ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗಿವೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜತೆ ಆಪ್ತವಾಗಿದ್ದ ವಿಚಾರದಲ್ಲಿ ಅವರಿಗೆ ತೊಂದರೆ ಎದುರಾಗಿದೆ.
1 / 5
ಜಾಕ್ವೆಲಿನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರು ಪದೇ ಪದೇ ಇಡಿ ಕಚೇರಿ ಮೆಟ್ಟಿಲು ಹತ್ತಬೇಕಾಗಿದೆ.
2 / 5
ಈ ಕಾರಣಕ್ಕೆ ಜಾಕ್ವೆಲಿನ್ ಅವರು ಮನಶಾಂತಿ ಅರಸಿ ಜಮ್ಮು-ಕಾಶ್ಮೀರದಲ್ಲಿರುವ ವೈಷ್ಣವಿ ದೇವಿ ದೇವಸ್ಥಾನಕ್ಕೆ ತೆರಳಿದ್ದಾರೆ.
3 / 5
ಅಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಜಾಕ್ವೆಲಿನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.
4 / 5
ಜಾಕ್ವೆಲಿನ್ ಅವರು ಶ್ರೀಲಂಕಾ ಮೂಲದವರು. ಬಾಲಿವುಡ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ವಿದೇಶಕ್ಕೆ ತೆರಳಲು ಅವಕಾಶ ಕೋರಿದ್ದರು. ಆದರೆ, ಕೋರ್ಟ್ ಇದನ್ನು ನಿರಾಕರಿಸಿತ್ತು.