Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Sood: ಸೋನು ಸೂದ್​ಗೆ ದೇವರು ಎಂದ ಅಭಿಮಾನಿ; ನಟನ ಉತ್ತರ ಏನು?

ಸೋನು ಸೂದ್ ಅವರು  ಟ್ವಿಟರ್​ನಲ್ಲಿ #AskSonu ಸೆಷನ್ ನಡೆಸಿದ್ದರು. ಈ ವೇಳೆ ಸೋನುಗೆ ಹಲವು ಪ್ರಶ್ನೆಗಳು ಎದುರಾಗಿವೆ. ಆಗ ಅಭಿಮಾನಿಯೋರ್ವ ಅಚ್ಚರಿಯ ಪ್ರಶ್ನೆ ಕೇಳಿದ್ದಾನೆ.

Sonu Sood: ಸೋನು ಸೂದ್​ಗೆ ದೇವರು ಎಂದ ಅಭಿಮಾನಿ; ನಟನ ಉತ್ತರ ಏನು?
ಸೋನು ಸೂದ್
Follow us
ರಾಜೇಶ್ ದುಗ್ಗುಮನೆ
|

Updated on: Jun 27, 2023 | 7:11 AM

ಕೊರೊನಾ ಸಮಯದಲ್ಲಿ ಆರಂಭವಾದ ನಟ ಸೋನು ಸೂದ್ (Sonu Sood) ಅವರ ಒಳ್ಳೆಯ ಕೆಲಸಗಳು ಈಗಲೂ ಮುಂದುವರಿದುಕೊಂಡು ಬಂದಿವೆ. ಬಡವರಿಗೆ, ಕಷ್ಟದಲ್ಲಿರುವವರಿಗೆ ಸೋನು ಸೂದ್ ಸಹಾಯ ಮಾಡುತ್ತಾ ಇದ್ದಾರೆ. ಇದರಿಂದ ಅನೇಕರು ಸೋನು ಸೂದ್ ಅವರನ್ನು ದೇವರು ಎಂದೇ ಪರಿಗಣಿಸಿದ್ದಾರೆ. ಆದರೆ, ಸೋನು ಸೂದ್ ಇದನ್ನು ಒಪ್ಪುತ್ತಿಲ್ಲ. ಜನರು ಎಷ್ಟೇ ಹೊಗಳಿದರೂ ಅವರಿಗೆ ಅದು ಇಷ್ಟ ಆಗುವುದಿಲ್ಲ. ಈಗ ಸೋನು ಸೂದ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನನ್ನನ್ನು ದೇವರು ಎನ್ನಬೇಡಿ ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸೆಲೆಬ್ರಿಟಿಗಳು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅಭಿಮಾನಿಗಳಿಂದ ಪ್ರಶ್ನೆ ಸ್ವೀಕರಿಸಲು ಬಯಸುತ್ತಾರೆ. ಅದೇ ರೀತಿ ಸೋನು ಸೂದ್ ಅವರು  ಟ್ವಿಟರ್​ನಲ್ಲಿ #AskSonu ಸೆಷನ್ ನಡೆಸಿದ್ದರು. ಈ ವೇಳೆ ಸೋನುಗೆ ಹಲವು ಪ್ರಶ್ನೆಗಳು ಎದುರಾಗಿವೆ. ಆಗ ಅಭಿಮಾನಿಯೋರ್ವ ಅಚ್ಚರಿಯ ಪ್ರಶ್ನೆ ಕೇಳಿದ್ದಾನೆ.

‘ಸೋನು ಅವರೇ ಜನರು ನಿಮ್ಮನ್ನು ದೇವರು ಎನ್ನುತ್ತಾರಲ್ಲ. ಆ ಬಗ್ಗೆ ಎರಡು ಮಾತು’ ಎಂದು ಅಭಿಮಾನಿ ಕೇಳಿದ್ದಾನೆ. ಇದಕ್ಕೆ ಸೋನು ಉತ್ತರಿಸಿದ್ದಾರೆ. ‘ನಾನು ಸಾಮಾನ್ಯ ಮನುಷ್ಯ. ಉಳಿದ ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಲು ಬಯಸುತ್ತೇನೆ’ ಎಂದಿದ್ದಾರೆ ಸೋನು ಸೂದ್.

ಇದನ್ನೂ ಓದಿ: ಸೆಟ್​ನಲ್ಲಿ ದಕ್ಷಿಣ ಭಾರತದವರ ಈ ನಡೆಯಿಂದ ಸೋನು ಸೂದ್​ಗೆ ಆಗಿತ್ತು ಶಾಕ್

ಸೋನು ಅವರು ಸದ್ಯ ಹಿಮಾಚಲ ಪ್ರದೇಶದಲ್ಲಿ ಇದ್ದಾರೆ. ಅಲ್ಲಿಂದ ಅವರು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಫಿಟ್​ನೆಸ್ ಕಾಯ್ದುಕೊಳ್ಳಲು ಏನು ಮಾಡುತ್ತಿದ್ದೇನೆ ಎಂಬುದನ್ನು ಅವರು ವಿಡಿಯೋ ಮೂಲಕ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ಸೆಟ್​ನಲ್ಲಿ ದಕ್ಷಿಣ ಭಾರತದವರ ಈ ನಡೆಯಿಂದ ಸೋನು ಸೂದ್​ಗೆ ಆಗಿತ್ತು ಶಾಕ್

ಸೋನು ಸೂದ್ ಅವರು ‘ರೋಡೀಸ್ 19’ ಶೋನ ನಡೆಸಿಕೊಟ್ಟಿದ್ದರು. 2022ರ ಏಪ್ರಿಲ್ 8ಕ್ಕೆ ಈ ಶೋ ಆರಂಭ ಆಗಿತ್ತು. ಜುಲೈನಲ್ಲಿ ಇದು ಪೂರ್ಣಗೊಂಡಿತ್ತು. ಈ ಶೋ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ