Salman Khan: ಸಲ್ಮಾನ್​ ಖಾನ್​ಗೆ ಬಂತು ಮದುವೆ ಪ್ರಪೋಸಲ್​; ಶಾರುಖ್​ ಖಾನ್​ ಹೆಸರು ಹೇಳಿ ತಪ್ಪಿಸಿಕೊಂಡ ನಟ

Salman Khan Marriage Proposal: ಸಲ್ಮಾನ್​ ಖಾನ್​ ಅವರಿಗೂ ಮದುವೆಗೂ ಯಾಕೋ ಸರಿಹೊಂದುತ್ತಿಲ್ಲ. ಅನೇಕ ಹುಡುಗಿಯರ ಜೊತೆ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರೂ ಕೂಡ ಮದುವೆ ಆಗಲು ಕಂಕಣ ಕೂಡಿಬರಲಿಲ್ಲ.

Salman Khan: ಸಲ್ಮಾನ್​ ಖಾನ್​ಗೆ ಬಂತು ಮದುವೆ ಪ್ರಪೋಸಲ್​; ಶಾರುಖ್​ ಖಾನ್​ ಹೆಸರು ಹೇಳಿ ತಪ್ಪಿಸಿಕೊಂಡ ನಟ
ಸಲ್ಮಾನ್​ ಖಾನ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: May 29, 2023 | 7:30 AM

ಸಿನಿಮಾ ವಿಚಾರಕ್ಕೆ ಸಲ್ಮಾನ್​ ಖಾನ್​ (Salman Khan) ಅವರು ಆಗಾಗ ಸುದ್ದಿ ಆಗುತ್ತಾರೆ. ಅದೇ ರೀತಿ ಅವರ ಮದುವೆ ವಿಷಯ ಕೂಡ ಪದೇಪದೇ ಚರ್ಚೆ ಆಗುತ್ತದೆ. ಇತ್ತೀಚೆಗೆ ಅವರು ಪ್ರಶಸ್ತಿ ಪ್ರದಾನ ಸಮಾರಂಭವೊಂದರ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕುತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ನೇರವಾಗಿ ಮದುವೆ ಪ್ರಪೋಸಲ್​ (Marriage Proposal) ಬಂದಿದೆ. ‘ನನ್ನನ್ನು ಮದುವೆ ಆಗ್ತೀರಾ?’ ಎಂದು ಮಹಿಳಾ ರಿಪೋರ್ಟರ್​ ಒಬ್ಬರು ಕೇಳಿದ್ದಾರೆ. ಆ ಪ್ರಶ್ನೆ ಕೇಳಿಬಂದಾಗ ಎಲ್ಲಿದ್ದ ಎಲ್ಲರಿಗೂ ಅಚ್ಚರಿ ಆಯಿತು. ‘ಎಸ್​ ಅಥವಾ ನೋ’ ಎಂದು ಉತ್ತರ ನೀಡುವ ಬದಲು ಶಾರುಖ್​ ಖಾನ್​ (Shah Rukh Khan) ಹೆಸರನ್ನು ಮಧ್ಯಕ್ಕೆ ಎಳೆದು ತಂದಿದ್ದಾರೆ ಸಲ್ಲು. ‘ನೀವು ಶಾರುಖ್​ ಖಾನ್​ ಬಗ್ಗೆ ಮಾತನಾಡುತ್ತಿದ್ದೀರಿ ತಾನೇ?’ ಎಂದು ಆ ರಿಪೋರ್ಟರ್​ಗೆ ಸಲ್ಮಾನ್​ ಖಾನ್​ ಕೇಳಿದ್ದಾರೆ. ‘ಇಲ್ಲ.. ನಾನು ನಿಮ್ಮ ಬಗ್ಗೆಯೇ ಹೇಳಿದ್ದು’ ಎಂದು ಆ ರಿಪೋರ್ಟರ್ ಖಚಿತಪಡಿಸಿದ್ದಾರೆ. ಆಗ ಸಲ್ಲು ಕಡೆಯಿಂದ ಖಚಿತ ಉತ್ತರ ಬಂತು.

ಸಲ್ಮಾನ್​ ಖಾನ್​ ಅವರಿಗೂ ಮದುವೆಗೂ ಯಾಕೋ ಸರಿಹೊಂದುತ್ತಿಲ್ಲ. ಅನೇಕ ಹುಡುಗಿಯರ ಜೊತೆ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರೂ ಕೂಡ ಮದುವೆ ಆಗಲು ಕಂಕಣ ಕೂಡಿಬರಲಿಲ್ಲ. ಈಗ ಅವರಿಗೆ 57 ವರ್ಷ ವಯಸ್ಸು. ಹಾಗಾಗಿ ಮದುವೆ ಆಗುವ ಉಸಾಬರಿಗೂ ಅವರು ಹೋಗುತ್ತಿಲ್ಲ. ಅದೇ ಮಾತನ್ನು ಅವರೀಗ ಮತ್ತೆ ಹೇಳಿದ್ದಾರೆ. ‘ನನ್ನನ್ನು ನೀವು 20 ವರ್ಷಗಳ ಹಿಂದೆಯೇ ಭೇಟಿ ಮಾಡಬೇಕಿತ್ತು. ನನ್ನ ಮದುವೆ ಕಥೆ ಯಾವಾಗಲೋ ಮುಗಿದುಹೋಗಿದೆ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. ಸದ್ಯ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ‘ಬಿಗ್​ ಬಾಸ್​ ಒಟಿಟಿ ಸೀಸನ್​ 2’ನಿರೂಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Salman Khan: ಮಮತಾ ಬ್ಯಾನರ್ಜಿ ಜತೆ ಕೈ ಜೋಡಿಸಿದ ಸಲ್ಮಾನ್​ ಖಾನ್​; ರಾಜಕೀಯದ ಮುನ್ಸೂಚನೆಯೇ?

ಸಲ್ಮಾನ್​ ಖಾನ್​ ಅವರೀಗ ‘ಟೈಗರ್​ 3’ ಚಿತ್ರದ ಮೇಲೆ ಗಮನ ಹರಿಸಿದ್ದಾರೆ. ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಈ ವಿಷಯವನ್ನು ಸ್ವತಃ ಸಲ್ಮಾನ್​ ಖಾನ್​ ಖಚಿತ ಪಡಿಸಿದ್ದಾರೆ. ಮನೀಶ್​ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಮೂಲಕ ನಿರ್ಮಾಣ ಆಗುತ್ತಿದೆ. ಸಲ್ಮಾನ್​ ಖಾನ್​ ಜೊತೆ ಕತ್ರಿನಾ ಕೈಫ್​, ಇಮ್ರಾನ್ ಹಷ್ಮಿ ಕೂಡ ಪಾತ್ರವರ್ಗದಲ್ಲಿದ್ದಾರೆ.

ಇದನ್ನೂ ಓದಿ:  Vicky Kaushal: ‘ಆ ವಿಚಾರ ಮಾತಾಡೋದ್ರಲ್ಲಿ ಅರ್ಥವೇ ಇಲ್ಲ’: ಸಲ್ಮಾನ್​ ಖಾನ್​ ಬಾಡಿ ಗಾರ್ಡ್​ ವರ್ತನೆ ಬಗ್ಗೆ ವಿಕ್ಕಿ ಕೌಶಲ್​ ಪ್ರತಿಕ್ರಿಯೆ

‘ನಿನ್ನೆ ರಾತ್ರಿ ಟೈಗರ್​ 3 ಚಿತ್ರದ ಶೂಟಿಂಗ್​ನಲ್ಲಿ ನಾನು ಭಾಗಿಯಾಗಿದ್ದೆ. ಅಂತೂ ಅದರ ಚಿತ್ರೀಕರಣ ಮುಗಿಸಿದ್ದೇನೆ. ಅದು ತುಂಬ ಕಷ್ಟಕರವಾಗಿತ್ತು. ಆದರೂ ಚೆನ್ನಾಗಿತ್ತು. ದೀಪಾವಳಿ ಹಬ್ಬಕ್ಕೆ ನೀವು ಈ ಸಿನಿಮಾ ನೋಡುತ್ತೀರಿ’ ಎಂದು ಸಲ್ಮಾನ್​ ಖಾನ್ ಇತ್ತೀಚೆಗೆ ಹೇಳಿದ್ದರು. ಹಬ್ಬ-ಹರಿದಿನಗಳಲ್ಲಿ ಸಿನಿಮಾ ರಿಲೀಸ್​ ಆದರೆ ಉತ್ತಮ ಕಮಾಯಿ ಆಗುತ್ತದೆ. ಹಾಗಾಗಿ 2023ರ ದೀಪಾವಳಿ ಹಬ್ಬದ ಮೇಲೆ ಸಲ್ಮಾನ್​ ಖಾನ್​ ಕಣ್ಣಿಟ್ಟಿದ್ದಾರೆ. ‘ಟೈಗರ್​’ ಸರಣಿಯ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕ್ರೇಜ್​ ಇದೆ. ಹಾಗಾಗಿ ‘ಟೈಗರ್​ 3’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿದೆ. ಇದರಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚೆಗೆ ತೆರೆಕಂಡ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಹೇಳಿಕೊಳ್ಳುವಷ್ಟು ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳ ಮೂಲಕ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಸಲ್ಮಾನ್​ ಖಾನ್ ಅವರಿಗೆ ಇದೆ.

ಇದನ್ನೂ ಓದಿ: Salman Khan: ಸೋಲಿನ ನೋವು ಮರೆತು ಪೋಸ್​ ಕೊಟ್ಟ​ ಸಲ್ಮಾನ್​ ಖಾನ್​; ‘ಘರ್ಜಿಸಲು ಟೈಗರ್​ ರೆಡಿ’ ಎಂದ ಫ್ಯಾನ್ಸ್​

ಇನ್​​ಸ್ಟಾಗ್ರಾಮ್​ನಲ್ಲಿ ಸಲ್ಮಾನ್​ ಖಾನ್​ ಅವರನ್ನು 61 ಮಿಲಿಯನ್​ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಲ್ಲು ಹೊಸ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವೈರಲ್​ ಆಗಿತ್ತು. ಕೇವಲ 3 ಗಂಟೆಯಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದರು. ಅನೇಕ ಸೆಲೆಬ್ರಿಟಿಗಳು ಕೂಡ ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದರು. ‘ಘರ್ಜಿಸಲು ಟೈಗರ್​ ರೆಡಿ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ