Kangana Ranaut: ಕಂಗನಾ ರಣಾವತ್​ ನಿರ್ಮಾಣದ ಸಿನಿಮಾಗೆ ನೆಗೆಟಿವ್​ ವಿಮರ್ಶೆ; ಮೂವೀ ಮಾಫಿಯಾ ಮೇಲೆ ಆರೋಪ ಹೊರಿಸಿದ ನಟಿ

Avneet Kaur: ‘ಟೀಕು ವೆಡ್ಸ್​ ಶೇರು’ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ನಡುವೆ ವಯಸ್ಸಿನ ಅಂತರ ಜಾಸ್ತಿ ಇದೆ. ಇದರ ಬಗ್ಗೆ ಒಂದು ವರ್ಗದ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Kangana Ranaut: ಕಂಗನಾ ರಣಾವತ್​ ನಿರ್ಮಾಣದ ಸಿನಿಮಾಗೆ ನೆಗೆಟಿವ್​ ವಿಮರ್ಶೆ; ಮೂವೀ ಮಾಫಿಯಾ ಮೇಲೆ ಆರೋಪ ಹೊರಿಸಿದ ನಟಿ
ಕಂಗನಾ ರಣಾವತ್​
Follow us
ಮದನ್​ ಕುಮಾರ್​
|

Updated on: Jun 23, 2023 | 5:42 PM

ನಟಿ ಕಂಗನಾ ರಣಾವತ್​ (Kangana Ranaut) ಅವರು ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣದಲ್ಲೂ ಆಸಕ್ತಿ ಹೊಂದಿದ್ದಾರೆ. ಅವರ ಒಡೆತನದ ‘ಮಣಿಕರ್ಣಿಕಾ ಫಿಲ್ಮ್ಸ್​’ ಬ್ಯಾನರ್​ ಮೂಲಕ ಅವರು ಇತರ ನಟ-ನಟಿಯರಿಗೆ, ತಂತ್ರಜ್ಞರಿಗೆ ಅವಕಾಶ ನೀಡುತ್ತಿದ್ದಾರೆ. ಈ ಸಂಸ್ಥೆಯಿಂದ ‘ಟೀಕು ವೆಡ್ಸ್​ ಶೇರು’ (Tiku weds Sheru) ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ಈ ಚಿತ್ರವನ್ನು ನೋಡಿದ ಕೆಲವರು ನೆಗೆಟಿವ್​ ವಿಮರ್ಶೆ ನೀಡುತ್ತಿದ್ದಾರೆ. ಅದು ಕಂಗನಾಗೆ ಬೇಸರ ಮೂಡಿಸಿದೆ. ನವಾಜುದ್ದೀನ್​ ಸಿದ್ಧಿಕಿ (Nawazuddin Siddiqui) ಮತ್ತು ಅವನೀತ್​ ಕೌರ್​ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಹಲವು ವಿಚಾರಗಳ ಬಗ್ಗೆ ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಇದೆಲ್ಲವೂ ಮೂವೀ ಮಾಫಿಯಾದವರ ಕೈವಾಡ ಎಂದು ಕಂಗನಾ ರಣಾವತ್​ ಆರೋಪಿಸಿದ್ದಾರೆ.

ಭಾರತೀಯ ಚಿತ್ರರಂಗದ ಅನೇಕ ವಿಚಾರಗಳ ಬಗ್ಗೆ ಕಂಗನಾ ರಣಾವತ್​ ಅವರು ಟೀಕೆ ಮಾಡುತ್ತಾರೆ. ತಮಗೆ ಸಂಬಂಧವೇ ಇಲ್ಲದ ವಿಚಾರದಲ್ಲೂ ಅವರು ಮೂಗು ತೂರಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಅವರನ್ನು ಜನರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಕಂಗನಾ ಅವರೇ ತಪ್ಪು ಮಾಡಿದರೆ ನೆಟ್ಟಿಗರು ಖಂಡಿತವಾಗಿಯೂ ಛಾಟಿ ಬೀಸುತ್ತಾರೆ. ಈಗ ಅವರು ನಿರ್ಮಾಣ ಮಾಡಿರುವ ‘ಟೀಕು ವೆಡ್ಸ್​ ಶೇರು’ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ನಡುವೆ ವಯಸ್ಸಿನ ಅಂತರ ಜಾಸ್ತಿ ಇದೆ. ಇದರ ಬಗ್ಗೆ ಒಂದು ವರ್ಗದ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kangana Ranaut: ಚಿಕ್ಕ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿಗೆ ಕಂಗನಾ ರಣಾವತ್​ ಕ್ಲಾಸ್​; ವೈರಲ್​ ಆಯ್ತು ಫೋಟೋ

ನವಾಜುದ್ದೀನ್​ ಸಿದ್ಧಿಕಿ ಮತ್ತು ಅವನೀತ್​ ಕೌರ್​ ಅವರು ಕಿಸ್​ ಮಾಡುವ ದೃಶ್ಯ ಈ ಸಿನಿಮಾದಲ್ಲಿ ಇದೆ. ನವಾಜುದ್ದೀನ್​ ಸಿದ್ಧಿಕಿ ಅವರಿಗೆ 49 ವರ್ಷ ವಯಸ್ಸು. ಅವನೀತ್​ ಕೌರ್​ ಅವರಿಗೆ ಇನ್ನೂ 21ರ ಪ್ರಾಯ. ಇಷ್ಟು ದೊಡ್ಡ ಏಜ್​ ಗ್ಯಾಪ್​ ಇರುವ ಕಲಾವಿದರು ಜೋಡಿಯಾಗಿ ನಟಿಸಿದ್ದು ಸರಿಯಲ್ಲ ಎಂಬುದು ಕೆಲವರ ತಕರಾರು. ಆದರೆ ಇಂಥ ಟೀಕೆಗಳಿಗೆ ಪ್ರೇಕ್ಷಕರು ಕಿವಿ ಕೊಡಬಾರದು ಎಂದು ಕಂಗನಾ ಹೇಳಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಮೂವೀ ಮಾಫಿಯಾ ವಿಚಾರ ಬಂದ್ರೆ ನೀವೆಲ್ಲ ಸೈಲೆಂಟ್ ಆಗ್ತೀರಿ’; ಮತ್ತೆ ಸಿಟ್ಟಾದ ಕಂಗನಾ ರಣಾವತ್

‘ವಯಸ್ಸಿನ ವಿಚಾರ ಇಟ್ಟುಕೊಂಡು ಮೂವೀ ಮಾಫಿಯಾದವರು ಮಾಡುತ್ತಿರುವ ವಿವಾದದಿಂದ ಏನೂ ಲಾಭ ಇಲ್ಲ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ. ‘ನನ್ನ ಸಿನಿಮಾವನ್ನು ಹಾಳು ಮಾಡಲು ಮೂವೀ ಮಾಫಿಯಾದವರು ಪ್ರಯತ್ನಿಸುತ್ತಿದ್ದಾರೆ. ಚಿತ್ರ ರಿಲೀಸ್​ ಆಗುವುದಕ್ಕೂ ಮುನ್ನವೇ ಸುಳ್ಳು ವಿಮರ್ಶೆಗಳು ಮತ್ತು ಅಪಪ್ರಚಾರ ನಡೆಯುತ್ತಿದೆ. ಈಗ ನಮ್ಮ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ನೀವೇ ಸ್ವತಃ ನೋಡಿ. ನಿಮ್ಮ ಸ್ನೇಹಿತರ ಅಭಿಪ್ರಾಯ ಕೇಳಿ. ಪೇಯ್ಡ್​ ವಿಮರ್ಶೆಗಳು ಮತ್ತು ನಕಲಿ ಟ್ರೆಂಡ್​ಗಳನ್ನು ನಂಬಬೇಡಿ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು