ಪದೇಪದೇ ಕಿಡಿಕಾರುವ ಕಂಗನಾಗೂ ಪ್ರೀತಿ ತೋರಿದ ಕರಣ್​ ಜೋಹರ್​; ‘ಎಮರ್ಜೆನ್ಸಿ’ ನೋಡಲು ಕಾತರ

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾಗೆ ಸ್ವತಃ ಕಂಗನಾ ರಣಾವತ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ನ ಅನೇಕ ಖ್ಯಾತ ಕಲಾವಿದರು ಇದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಕರಣ್​ ಜೋಹರ್​ ಆಸಕ್ತಿ ತೋರಿಸಿದ್ದಾರೆ.

ಪದೇಪದೇ ಕಿಡಿಕಾರುವ ಕಂಗನಾಗೂ ಪ್ರೀತಿ ತೋರಿದ ಕರಣ್​ ಜೋಹರ್​; ‘ಎಮರ್ಜೆನ್ಸಿ’ ನೋಡಲು ಕಾತರ
ಕಂಗನಾ ರಣಾವತ್​, ಕರಣ್​ ಜೋಹರ್​
Follow us
ಮದನ್​ ಕುಮಾರ್​
|

Updated on: Aug 22, 2023 | 4:18 PM

ನಿರ್ಮಾಪಕ/ನಿರ್ದೇಶಕ ಕರಣ್​ ಜೋಹರ್ (Karan Johar) ಅವರನ್ನು ಕಂಡರೆ ನಟಿ ಕಂಗನಾ ರಣಾವತ್​ ಉರಿದು ಬೀಳುತ್ತಾರೆ. ಬಾಲಿವುಡ್​ನಲ್ಲಿ ಇರುವ ಅನೇಕ ಪಿಡುಗುಗಳಿಗೆ ಕರಣ್​ ಜೋಹರ್​ ಅವರೇ ಕಾರಣ ಎಂಬುದು ಕಂಗನಾ ವಾದ. ಹಿಂದಿ ಚಿತ್ರರಂಗದಲ್ಲಿ ನೆಪೋಟಿಸಂ ಮತ್ತು ಮೂವೀ ಮಾಫಿಯಾ ಬೆಳೆಯುವಲ್ಲಿ ಕರಣ್​ ಜೋಹರ್​ ಪಾತ್ರ ತುಂಬ ದೊಡ್ಡದಿದೆ ಎಂದು ಕಂಗನಾ ಆಗಾಗ ಹೇಳಿಕೊಂಡು ಬರುತ್ತಲೇ ಇದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಅವರಿಬ್ಬರ ನಡುವೆ ದ್ವೇಷದ ವಾತಾವರಣ ಮನೆ ಮಾಡಿದೆ. ಹಾಗಿದ್ದರೂ ಕೂಡ ಕಂಗನಾ ಅವರ ಎಮರ್ಜೆನ್ಸಿ’ (Emergency Movie) ಸಿನಿಮಾವನ್ನು ನೋಡಲು ಕರಣ್​ ಜೋಹರ್​ ಉತ್ಸಾಹ ತೋರಿಸಿದ್ದಾರೆ. ಅವರ ಈ ಹೇಳಿಕೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಇದಕ್ಕೆ ಕಂಗನಾ ರಣಾವತ್​ (Kangana Ranaut) ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇತ್ತೀಚೆಗೆ ‘ಎಕ್ಸ್​ಪ್ರೆಸ್​ ಅಡ್ಡಾ’ ಇವೆಂಟ್​ನಲ್ಲಿ ಕರಣ್​ ಜೋಹರ್​ ಭಾಗಿ ಆಗಿದ್ದರು. ಈ ವೇಳೆ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ರಾಜಕೀಯದ ಯಾವ ಸಂಗತಿಯನ್ನು ನೀವು ಸಿನಿಮಾದಲ್ಲಿ ನೋಡಲು ಬಯಸುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಕರಣ್​ ಜೋಹರ್​ ಅವರು, ‘ಎಮರ್ಜೆನ್ಸಿ ಕುರಿತು ಸಿನಿಮಾ ಬರುತ್ತಿದೆ. ಅದನ್ನು ನೋಡಲು ನಾನು ಕಾತರನಾಗಿದ್ದೇನೆ’ ಎಂದು ಹೇಳಿದ್ದಾರೆ. ಅಲ್ಲದೇ ‘ಗದರ್​ 2’ ಸಿನಿಮಾದ ಗೆಲುವನ್ನು ಅವರು ಕೊಂಡಾಡಿದ್ದಾರೆ.

ಇದನ್ನೂ ಓದಿ: ವಿಡಿಯೋ ಸಮೇತ ಕರಣ್​ ಜೋಹರ್​ ಬಣ್ಣ ಬಯಲು ಮಾಡಿದ ನಟಿ ಕಂಗನಾ ರಣಾವತ್​

ಕಂಗನಾ ರಣಾವತ್​ ಅವರು ಚಿತ್ರರಂಗದಲ್ಲಿ ಹಲವು ಬಗೆಯ ಪ್ರಯೋಗಗಳನ್ನು ಮಾಡುತ್ತಾರೆ. ಸೋಲು-ಗೆಲುವು ಎರಡನ್ನೂ ಅವರು ನೋಡಿದ್ದಾರೆ. ಬಾಲಿವುಡ್​ನಲ್ಲಿ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಕರಣ್​ ಜೋಹರ್​ ಅವರನ್ನು ಕಂಗನಾ ಪ್ರತಿ ಹಂತದಲ್ಲೂ ವಿರೋಧಿಸುತ್ತಾರೆ. ಯಾವ ವೇದಿಕೆ ಸಿಕ್ಕರೂ ಅವರು ಕಿಡಿಕಾರುತ್ತಾರೆ. ಹಾಗಿದ್ದರೂ ಕೂಡ ಕರಣ್​ ಜೋಹರ್​ ಅವರು ‘ಎಮರ್ಜೆನ್ಸಿ’ ಸಿನಿಮಾ ನೋಡಲು ಆಸಕ್ತಿ ತೋರಿಸಿದ್ದಾರೆ ಎಂಬುದು ವಿಶೇಷ.

ಇದನ್ನೂ ಓದಿ: ಚಂದ್ರಮುಖಿ ಅವತಾರದಲ್ಲಿ ಬಂದ ಕಂಗನಾ ರಣಾವತ್​; ಪೋಸ್ಟರ್​ ಕಂಡು ಅಭಿಮಾನಿಗಳು ಫಿದಾ

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾಗೆ ಸ್ವತಃ ಕಂಗನಾ ರಣಾವತ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ನ ಅನೇಕ ಖ್ಯಾತ ಕಲಾವಿದರು ಇದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಂದಿರಾ ಗಾಂಧಿಯ ಪಾತ್ರದಲ್ಲಿ ಕಂಗನಾ ರಣಾವತ್​ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟೀಸರ್​ ಗಮನ ಸೆಳೆದಿದೆ. ಈ ಸಿನಿಮಾದ ನಿರ್ಮಾಣದಲ್ಲೂ ಕಂಗನಾ ಪಾಲುದಾರಿಕೆ ಹೊಂದಿದ್ದಾರೆ. ನವೆಂಬರ್​ 24ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಕಂಗನಾ ಅವರಿಗೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ