AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drishyam 3: ‘ದೃಶ್ಯಂ 3’ ಚಿತ್ರಕ್ಕೆ ಒಟ್ಟಿಗೆ ಶೂಟಿಂಗ್​ ಮಾಡ್ತಾರೆ ಅಜಯ್​ ದೇವಗನ್​, ಮೋಹನ್​ ಲಾಲ್​; ಏನಿದು ಟ್ವಿಸ್ಟ್​?

Ajay Devgn | Mohanlal: ಭಾರಿ ನಿರೀಕ್ಷೆ ಮೂಡಿಸಿರುವ ‘ದೃಶ್ಯಂ 3’ ಚಿತ್ರಕ್ಕೆ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಶೂಟಿಂಗ್​ ಆರಂಭ ಆಗಲಿದೆ.

Drishyam 3: ‘ದೃಶ್ಯಂ 3’ ಚಿತ್ರಕ್ಕೆ ಒಟ್ಟಿಗೆ ಶೂಟಿಂಗ್​ ಮಾಡ್ತಾರೆ ಅಜಯ್​ ದೇವಗನ್​, ಮೋಹನ್​ ಲಾಲ್​; ಏನಿದು ಟ್ವಿಸ್ಟ್​?
ಅಜಯ್ ದೇವಗನ್, ಮೋಹನ್ ಲಾಲ್
ಮದನ್​ ಕುಮಾರ್​
|

Updated on:Mar 08, 2023 | 6:48 PM

Share

ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರ ಫೇವರಿಟ್​ ಪಟ್ಟಿಯಲ್ಲಿ ‘ದೃಶ್ಯಂ’ ಹಾಗೂ ‘ದೃಶ್ಯಂ 2’ ಚಿತ್ರಗಳಿಗೆ ಯಾವಾಗಲೂ ಸ್ಥಾನ ಇದ್ದೇ ಇರುತ್ತದೆ. ಮಲಯಾಳಂನಲ್ಲಿ ಮೂಡಿಬಂದ ಈ ಎರಡೂ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ರಿಮೇಕ್​ ಆಗಿಯೂ ಯಶಸ್ಸು ಕಂಡಿವೆ. ಮೋಹನ್​ ಲಾಲ್ (Mohanlal)​ ಅವರು ಈ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನ ಗೆದ್ದರು. ಬಳಿಕ ಅದನ್ನೇ ಹಿಂದಿಯಲ್ಲಿ ರಿಮೇಕ್​ ಮಾಡಿ ಅಜಯ್​ ದೇವಗನ್​ ಕೂಡ ಗೆಲುವಿನ ರುಚಿ ಕಂಡರು. ಈಗ ‘ದೃಶ್ಯಂ 3’ (Drishyam 3 Movie) ಚಿತ್ರಕ್ಕೆ ಸಿದ್ಧತೆ ನಡೆಯುತ್ತಿದೆ. ವಿಶೇಷ ಏನೆಂದರೆ ಅಜಯ್​ ದೇವಗನ್​ (Ajay Devgn) ಹಾಗೂ ಮೋಹನ್​​ ಲಾಲ್​ ಅವರು ಈ ಸಿನಿಮಾಗೆ ಒಟ್ಟಿಗೆ ಚಿತ್ರೀಕರಣ ಮಾಡಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

‘ದೃಶ್ಯಂ’ ಮತ್ತು ‘ದೃಶ್ಯಂ 2’ ಚಿತ್ರಗಳು ಮಲಯಾಳಂನಲ್ಲಿ ರಿಲೀಸ್​ ಆಗಿ ಹಲವು ತಿಂಗಳು ಕಳೆದ ಬಳಿಕ ಹಿಂದಿಗೆ ರಿಮೇಕ್​ ಆಯಿತು. ಒಟಿಟಿ ವ್ಯಾಪ್ತಿ ಹಿರಿದಾಗಿರುವ ಈ ಕಾಲದಲ್ಲಿ ಪ್ರೇಕ್ಷಕರು ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಹಾಗಾಗಿ ರಿಮೇಕ್​ ಚಿತ್ರಗಳು ಥಿಯೇಟರ್​​ನಲ್ಲಿ ಗೆಲ್ಲುವ ಚಾನ್ಸ್​ ಕಡಿಮೆ ಇರುತ್ತದೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಚಿತ್ರಗಳು ಹಿಂದಿಯಲ್ಲಿ ರಿಮೇಕ್​ ಆಗಿ ಹೇಗೋ ಗೆದ್ದವು. ಆದರೆ ‘ದೃಶ್ಯಂ 3’ ವಿಚಾರದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ: ‘ದೃಶ್ಯಂ 2’ನಿಂದ ದೊಡ್ಡ ಗೆಲುವು ಕಂಡ ಅಜಯ್ ದೇವಗನ್; ಇಲ್ಲಿವೆ ಅವರ ಟಾಪ್ 5 ಚಿತ್ರಗಳು

ಇದನ್ನೂ ಓದಿ
Image
Drishyam 2 Collection: ಸೋತಿದ್ದ ಬಾಲಿವುಡ್​ಗೆ ‘ದೃಶ್ಯಂ 2’ ಚಿತ್ರದಿಂದ ಹೊಸ ಚೈತನ್ಯ; ಮೂರೇ ದಿನಕ್ಕೆ 64 ಕೋಟಿ ರೂ. ಕಮಾಯಿ
Image
Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..
Image
Mohanlal: ‘ದೃಶ್ಯಂ 3’ ಬರೋದು ಖಚಿತ; ನಿರ್ಮಾಪಕರಿಂದಲೇ ಹೊರಬಿತ್ತು ಅಧಿಕೃತ ಮಾಹಿತಿ
Image
ಮೊದಲ ಪ್ರೇಮಿಯ ಜೊತೆ ಸೇರಿ ತನ್ನದೇ ಮನೆಯ ತಿಜೋರಿ ಚೋರಿ ಮಾಡಿದ ವಿವಾಹಿತೆ! ಕಡೂರಿನಲ್ಲಿ ದೃಶ್ಯಂ ಸೀಕ್ವೆಲ್

ಮೊದಲು ಮಲಯಾಳಂನ ‘ದೃಶ್ಯಂ 3’ ರಿಲೀಸ್​ ಆಗಿ, ನಂತರ ಹಿಂದಿಯ ರಿಮೇಕ್​ ಬಂದರೆ ಹಿಂದಿ ಪ್ರೇಕ್ಷಕರಿಗೆ ಸಸ್ಪೆನ್ಸ್​ ಉಳಿದಿರುವುದಿಲ್ಲ. ಅದರ ಬದಲು ಏಕಕಾಲಕ್ಕೆ ರಿಲೀಸ್​ ಮಾಡುವುದು ಉತ್ತಮ ಎಂದು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದವರು ಅಧಿಕೃತ ಮಾಹಿತಿ ಹಂಚಿಕೊಳ್ಳುವುದು ಬಾಕಿ ಇದೆ.

ಇದನ್ನೂ ಓದಿ: ಇಂಗ್ಲಿಷ್, ಕೊರಿಯನ್, ಚೈನೀಸ್​ ಸೇರಿ ಹಲವು ಭಾಷೆಗಳಿಗೆ ರಿಮೇಕ್ ಆಗಲಿದೆ ‘ದೃಶ್ಯಂ’ ಸಿನಿಮಾ

ಸದ್ಯಕ್ಕೆ ‘ದೃಶ್ಯಂ 3’ ಚಿತ್ರಕ್ಕೆ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಶೂಟಿಂಗ್​ ಕೂಡ ಆರಂಭ ಆಗಲಿದೆ. ಆಗ ಸ್ಪಷ್ಟ ಚಿತ್ರಣ ಸಿಗಲಿದೆ. ಅಜಯ್​ ದೇವಗನ್​ ಅವರಿಗೆ ರಿಮೇಕ್​ ಸಿನಿಮಾಗಳು ಕೈ ಹಿಡಿದಿವೆ. ಈ ವರ್ಷ ಅವರು ‘ಭೋಲಾ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ. ಅದು ತಮಿಳಿನ ‘ಕೈದಿ’ ಚಿತ್ರದ ರಿಮೇಕ್​.

ಮಾರ್ಚ್​ 30ರಂದು ‘ಭೋಲಾ’ ಸಿನಿಮಾ ತೆರೆ ಕಾಣಲಿದೆ. ಇದು 3ಡಿ ಅವತರಣಿಕೆಯಲ್ಲಿ ಮೂಡಿಬಂದಿದೆ ಎಂಬುದು ವಿಶೇಷ. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಅಜಯ್​ ದೇವಗನ್​ ಮಾಡಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಟಬು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:16 pm, Wed, 8 March 23

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!