Kangana Ranaut: ಕಂಗನಾ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆ ಮಾಡುವುದಕ್ಕೂ ಮುನ್ನ ಬರ್ತಿದೆ ತುರ್ತು ಪರಿಸ್ಥಿತಿ ಕುರಿತ ಮತ್ತೊಂದು ಸಿನಿಮಾ

Emergency Movie: ಒಂದೇ ಕಥಾಹಂದರ ಇಟ್ಟುಕೊಂಡು ಎರಡು ಸಿನಿಮಾ ಬಂದರೆ ಸಮಸ್ಯೆ ಎದುರಾಗುತ್ತದೆ. ಮೊದಲು ರಿಲೀಸ್​ ಆದ ಚಿತ್ರಕ್ಕೆ ಹೆಚ್ಚು ಮೈಲೇಜ್​ ಸಿಗುತ್ತದೆ.

Kangana Ranaut: ಕಂಗನಾ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆ ಮಾಡುವುದಕ್ಕೂ ಮುನ್ನ ಬರ್ತಿದೆ ತುರ್ತು ಪರಿಸ್ಥಿತಿ ಕುರಿತ ಮತ್ತೊಂದು ಸಿನಿಮಾ
ಕಂಗನಾ ರಣಾವತ್​
Follow us
ಮದನ್​ ಕುಮಾರ್​
|

Updated on: Jun 26, 2023 | 7:14 PM

ನಟಿ ಕಂಗನಾ ರಣಾವತ್​ (Kangana Ranaut) ಅವರ ಸಂಪೂರ್ಣ ಗಮನ ಈಗ ‘ಎಮರ್ಜೆನ್ಸಿ’ ಸಿನಿಮಾದ ಮೇಲಿದೆ. ಈ ಚಿತ್ರದಲ್ಲಿ ತುರ್ತು ಪರಿಸ್ಥಿತಿ ಕುರಿತ ಕಥೆ ಇದೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ಮತ್ತು ಪೋಸ್ಟರ್​ನಿಂದ ಹೈಪ್​ ಹೆಚ್ಚಾಗಿದೆ. ಹಲವು ಕಾರಣಗಳಿಂದಾಗಿ ‘ಎಮರ್ಜೆನ್ಸಿ’ ಸಿನಿಮಾ (Emergency Movie) ಸುದ್ದಿ ಆಗುತ್ತಿದೆ. ಈ ಚಿತ್ರದಲ್ಲಿ ಕಂಗನಾ ರಣಾವತ್​ ಅವರು ಇಂದಿರಾ ಗಾಂಧಿಯ ಪಾತ್ರ ಮಾಡುತ್ತಿದ್ದಾರೆ. ನಿರ್ದೇಶನ ಕೂಡ ಅವರದ್ದೇ. ಅಚ್ಚರಿ ಏನೆಂದರೆ, ಕಂಗನಾ ರಣಾವತ್​ ಅವರು ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆ ಮಾಡುವುದಕ್ಕೂ ಮುನ್ನವೇ ತುರ್ತು ಪರಿಸ್ಥಿತಿ (Emergency) ಕುರಿತು ಇನ್ನೊಂದು ಸಿನಿಮಾ ರಿಲೀಸ್​ ಆಗುತ್ತಿದೆ!

ಒಂದೇ ಕಥಾಹಂದರ ಇಟ್ಟುಕೊಂಡು ಎರಡು ಸಿನಿಮಾ ಬಂದರೆ ಸಮಸ್ಯೆ ಎದುರಾಗುತ್ತದೆ. ಮೊದಲು ರಿಲೀಸ್​ ಆದ ಚಿತ್ರಕ್ಕೆ ಹೆಚ್ಚು ಮೈಲೇಜ್​ ಸಿಗುತ್ತದೆ. ನಂತರ ಬಿಡುಗಡೆ ಆದ ಸಿನಿಮಾ ಎಷ್ಟೇ ಚೆನ್ನಾಗಿದ್ದರೂ ಕೂಡ ಅದು ಕಾಪಿ ಎನಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದೇ ಟೆನ್ಷನ್​ ಈಗ ‘ಎಮರ್ಜೆನ್ಸಿ’ ಚಿತ್ರಕ್ಕೆ ಎದುರಾಗುತ್ತಿದೆ. ಯಾಕೆಂದರೆ, ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ವಿಷಯವನ್ನೇ ಕೇಂದ್ರವಾಗಿ ಇಟ್ಟುಕೊಂಡು ಮರಾಠಿಯಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತಿದೆ. ‘ಆಣಿ ಬಾಣಿ’ ಎಂಬುದು ಈ ಚಿತ್ರದ ಶೀರ್ಷಿಕೆ.

ಇದನ್ನೂ ಓದಿ: Kangana Ranaut: ಕಂಗನಾ ರಣಾವತ್​ ನಿರ್ಮಾಣದ ಸಿನಿಮಾಗೆ ನೆಗೆಟಿವ್​ ವಿಮರ್ಶೆ; ಮೂವೀ ಮಾಫಿಯಾ ಮೇಲೆ ಆರೋಪ ಹೊರಿಸಿದ ನಟಿ

ಮರಾಠಿ ಭಾಷೆಯಲ್ಲಿ ತುರ್ತು ಪರಿಸ್ಥಿತಿಯನ್ನು ‘ಆಣಿ ಬಾಣಿ’ ಎನ್ನುತ್ತಾರೆ. ಹಾಗಾಗಿ ಈ ಶೀರ್ಷಿಕೆಯಲ್ಲಿ ಸಿನಿಮಾ ಮಾಡಲಾಗಿದೆ. ಜೂನ್​ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಕಂಗನಾ ರಣಾವತ್​ ಅವರು ಇತ್ತೀಚೆಗಷ್ಟೇ ‘ಎಮರ್ಜೆನ್ಸಿ’ ಸಿನಿಮಾದ ರಿಲೀಸ್​ ದಿನಾಂಕವನ್ನು ಘೋಷಿಸಿದರು. ನವೆಂಬರ್​ 24ರಂದು ತಮ್ಮ ಸಿನಿಮಾವನ್ನು ತೆರೆ ಕಾಣಿಸುವುದಾಗಿ ಅವರು ಹೇಳಿದರು. ಅದರ ಬೆನ್ನಲ್ಲೇ ‘ಆಣಿ ಬಾಣಿ’ ಸಿನಿಮಾದ ರಿಲೀಸ್​ ಡೇಟ್​ ಬಹಿರಂಗ ಆಗಿದೆ. ಇದೇ ವಾರ (ಜೂನ್​ 28) ಈ ಚಿತ್ರ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: Kangana Ranaut: ಚಿಕ್ಕ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿಗೆ ಕಂಗನಾ ರಣಾವತ್​ ಕ್ಲಾಸ್​; ವೈರಲ್​ ಆಯ್ತು ಫೋಟೋ

ಕಂಗನಾ ರಣಾವತ್ ಅವರು ಈಗ ಕೇವಲ ನಟಿಯಾಗಿ ಮಾತ್ರ ಉಳಿದುಕೊಂಡಿಲ್ಲ. ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಕೂಡ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬಂದ ‘ಟೀಕು ವೆಡ್ಸ್​ ಶೇರು’ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆ ಆಯಿತು. ‘ಎಮರ್ಜೆನ್ಸಿ’ ಸಿನಿಮಾಗೂ ಕಂಗನಾ ಅವರು ಬಂಡವಾಳ ಹೂಡುವ ಮೂಲಕ ಸಹ-ನಿರ್ಮಾಪಕಿ ಆಗಿದ್ದಾರೆ. ಈ ಚಿತ್ರದ ಮೇಲೆ ಅವರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು