪಾತ್ರವಾಗಲಿದೆ. ‘ಗೈಟಿ ಗ್ಯಾಲಕ್ಸಿ’ ಚಿತ್ರಮಂದಿರದ 51 ವರ್ಷಗಳ ಇತಿಹಾಸದಲ್ಲಿ ಈ ರೀತಿ ಆಗುತ್ತಿರುವುದು ಇದೇ ಮೊದಲು!

ಶಾರುಖ್ ಖಾನ್​ ಅವರ ‘ಎಸ್.ಆರ್.ಕೆ. ಯೂನಿವರ್ಸ್’ ಎಂಬ ಅಭಿಮಾನಿ ಬಳಗ ಈ ಕೆಲಸ ಮಾಡುತ್ತಿದೆ. ಗುರುವಾರ (ಸೆಪ್ಟೆಂಬರ್ 7) ‘ಗೈಟಿ ಗ್ಯಾಲಕ್ಸಿ’ ಚಿತ್ರಮಂದಿರದಲ್ಲಿ ಮುಂಜಾನೆ 6 ಗಂಟೆಗೆ ಫಸ್ಟ್ ಡೇ ಫಸ್ಟ್ ಶೋ ಆಯೋಜಿಸಿದೆ. ಇದೇ ಫ್ಯಾನ್ ಕ್ಲಬ್​ನವರು ‘ಪಠಾಣ್’ ಸಿನಿಮಾ ಬಿಡುಗಡೆ ಆದಾಗಲೂ ಹೀಗೆಯೇ ಸಂಭ್ರಮಿಸಿದ್ದರು. ಆ ಕುರಿತು ‘ಎಸ್.ಆರ್.ಕೆ. ಯೂನಿವರ್ಸ್’ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಈ ಹಿಂದೆ ಪಠಾಣ್ ಸಿನಿಮಾವನ್ನು ಬೆಳಿಗ್ಗೆ 9 ಗಂಟೆಗೆ ಪ್ರದರ್ಶನ ಮಾಡುವುದರ ಮೂಲಕ 51 ವರ್ಷಗಳಲ್ಲಿಯೇ ಮೊದಲ ಬಾರಿಗೆ ಇಂಥ ದಾಖಲೆ ಬರೆದಿದ್ದೆವು. ಈಗ ಮತ್ತೆ ಇತಿಹಾಸ ಬರೆಯುವ ಸಮಯ ಎದುರಾಗುತ್ತಿದೆ’ ಎಂದು ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ: ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಲಿದೆ ‘ಜವಾನ್’ ಟ್ರೇಲರ್? ದಿನಾಂಕ ತಿಳಿಸಿದ ಶಾರುಖ್ ಖಾನ್

‘ಜವಾನ್​’ ಸಿನಿಮಾದ ಟ್ರೈಲರ್ ಅನ್ನು ಶಾರುಖ್ ಖಾನ್​ ಅವರು ಆಗಸ್ಟ್ 31ರಂದು ದುಬೈನ ‘ಬುರ್ಜ್ ಖಲೀಫಾ’ ಕಟ್ಟಡದ ಮೇಲೆ ಬಿಡುಗಡೆಗೊಳಿಸಲಿದ್ದಾರೆ. ಶಾರುಖ್​ ಖಾನ್​ಗೆ ದುಬೈನಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಆಗಾಗ ಅವರು ದುಬೈಗೆ ಭೇಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಅವರು ದುಬೈ ಪ್ರವಾಸೋದ್ಯಮದ ರಾಯಭಾರಿಯೂ ಹೌದು. ಇಂದು (ಆಗಸ್ಟ್ 29) ‘ನಾಟ್ ರಾಮಯ್ಯ ವಸ್ತಾವಯ್ಯ’ ಸಾಂಗ್ ರಿಲೀಸ್ ಆಗುತ್ತಿದ್ದು, ಈಗಾಗಲೇ ‘ಜಿಂದಾ ಬಂದಾ’ ಹಾಡು ಜನರ ಗಮನ ಸೆಳೆದಿದೆ.

ಇದನ್ನೂ ಓದಿ: ‘ಜವಾನ್​ ಚಿತ್ರ 500 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಲಿದೆ’: ಭವಿಷ್ಯ ನುಡಿದ ಮನೋಜ್​ ದೇಸಾಯಿ

ಗೌರಿ ಖಾನ್ ಅವರು ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಮೂಲಕ ‘ಜವಾನ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರವು ಹಿಂದಿ, ತಮಿಳು, ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಬಹುನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾ 2023ರ ಆರಂಭದಲ್ಲಿ ಬಿಡುಗಡೆಗೊಂಡಿತ್ತು. ವಿವಾದದ ಮಧ್ಯೆಯೂ ಆ ಸಿನಿಮಾ ಭಾರಿ ಸದ್ದು ಮಾಡಿತ್ತು. ಅದೇ ರೀತಿ ‘ಜವಾನ್​’ ಕೂಡ ಸೂಪರ್​ ಹಿಟ್​ ಆಗಲಿದೆ ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.