Shah Rukh Khan: ಶಾರುಖ್​ ಖಾನ್​ ಚಿತ್ರದ ಹಾಡಿನ ಮೂಲಕ ಅಮೆರಿಕದಲ್ಲಿ ಮೋದಿಗೆ ಸ್ವಾಗತ; ನಟನ ಪ್ರತಿಕ್ರಿಯೆ ಏನು?

Narendra Modi: ‘ಚಯ್ಯಾ ಚಯ್ಯಾ..’ ಗೀತೆಯನ್ನು ಹಾಡುವ ಮೂಲಕ ನರೇಂದ್ರ ಮೋದಿಯವರನ್ನು ಅಮೆರಿಕದಲ್ಲಿ ಸ್ವಾಗತಿಸಲಾಯಿತು. ಆ ಬಗ್ಗೆ ನೆಟ್ಟಿಗರೊಬ್ಬರು ಶಾರುಖ್​ ಖಾನ್​ಗೆ ಪ್ರಶ್ನೆ ಕೇಳಿದ್ದಾರೆ.

Shah Rukh Khan: ಶಾರುಖ್​ ಖಾನ್​ ಚಿತ್ರದ ಹಾಡಿನ ಮೂಲಕ ಅಮೆರಿಕದಲ್ಲಿ ಮೋದಿಗೆ ಸ್ವಾಗತ; ನಟನ ಪ್ರತಿಕ್ರಿಯೆ ಏನು?
ನರೇಂದ್ರ ಮೋದಿ, ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Jun 26, 2023 | 4:18 PM

ಬಾಲಿವುಡ್​ ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಹಲವು ದೇಶದಲ್ಲಿ ಬಿಡುಗಡೆ ಆಗುತ್ತವೆ. ಈ ವರ್ಷ ತೆರೆಕಂಡ ‘ಪಠಾಣ್​’ ಚಿತ್ರವು ವಿಶ್ವ ಮಾರುಕಟ್ಟೆಯಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿತು. ಇನ್ನು, ಶಾರುಖ್​ ಖಾನ್​ ಅವರ ಹಳೇ ಸಿನಿಮಾಗಳ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್​ ಆಗಿ ಉಳಿದುಕೊಂಡಿವೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಇಲ್ಲಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಸ್ವಾಗತಿಸುವಾಗ ಶಾರುಖ್​ ಖಾನ್​ ನಟನೆಯ ‘ದಿಲ್​ ಸೇ’ ಸಿನಿಮಾದ ‘ಚಯ್ಯಾ.. ಚಯ್ಯಾ..’ (Chaiya Chaiya Song) ಗೀತೆಯನ್ನು ಹಾಡಲಾಗಿದೆ. ಅದರ ಬಗ್ಗೆ ಶಾರುಖ್​ ಖಾನ್​ ಅವರು ಟ್ವಿಟರ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

‘ಚಯ್ಯಾ.. ಚಯ್ಯಾ..’ ಹಾಡು ತುಂಬ ಅದ್ದೂರಿಯಾಗಿ ಮೂಡಿಬಂದಿತ್ತು. ಬೆಟ್ಟ, ಗುಡ್ಡ, ಸುರಂಗದಲ್ಲಿ ಚಲಿಸುವ ರೈಲಿನ ಮೇಲೆ ಶಾರುಖ್​ ಖಾನ್​ ಮತ್ತು ಮಲೈಕಾ ಅರೋರಾ ಡ್ಯಾನ್ಸ್​ ಮಾಡಿದ್ದರು. ಅವರ ಜೊತೆ ನೂರಾರು ಡ್ಯಾನ್ಸರ್​ಗಳು ಕೂಡ ಹೆಜ್ಜೆ ಹಾಕಿದ್ದರು. ಇಂದಿಗೂ ಆ ಹಾಡು ಫ್ರೆಶ್​ ಆಗಿದೆ. ‘ಚಯ್ಯಾ ಚಯ್ಯಾ ಗೀತೆಯನ್ನು ಹಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಮೆರಿಕದಲ್ಲಿ ಸ್ವಾಗತಿಸಿದ್ದು ನಿಮಗೆ ಹೇಗನಿಸಿತು’ ಎಂದು ನೆಟ್ಟಿಗರೊಬ್ಬರು ಶಾರುಖ್​ ಖಾನ್​ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶಾರುಖ್​ ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ.

‘ಅಲ್ಲಿ ಡ್ಯಾನ್ಸ್​ ಮಾಡಲು ನಾನು ಕೂಡ ಇರಬೇಕಿತ್ತು. ಆದರೆ ಒಳಗೆ ರೈಲು ತೆಗೆದುಕೊಂಡು ಹೋಗಲು ಅವರು ಬಿಡುತ್ತಿರಲಿಲ್ಲ ಎನಿಸುತ್ತದೆ’ ಎಂದು ಶಾರುಖ್​ ಖಾನ್​ ಅವರು ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಅವರು ಟ್ವಿಟರ್​ ಬಳಸುತ್ತಾರೆ. ಕೆಲವು ವಿಶೇಷ ಸಂದರ್ಭದಲ್ಲಿ ಅವರು ಈ ರೀತಿ ಪ್ರಶ್ನೋತ್ತರ ನಡೆಸುತ್ತಾರೆ. ಆಗ ಅವರಿಗೆ ಹಲವು ಬಗೆಯ ಪ್ರಶ್ನೆಗಳು ಅಭಿಮಾನಿಗಳಿಂದ ಎದುರಾಗುತ್ತವೆ. ಅವುಗಳಿಗೆ ಫನ್ನಿಯಾಗಿ ಅವರು ಉತ್ತರ ನೀಡುತ್ತಾರೆ.

ಶಾರುಖ್​ ಖಾನ್​ ಅವರಿಗೆ ಈಗ 57 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸುತ್ತಾರೆ. ಇದೆಲ್ಲ ಹೇಗೆ ಸಾಧ್ಯ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ‘ತುಂಬ ಪೇನ್​ ಕಿಲ್ಲರ್​ ಮಾತ್ರೆ ತಿನ್ನಬೇಕಾಗುತ್ತದೆ ಅಣ್ಣಾ…’ ಎಂದು ಶಾರುಖ್​ ಉತ್ತರಿಸಿದ್ದಾರೆ. ‘ಪಠಾಣ್​’ ಸಿನಿಮಾದಲ್ಲಿ ಭಾರಿ ಸಾಹಸ ಸನ್ನಿವೇಶಗಳು ಇದ್ದವು. ಅವರನ್ನು ಆ್ಯಕ್ಷನ್​ ಅವತಾರದಲ್ಲಿ ನೋಡಲು ಫ್ಯಾನ್ಸ್​ ಬಯಸುತ್ತಾರೆ. ಈಗ ಬಿಡುಗಡೆಗೆ ಸಿದ್ಧವಾಗುತ್ತಿರುವ ‘ಜವಾನ್​’ ಸಿನಿಮಾ ಕೂಡ ಸಖತ್​ ಮಾಸ್​ ಆಗಿ ಮೂಡಿಬರಲಿದೆ. ಆ ಬಳಿಕ ರಾಜ್​ಕುಮಾರ್​ ಹಿರಾನಿ ನಿರ್ದೇಶನದ ‘ಡಂಕಿ’ ಚಿತ್ರ ತೆರೆಕಾಣಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್