AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲಿಷ್, ಕೊರಿಯನ್, ಚೈನೀಸ್​ ಸೇರಿ ಹಲವು ಭಾಷೆಗಳಿಗೆ ರಿಮೇಕ್ ಆಗಲಿದೆ ‘ದೃಶ್ಯಂ’ ಸಿನಿಮಾ

ಮೂಲ ಚಿತ್ರದಲ್ಲಿ ಮೋಹನ್​​ಲಾಲ್, ಜೀತು ಜೊಸೆಫ್​, ಮೀನಾ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ಜೀತು ಜೊಸೆಫ್ ನಿರ್ದೇಶನ ಮಾಡಿದ್ದರು.

ಇಂಗ್ಲಿಷ್, ಕೊರಿಯನ್, ಚೈನೀಸ್​ ಸೇರಿ ಹಲವು ಭಾಷೆಗಳಿಗೆ ರಿಮೇಕ್ ಆಗಲಿದೆ ‘ದೃಶ್ಯಂ’ ಸಿನಿಮಾ
ದೃಶ್ಯಂ 2 ಚಿತ್ರದಲ್ಲಿ ಮೋಹನ್​ಲಾಲ್
ರಾಜೇಶ್ ದುಗ್ಗುಮನೆ
|

Updated on: Feb 09, 2023 | 7:14 AM

Share

ಮಲಯಾಳಂನ ‘ದೃಶ್ಯಂ’ (Drishyam) ಹಾಗೂ ‘ದೃಶ್ಯಂ 2’ ಸಿನಿಮಾಗಳು ಸೂಪರ್ ಹಿಟ್ ಆದವು. ಕನ್ನಡ, ಹಿಂದಿ ಮೊದಲಾದ ಭಾಷೆಗಳಿಗೆ ಈ ಸಿನಿಮಾನ ರಿಮೇಕ್ ಮಾಡಲಾಯಿತು. ಅಲ್ಲಿಯೂ ಸಿನಿಮಾ ಹಿಟ್ ಆದವು. ಹಿಂದಿಯಲ್ಲಿ ಈ ಚಿತ್ರವನ್ನು ರಿಮೇಕ್ ಮಾಡುವ ಹಕ್ಕನ್ನು ಪನೋರಮ ಸ್ಟುಡಿಯೋಸ್ ಇಂಟರ್​ನ್ಯಾಷನಲ್ ಪಡೆದುಕೊಂಡಿತ್ತು. ಈಗ ಇವರು ವಿದೇಶಿ ಭಾಷೆಗಳ ರಿಮೇಕ್ ಹಕ್ಕನ್ನು ಪಡೆದಿದ್ದಾರೆ. ಈ ಮೂಲಕ ಚೈನೀಸ್ (Chinees) ಮೊದಲಾದ ಭಾಷೆಗಳಿಗೆ ಈ ಸಿನಿಮಾನ ರಿಮೇಕ್ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಪನೋರಮ ಸ್ಟುಡಿಯೋಸ್ ಇಂಟರ್​ನ್ಯಾನಲ್ ಕಡೆಯಿಂದಲೇ ಮಾಹಿತಿ ಸಿಕ್ಕಿದೆ. ‘ಹಿಂದಿಯಲ್ಲಿ ದೃಶ್ಯಂ 2 ಯಶಸ್ಸು ಕಂಡಿತು. ಈ ಬೆನ್ನಲ್ಲೇ ನಾವು ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕನ್ನು ಪಡೆದಿದ್ದೇವೆ. ಸದ್ಯ ನಾವು ಕೊರಿಯನ್, ಜಪಾನೀಸ್ ಹಾಗೂ ಹಾಲಿವುಡ್​​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಪನೋರಮ ಸ್ಟುಡಿಯೋಸ್ ಇಂಟರ್​ನ್ಯಾಷನಲ್ ತಿಳಿಸಿದೆ.

ಮೂಲ ಚಿತ್ರದಲ್ಲಿ ಮೋಹನ್​​ಲಾಲ್, ಜೀತು ಜೊಸೆಫ್​, ಮೀನಾ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ಜೀತು ಜೊಸೆಫ್ ನಿರ್ದೇಶನ ಮಾಡಿದ್ದರು. ಕಿರುಕುಳ ಕೊಡುತ್ತಿರುವ ವ್ಯಕ್ತಿಯನ್ನು ಕಥಾನಾಯಕನ ಕುಟುಂಬದವರು ಹತ್ಯೆ ಮಾಡುತ್ತಾರೆ. ಆ ಹೆಣವನ್ನು ನಿರ್ಮಾಣ ಆಗುತ್ತಿರುವ ಪೊಲೀಸ್ ಠಾಣೆ ಒಳಗೆ ಹುಗಿದು ಹಾಕುತ್ತಾನೆ. ಈ ಪ್ರಕರಣದಿಂದ ಆತ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾದ ಕಥೆ.

‘ದೃಶ್ಯಂ 2’ ಚಿತ್ರದಲ್ಲಿ ಪೊಲೀಸ್ ಠಾಣೆ ಅಡಿಯಲ್ಲಿ ಮೂಳೆಗಳು ಇವೆ ಎಂಬ ವಿಚಾರ ರಿವೀಲ್ ಆಗುತ್ತದೆ. ಇದರಿಂದಲೂ ಕಥಾನಾಯಕ ತಪ್ಪಿಸಿಕೊಳ್ಳುತ್ತಾನೆ. ಅದು ‘ದೃಶ್ಯಂ 2’ನ ಸಸ್ಪೆನ್ಸ್​. ಕನ್ನಡದಲ್ಲಿ ರವಿಚಂದ್ರನ್ ಅವರು ಮುಖ್ಯ ಪಾತ್ರ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ