Goldy Brar: ‘ಸಲ್ಮಾನ್​ ಖಾನ್​ನನ್ನು ಖಂಡಿತಾ ಕೊಲ್ಲುತ್ತೇನೆ’: ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ

Salman Khan: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಗೋಲ್ಡಿ ಬ್ರಾರ್​ ಒಪ್ಪಿಕೊಂಡಿದ್ದಾನೆ. ಈಗ ಆತನ ಮುಂದಿರುವ ಟಾರ್ಗೆಟ್​ ಎಂದರೆ ಅದು ಸಲ್ಮಾನ್​ ಖಾನ್​.

Goldy Brar: ‘ಸಲ್ಮಾನ್​ ಖಾನ್​ನನ್ನು ಖಂಡಿತಾ ಕೊಲ್ಲುತ್ತೇನೆ’: ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ
ಗೋಲ್ಡಿ ಬ್ರಾರ್​, ಸಲ್ಮಾನ್​ ಖಾನ್​
Follow us
ಮದನ್​ ಕುಮಾರ್​
|

Updated on: Jun 26, 2023 | 9:44 PM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಪದೇ ಪದೇ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಲಾರೆನ್ಸ್​ ಬಿಷ್ಣೋಯ್​ ಕಡೆಯಿಂದ ಹಲವು ಬಾರಿ ಜೀವ ಬೆದರಿಕೆ ಬಂದಿತ್ತು. ಶಾಕಿಂಗ್​ ವಿಚಾರ ಏನೆಂದರೆ ಈಗ ರಾಷ್ಟ್ರೀಯ ಸುದ್ದಿ ವಾಹಿನಿಯ ಸಂದರ್ಶನದಲ್ಲೇ ಸಲ್ಲುಗೆ ಕೊಲೆ ಬೆದರಿಕೆ ಹಾಕಲಾಗಿದೆ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಗ್ಯಾಂಗ್​ಸ್ಟರ್​ ಗೋಲ್ಡಿ ಬ್ರಾರ್​ (Gangster Goldy Brar) ಕೂಡ ಸಲ್ಮಾನ್​ ಖಾನ್​ರ ಹತ್ಯೆಯ ಪ್ಲ್ಯಾನ್​ ಬಗ್ಗೆ ಮಾತನಾಡಿದ್ದಾನೆ. ಹಲವು ರಾಜ್ಯ ಮತ್ತು ರಾಷ್ಟ್ರದಲ್ಲಿ ಮೋಸ್ಟ್​ ವಾಂಟೆಂಡ್​ ಕ್ರಿಮಿನಲ್​ ಆಗಿರುವ ಗೋಲ್ಡಿ ಬ್ರಾರ್​ ಜೊತೆ ಫೋನ್​ ಮೂಲಕ ಸಂದರ್ಶನ ನಡೆಸಲಾಗಿದೆ. ಈ ವೇಳೆ ಆತ ಸಲ್ಮಾನ್​ ಖಾನ್​ ಬಗ್ಗೆ ಮಾತನಾಡಿದ್ದಾನೆ. ‘ಸಲ್ಮಾನ್​ ಖಾನ್​ನನ್ನು ಖಂಡಿತಾ ಕೊಲೆ ಮಾಡುತ್ತೇವೆ’ ಎಂದು ಆತ ಶಪಥ ಮಾಡಿದ್ದಾನೆ. ಈ ಹಿಂದೆ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಕಡೆಯಿಂದ ಸಲ್ಮಾನ್​ ಖಾನ್​ಗೆ ಬೆದರಿಕೆ (Death Threat) ಪತ್ರಗಳು ಬಂದಿದ್ದವು. ಈಗ ಗೋಲ್ಡಿ ಬ್ರಾರ್​ ಕೂಡ ಸಲ್ಲು ಜೀವ ತೆಗೆಯುವುದಾಗಿ ಹೇಳಿದ್ದಾನೆ.

ಸಲ್ಮಾನ್​ ಖಾನ್​ ಅವರು 1998ರಲ್ಲಿ ‘ಹಮ್​ ಸಾಥ್​ ಸಾಥ್​ ಹೈ’ ಸಿನಿಮಾದ ಶೂಟಿಂಗ್​ ವೇಳೆ ಕೃಷ್ಣಮೃಗವನ್ನು ಬೇಟೆ ಆಡಿದ್ದರು. ಬಿಷ್ಣೋಯ್​ ಸಮುದಾಯದವರು ಕೃಷ್ಣಮೃಗವನ್ನು ಪವಿತ್ರವೆಂದು ನಂಬುತ್ತಾರೆ. ಹಾಗಾಗಿ ಬಿಷ್ಣೋಯ್​ ಸಮುದಾಯದ ಕೆಲವರು ಸಲ್ಲು ವಿರುದ್ಧ ಸೇಡು ತೀರಿಸಿಕೊಳ್ಳಲು ಕಾದಿದ್ದಾರೆ. ಲಾರೆನ್ಸ್​ ಬಿಷ್ಣೋಯ್​ ಬಳಿಕ ಗೋಲ್ಡಿ ಬ್ರಾರ್​ ಕೂಡ ಸಲ್ಲು ಬಗ್ಗೆ ಕಿಡಿಕಾರಿದ್ದಾನೆ. ಈ ಹಿಂದೆ ಸಲ್ಮಾನ್​ ಖಾನ್​ಗೆ ಇ-ಮೇಲ್​ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. ಈಗ ಸುದ್ದಿ ವಾಹಿನಿಯ ಸಂದರ್ಶನದಲ್ಲೇ ಆದ ಕೊಲೆ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: Salman Khan: ಸಲ್ಮಾನ್​ ಖಾನ್​ಗೆ ಬಂತು ಮದುವೆ ಪ್ರಪೋಸಲ್​; ಶಾರುಖ್​ ಖಾನ್​ ಹೆಸರು ಹೇಳಿ ತಪ್ಪಿಸಿಕೊಂಡ ನಟ

‘ಸಲ್ಮಾನ್​ ಖಾನ್​ನನ್ನು ಖಂಡಿತಾ ಕೊಲ್ಲುತ್ತೇವೆ. ಆತ ಬಿಷ್ಣೋಯ್​ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ನಾವು ಪವಿತ್ರವೆಂದು ತಿಳಿಯುವ ಕೃಷ್ಣಮೃಗವನ್ನು ಆತ ಸಾಯಿಸಿದ್ದಾನೆ. ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಅವನು ಕ್ಷಮೆ ಕೇಳಿಲ್ಲ. ಸಲ್ಮಾನ್​ ಖಾನ್​ ಮಾತ್ರವಲ್ಲದೇ ನಮ್ಮ ಎಲ್ಲ ಶತ್ರುಗಳನ್ನೂ ನಾವು ಕೊಲ್ಲುತ್ತೇವೆ’ ಎಂದು ಗೋಲ್ಡಿ ಬ್ರಾರ್​ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಸಲ್ಮಾನ್​ ಖಾನ್​ ಅವರು ಭದ್ರತೆ ಹೆಚ್ಚಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಆ ವಿಚಾರ ಮಾತಾಡೋದ್ರಲ್ಲಿ ಅರ್ಥವೇ ಇಲ್ಲ’: ಸಲ್ಮಾನ್​ ಖಾನ್​ ಬಾಡಿ ಗಾರ್ಡ್​ ವರ್ತನೆ ಬಗ್ಗೆ ವಿಕ್ಕಿ ಕೌಶಲ್​ ಪ್ರತಿಕ್ರಿಯೆ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಗೋಲ್ಡಿ ಬ್ರಾರ್​ ಒಪ್ಪಿಕೊಂಡಿದ್ದಾನೆ. ಆ ಕೊಲೆಗೆ ವೈಯಕ್ತಿಕ ವಿಚಾರವೇ ಕಾರಣ ಎಂದು ಆತ ಹೇಳಿದ್ದಾನೆ. ಈಗ ಆತನ ಟಾರ್ಗೆಟ್​ ಸಲ್ಮಾನ್​ ಖಾನ್​. ಸದ್ಯಕ್ಕೆ ಗೋಲ್ಡಿ ಬ್ರಾರ್ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ. ಭಾರತದಿಂದ ಎಸ್ಕೇಪ್​ ಆಗಿದ್ದ ಆತ ಕೆನಡಾದಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿಯೂ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಪಟ್ಟಿಯಲ್ಲಿ ಆತನ ಹೆಸರು ಸೇರ್ಪಡೆ ಆಗಿದೆ. ಹಾಗಾಗಿ ಅಲ್ಲಿಂದಲೂ ಗೋಲ್ಡಿ ಬ್ರಾರ್ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ