Shah Rukh Khan: ‘ಆಕೆಯನ್ನು ಜೈಲಿಗೆ ಹಾಕಿ’: ಶಾರುಖ್​ ಖಾನ್​ಗೆ ಅನುಮತಿ ಇಲ್ಲದೇ ಕಿಸ್​ ಮಾಡಿದ ಮಹಿಳೆ ವಿರುದ್ಧ ಅಭಿಮಾನಿಗಳ ಆಕ್ರೋಶ

Shah Rukh Khan Viral Video: ದುಬೈನಲ್ಲಿ ಮಹಿಳೆಯೊಬ್ಬರು ಶಾರುಖ್​ ಖಾನ್​ಗೆ ಕಿಸ್​ ಮಾಡಿದ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Shah Rukh Khan: ‘ಆಕೆಯನ್ನು ಜೈಲಿಗೆ ಹಾಕಿ’: ಶಾರುಖ್​ ಖಾನ್​ಗೆ ಅನುಮತಿ ಇಲ್ಲದೇ ಕಿಸ್​ ಮಾಡಿದ ಮಹಿಳೆ ವಿರುದ್ಧ ಅಭಿಮಾನಿಗಳ ಆಕ್ರೋಶ
ಶಾರುಖ್​ ಖಾನ್​ಗೆ ಅನುಮತಿ ಇಲ್ಲದೇ ಕಿಸ್​ ಮಾಡಿದ ಮಹಿಳೆ
Follow us
ಮದನ್​ ಕುಮಾರ್​
|

Updated on: Jun 14, 2023 | 6:06 PM

ನಟ ಶಾರುಖ್​ ಖಾನ್​ (Shah Rukh Khan) ಅವರ ಜನಪ್ರಿಯತೆ ಭಾರತಕ್ಕೆ ಮಾತ್ರ ಸೀಮಿತವಲ್ಲ. ಅವರ ಹವಾ ವಿಶ್ವಾದ್ಯಂತ ಇದೆ. ಅದರಲ್ಲೂ ದುಬೈನಲ್ಲಿ ಅವರನ್ನು ಇಷ್ಟಪಡುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇತ್ತೀಚೆಗೆ ಅವರು ದುಬೈಗೆ (Dubai) ತೆರಳಿದ್ದರು. ಅಲ್ಲಿ ಸ್ನೇಹಿತರೊಬ್ಬರ ರಿಯಲ್​ ಎಸ್ಟೇಟ್​ ಕಂಪನಿಯ ಪ್ರಚಾರ ಕಾರ್ಯಕ್ರಮದಲ್ಲಿ ಶಾರುಖ್​ ಖಾನ್​ ಭಾಗಿಯಾದರು. ಆ ಇವೆಂಟ್​ನಲ್ಲಿ ಅವರು ಕೆಲವು ಅಭಿಮಾನಿಗಳನ್ನು ಭೇಟಿ ಮಾಡಿದರು. ಅಭಿಮಾನಿಗಳ (Shah Rukh Khan Fans) ಗುಂಪಿನಲ್ಲಿ ಇದ್ದ ಮಹಿಳೆಯೊಬ್ಬರು ಶಾರುಖ್​ಗೆ ಕಿಸ್​ ಮಾಡಿದ್ದಾರೆ. ನಟನ ಅನುಮತಿ ಇಲ್ಲದೇ ಸಾರ್ವಜನಿಕವಾಗಿ ಈ ರೀತಿ ನಡೆದುಕೊಂಡಿದ್ದಕ್ಕಾಗಿ ಆಕೆಯನ್ನು ಜೈಲಿಗೆ ಹಾಕಬೇಕು ಎಂದು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದುಬೈನಲ್ಲಿ ಮಹಿಳೆಯೊಬ್ಬರು ಶಾರುಖ್​ ಖಾನ್​ಗೆ ಕಿಸ್​ ಮಾಡಿದ ವಿಡಿಯೋ ವೈರಲ್​ ಆಗಿದೆ. ಈ ವೇಳೆ ಶಾರುಖ್​ ಜೊತೆ ಅವರ ಮ್ಯಾನೇಜರ್​ ಪೂಜಾ ದದ್ಲಾನಿ ಮತ್ತು ಬಾಡಿ ಗಾರ್ಡ್ಸ್​ ಕೂಡ ಇದ್ದರು. ಶಾರುಖ್​ ಬಳಿ ಬಂದ ಮಹಿಳೆಯು ‘ನಿಮಗೆ ನಾನು ಕಿಸ್​ ಮಾಡಲೇ’ ಎಂದು ಕೇಳುತ್ತಾರೆ. ಶಾರುಖ್​ ಕಡೆಯಿಂದ ಉತ್ತರ ಬರುವುದಕ್ಕೂ ಮುನ್ನವೇ ಆಕೆಯು ತಮ್ಮ ನೆಚ್ಚಿನ ನಟನ ಮುಖಕ್ಕೆ ಮುತ್ತು ಕೊಟ್ಟು ಖುಷಿಪಡುತ್ತಾರೆ. ವೈರಲ್​ ಆಗಿರುವ ಈ ವಿಡಿಯೋ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಶಾರುಖ್​ ಖಾನ್​ ಅವರ ಜಾಗದಲ್ಲಿ ಓರ್ವ ನಟಿಯನ್ನು ಕಲ್ಪಿಸಿಕೊಳ್ಳಿ. ಆ ನಟಿಯ ಜೊತೆ ಪುರುಷನೊಬ್ಬ ಇದೇ ರೀತಿ ನಡೆದುಕೊಂಡಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ‘ಶಾರುಖ್​ ಖಾನ್​ ಅವರ ಅನುಮತಿ ಇಲ್ಲದೇ ಕಿಸ್​ ಮಾಡಿದ ಆ ಮಹಿಳೆಯನ್ನು ಜೈಲಿಗೆ ಹಾಕಿ’ ಎಂದು ಅಭಿಮಾನಿಗಳು ಆಕ್ರೋಶದಿಂದ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Shah Rukh Khan: ತಕ್ಷಣ ನೋಡಿ ಇದು ಶಾರುಖ್​ ಖಾನ್​ ಅಂದುಕೊಳ್ಳಬೇಡಿ; ಈ ವ್ಯಕ್ತಿಯ ಕಥೆ ಬೇರೆಯೇ ಇದೆ

ಸಿನಿಮಾ ವಿಚಾರಕ್ಕೆ ಬರೋದಾದರೆ ಶಾರುಖ್​ ಖಾನ್​ ಅವರು ‘ಪಠಾಣ್​’ ಸಿನಿಮಾದ ಗೆಲುವಿನ ಬಳಿಕ ಟ್ರ್ಯಾಕ್​ಗೆ ಮರಳಿದ್ದಾರೆ. ಈಗ ಅವರು ಅಭಿನಯಿಸುತ್ತಿರುವ ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಬಜೆಟ್​ನ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಜವಾನ್​’ ಪಾತ್ರವಾಗುತ್ತಿದೆ. ಈ ಚಿತ್ರವನ್ನು ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್’ ಸಂಸ್ಥೆ ನಿರ್ಮಿಸುತ್ತಿದೆ. ಕಾಲಿವುಡ್​ನ ಜನಪ್ರಿಯ ನಿರ್ದೇಶಕರಾದ ಅಟ್ಲಿ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿವೆ. ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ಪುತ್ರಿ ಸುಹಾನಾಗೆ ಸಿಕ್ಕಿದೆ ಭರಪೂರ ಮೆಚ್ಚುಗೆ

ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಖಾನ್​ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್​ ಮಾಡಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು. ಈಗ ಆ ಸಿನಿಮಾದ ರೀತಿಯೇ ‘ಜವಾನ್​’ ಚಿತ್ರ ಕೂಡ ಬಿಸ್ನೆಸ್​ ಮಾಡುವ ಮುನ್ಸೂಚನೆ ಸಿಕ್ಕಿದೆ. ‘ಜವಾನ್’ ಚಿತ್ರದ ಒಟಿಟಿ, ಸ್ಯಾಟಿಲೈಟ್ ಮತ್ತು ಆಡಿಯೋ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿವೆ ಎನ್ನಲಾಗುತ್ತಿದೆ. ಭಾರಿ ಮೊತ್ತಕ್ಕೆ ಹಕ್ಕುಗಳು ಸೇಲ್​ ಆಗಿರುವ ಸುದ್ದಿ ಇದೆ. ಆದರೆ, ಎಷ್ಟು ಕೋಟಿಗೆ ಹಕ್ಕುಗಳು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು