Drishyam 3 Movie:ಮಲಯಾಳಂ-ಹಿಂದಿಯಲ್ಲಿ ಒಟ್ಟಿಗೆ ರಿಲೀಸ್ ಆಗುತ್ತೆ ‘ದೃಶ್ಯಂ 3’; ಒಳ್ಳೆಯ ಬಿಸ್ನೆಸ್ ಮಾಡಲು ಹೊಸ ಪ್ಲ್ಯಾನ್

ಒಟಿಟಿಯಲ್ಲಿ ಜನರು ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಹೀಗಾಗಿ, ಮೊದಲು ಮಲಯಾಳಂನ ‘ದೃಶ್ಯಂ 3’ ರಿಲೀಸ್​ ಆಗಿ, ನಂತರ ಹಿಂದಿಯ ರಿಮೇಕ್ ಅವತರಣಿಕೆ​ ಬಂದರೆ ಹಿಂದಿ ಪ್ರೇಕ್ಷಕರಿಗೆ ಸಸ್ಪೆನ್ಸ್​ ಉಳಿದಿರುವುದಿಲ್ಲ ಅನ್ನೋದು ನಿರ್ಮಾಪಕರ ಲೆಕ್ಕಾಚಾರ.

Drishyam 3 Movie:ಮಲಯಾಳಂ-ಹಿಂದಿಯಲ್ಲಿ ಒಟ್ಟಿಗೆ ರಿಲೀಸ್ ಆಗುತ್ತೆ ‘ದೃಶ್ಯಂ 3’; ಒಳ್ಳೆಯ ಬಿಸ್ನೆಸ್ ಮಾಡಲು ಹೊಸ ಪ್ಲ್ಯಾನ್
ಮೋಹನ್​ಲಾಲ್-ಅಜಯ್ ದೇವಗನ್
Follow us
ರಾಜೇಶ್ ದುಗ್ಗುಮನೆ
|

Updated on: Jun 14, 2023 | 11:39 AM

ಮೋಹನ್​ಲಾಲ್ (Mohanlal) ನಟನೆಯ ‘ದೃಶ್ಯಂ’ ಮತ್ತು ‘ದೃಶ್ಯಂ 2’ ಚಿತ್ರಗಳು ಮಲಯಾಳಂನಲ್ಲಿ ರಿಲೀಸ್​ ಆಗಿ ಸೂಪರ್ ಹಿಟ್ ಆದವು. ಈ ಸಿನಿಮಾಗಳು ರಿಲೀಸ್ ಆಗಿ ಹಲವು ತಿಂಗಳು ಕಳೆದ ಬಳಿಕ ಹಿಂದಿಗೆ ರಿಮೇಕ್​ ಆಯಿತು. ಒಟಿಟಿ ವ್ಯಾಪ್ತಿ ಹಿರಿದಾಗಿರುವ ಈ ಕಾಲದಲ್ಲಿ ಪ್ರೇಕ್ಷಕರು ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಹಾಗಾಗಿ ರಿಮೇಕ್​ ಚಿತ್ರಗಳು ಥಿಯೇಟರ್​​ನಲ್ಲಿ ಗೆಲ್ಲುವ ಚಾನ್ಸ್​ ಕಡಿಮೆ ಇರುತ್ತದೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಚಿತ್ರಗಳು ಹಿಂದಿಯಲ್ಲಿ ರಿಮೇಕ್​ ಆಗಿ ಹೇಗೋ ಗೆದ್ದವು. ಆದರೆ ‘ದೃಶ್ಯಂ 3’  (Drishyam 3)ವಿಚಾರದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ‘ದೃಶ್ಯಂ 3’ ಮಲಯಾಳಂ ಹಾಗೂ ಹಿಂದಿ ವರ್ಷನ್ ಒಟ್ಟೊಟ್ಟಿಗೆ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಒಟಿಟಿಯಲ್ಲಿ ಜನರು ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಹೀಗಾಗಿ, ಮೊದಲು ಮಲಯಾಳಂನ ‘ದೃಶ್ಯಂ 3’ ರಿಲೀಸ್​ ಆಗಿ, ನಂತರ ಹಿಂದಿಯ ರಿಮೇಕ್ ಅವತರಣಿಕೆ​ ಬಂದರೆ ಹಿಂದಿ ಪ್ರೇಕ್ಷಕರಿಗೆ ಸಸ್ಪೆನ್ಸ್​ ಉಳಿದಿರುವುದಿಲ್ಲ. ಅದರ ಬದಲು ಏಕಕಾಲಕ್ಕೆ ರಿಲೀಸ್​ ಮಾಡುವುದು ಉತ್ತಮ ಎಂದು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದವರು ಅಧಿಕೃತ ಮಾಹಿತಿ ಹಂಚಿಕೊಳ್ಳುವುದು ಬಾಕಿ ಇದೆ.

ಇದನ್ನೂ ಓದಿ: 175 ಕೋಟಿ ರೂ. ಗಡಿಯತ್ತ ‘ದೃಶ್ಯಂ 2’ ಸಿನಿಮಾ; ವರ್ಷಾಂತ್ಯಕ್ಕೆ ಅಜಯ್​ ದೇವಗನ್​ ಹ್ಯಾಪಿ

‘ನನ್ನ ಹೆಸರು ಸರಿಯಾಗಿ ಹೇಳಿ’; ಕಿವಿಮಾತು ಹೇಳಿದ ಅಜಯ್ ದೇವಗನ್ ಮಗಳು ನಿಸಾ

ಸದ್ಯಕ್ಕೆ ‘ದೃಶ್ಯಂ 3’ ಚಿತ್ರಕ್ಕೆ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿವೆ. 2024ರಲ್ಲಿ ಶೂಟಿಂಗ್​ ಆರಂಭ ಆಗಲಿದೆ. ಆಗ ರಿಲೀಸ್ ದಿನಾಂಕದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಜಯ್​ ದೇವಗನ್​ ಅವರು ಹಲವು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ. ಈ ಪೈಕಿ ಕೆಲವು ಕೈ ಹಿಡಿದಿವೆ, ಇನ್ನೂ ಕೆಲವು ಕೈ ಕೊಟ್ಟಿವೆ. ಮಾರ್ಚ್​ 30ರಂದು ‘ಭೋಲಾ’ ಸಿನಿಮಾ ರಿಲೀಸ್ ಆಯಿತು. ಇದು ತಮಿಳಿನ ‘ಕೈದಿ’ ಚಿತ್ರದ ರಿಮೇಕ್​. ‘ಭೋಲಾ’ 3ಡಿ ಅವತರಣಿಕೆಯಲ್ಲಿ ಮೂಡಿಬಂದಿತ್ತು. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಅಜಯ್​ ದೇವಗನ್​ ಮಾಡಿದ್ದರು. ಆದರೆ, ಸಿನಿಮಾ ಗೆಲ್ಲಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ