AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿನಿತ್ಯ ಈ ಆಹಾರಗಳನ್ನು ಸೇವಿಸಿ

ಹೆಚ್ಚಿನವರು ಕೊರಿಯನ್ನರಂತೆ ಫಳಫಳನೆ ಹೊಳೆಯುವ ಗ್ಲಾಸ್‌ ಸ್ಕಿನ್‌ ನಮ್ಮದಾಗಬೇಕೆಂದು ಬಯಸುತ್ತಾರೆ. ಇದಕ್ಕಾಗಿ ದುಬಾರಿ ಸೌಂದರ್ಯ ಉತ್ಪನ್ನಗಳ ಮೊರೆ ಹೋಗ್ತಾರೆ. ಈ ಸ್ಕಿನ್‌ಕೇರ್‌ ಪ್ರಾಡಕ್ಟ್‌ಗಳು ಬಾಹ್ಯವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ತ್ವಚೆಗೆ ಒಳಗಿನಿಂದ ಪೋಷಣೆ ಸಿಗಲು ಸರಿಯಾದ ಆಹಾರಕ್ರಮವನ್ನು ಪಾಲಿಸುವುದು ಅವಶ್ಯಕ. ಆಗ ಮಾತ್ರ ಚರ್ಮದ ಹೊಳಪು ಹೆಚ್ಚುತ್ತದೆ. ಸರಿಯಾದ ಸ್ಕಿನ್‌ಕೇರ್‌ ಜೊತೆಗೆ ಈ ಕೆಲವೊಂದು ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವನೆ ಮಾಡಿದರೆ ಖಂಡಿತವಾಗಿಯೂ ನೀವು ಹೊಳೆಯುವ ತ್ವಚೆಯನ್ನು ಪಡೆಯಬಹುದು.

ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿನಿತ್ಯ ಈ ಆಹಾರಗಳನ್ನು ಸೇವಿಸಿ
ಸಾಂದರ್ಭಿಕ ಚಿತ್ರ Image Credit source: magnific
ಮಾಲಾಶ್ರೀ ಅಂಚನ್​
|

Updated on: Aug 01, 2026 | 7:28 PM

Share

ಪ್ರತಿಯೊಬ್ಬರೂ ತಮ್ಮ ತ್ವಚೆ (skin) ಆಕರ್ಷಕವಾಗಿರಬೇಕು, ಮೊಡವೆ, ಯಾವುದೇ ಕಲೆಗಳಿಲ್ಲದೆ ಕಾಂತಿಯುತವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೊರಿಯನ್ನರಂತೆ ಫಳ ಫಳನೇ ಹೊಳೆಯುವ ಗ್ಲಾಸ್‌ ಸ್ಕಿನ್‌ ನಮ್ಮದಾಗಬೇಕೆಂದು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಹಲವರು ದುಬಾರಿ ಬ್ಯೂಟಿ ಪ್ರಾಡಕ್ಟ್ ಸ್ಕಿನ್‌ಕೇರ್‌ಗಳ ಮೊರೆ ಹೋಗುತ್ತಿದ್ದಾರೆ. ಇವು ಬಾಹ್ಯವಾಗಿ ತ್ವಚೆಗೆ ಆರೈಕೆಯನ್ನು ನೀಡಬಹುದು. ಆದರೆ ನಿಜವಾಗಿಯೂ ತ್ವಚೆಯ ಆರೋಗ್ಯ ನಾವು ಏನು ಸೇವನೆ ಮಾಡುತ್ತೇವೆಯೋ ಅದರ ಮೇಲೆ ನಿಂತಿದೆ. ನಾವು ಸೇವಿಸುವ ಆಹಾರದ ಫಲಿತಾಂಶ ಮುಖದ ಮೇಲೆ ಗೋಚರಿಸುತ್ತದೆ, ಅದಕ್ಕಾಗಿಯೇ ಯಾವಾಗಲೂ ಆರೋಗ್ಯಕರ ಆಹಾರಗಳನ್ನೇ ಸೇವನೆ ಮಾಡಬೇಕು. ಅದರಲ್ಲೂ ತ್ವಚೆಯ ಹೊಳಲು ಹೆಚ್ಚಾಗಲೂ ಪ್ರತಿನಿತ್ಯ ಈ ಕೆಲವು ಆಹಾರಗಳನ್ನು ತಪ್ಪದೇ ಸೇವನೆ ಮಾಡಲೇಬೇಕು. ಅವು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಮುಖದ ಹೊಳಪನ್ನು ಹೆಚ್ಚಿಸಲು ಏನೆಲ್ಲಾ ತಿನ್ನಬೇಕು?

ನೆಲ್ಲಿಕಾಯಿ: ಆಮ್ಲಾ ಅಂದರೆ ನೆಲ್ಲಿಕಾಯಿ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಇದು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿ ಜ್ಯೂಸ್‌ ಅನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಥವಾ ಹಸಿ ನೆಲ್ಲಿಕಾಯಿ ತಿನ್ನುವುದರಿಂದ ದೇಹದಿಂದ ವಿಷವನ್ನು ಹೊರಹಾಕಬಹುದು ಮತ್ತು ಇದು ತ್ವಚೆಯ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಾಲ್ನಟ್ಸ್ ಮತ್ತು ಬಾದಾಮಿ: ಈ ಡ್ರೈ ನಟ್ಸ್‌ಗಳುಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿವೆ. ಬಾದಾಮಿ ಮತ್ತು ವಾಲ್ನಟ್ಸ್ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ಒಣ ಚರ್ಮದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ರಾತ್ರಿಯಿಡೀ 4 ರಿಂದ 5 ನೆನೆಸಿದ ಬಾದಾಮಿ ಮತ್ತು 2 ವಾಲ್ನಟ್ಸ್ ತಿನ್ನಿ, ಇದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ.

ಟೊಮ್ಯಾಟೋ: ಟೊಮ್ಯಾಟೋ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತವೆ, ಇದು ಸೂರ್ಯನ ಹಾನಿಕಾರಕ ಯು.ವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದು ಕಪ್ಪು ಕಲೆಗಳು, ಟ್ಯಾನಿಂಗ್ ಮತ್ತು ತೆರೆದ ರಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯ ಟೊಮೆಟೋ ಸೇವಿಸಿ. ಪದಾರ್ಥಕ್ಕೂ ಟೊಮೆಟೊ ಹಾಕಬಹುದು ಅಲ್ಲದೆ ಸಲಾಡ್‌, ಜ್ಯೂಸ್‌  ರೂಪದಲ್ಲೂ ಸೇವಿಸಬಹುದು.

ಕ್ಯಾರೆಟ್: ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ತಿನ್ನುವುದರಿಂದ ಮೊಡವೆಗಳು ಕಡಿಮೆ ಮಾಡಬಹುದು ಮತ್ತು ಇದು ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕ್ಯಾರೆಟ್‌ ಅನ್ನು ನೀವು ಸಲಾಡ್‌ ಅಥವಾ ಜ್ಯೂಸ್‌ ರೂಪದಲ್ಲಿ ನಿತ್ಯ ಸೇವನೆ ಮಾಡಿ.

ಇದನ್ನೂ ಓದಿ: ಮಹಿಳೆಯರೇ… ಬೆಳಗೆದ್ದು ಅಡುಗೆ ಮನೆ ಸ್ವಚ್ಛಗೊಳಿಸುವಾಗ ಕ್ರಮಗಳನ್ನು ಅನುಸರಿಸಿ

ದ್ವಿದಳ ಧಾನ್ಯಗಳು: ಕಾಲಜನ್ ಸ್ವತಃ ಒಂದು ಪ್ರೋಟೀನ್, ಆದ್ದರಿಂದ ದೇಹವು ಅದನ್ನು ಉತ್ಪಾದಿಸಲು ಅಮೈನೋ ಆಮ್ಲಗಳ ಅಗತ್ಯವಿದೆ. ಕಿಡ್ನಿ ಬೀನ್ಸ್, ಕಡಲೆ, ಹೆಸರುಕಾಳು ಮತ್ತು ಇತರ ದ್ವಿದಳ ಧಾನ್ಯಗಳು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿವೆ. ಇವು ನಮ್ಮ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಚರ್ಮದ ಕೋಶಗಳನ್ನು ಸರಿಪಡಿಸಿ, ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಮೊಸರು:  ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ನಿಮ್ಮ ಕರುಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಆರೋಗ್ಯಕರ ಕರುಳು ತ್ವಚೆಯಲ್ಲಿ ಮೊಡವೆಗಳನ್ನು ಮೂಡುವುದನ್ನು ತಡೆಯುತ್ತದೆ. ಪ್ರತಿದಿನ ಒಂದು ಬೌಲ್‌  ತಾಜಾ ಮೊಸರು ತಿನ್ನುವುದರಿಂದ ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದು ಮತ್ತು ಇದು ತ್ವಚೆಯ ಹೊಳಪನ್ನು ಸಹ ಹೆಚ್ಚಿಸುತ್ತದೆ.

ಇದಲ್ಲದೆ ಹಣ್ಣುಗಳು, ಆರೋಗ್ಯಕರ ಸಮತೋಲಿತ ಆಹಾರ ಮತ್ತು ಪ್ರತಿನಿತ್ಯ ಸಾಕಷ್ಟು ನೀರನ್ನು ಕುಡಿಯಬೇಕು. ಆದಷ್ಟು ಎಣ್ಣೆಯುಕ್ತ ಆಹಾರಗಳು ಮತ್ತು ಜಂಕ್‌ಫುಡ್‌ ಸೇವನೆಯನ್ನು ತಪ್ಪಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us