Kangana Ranaut: ಚಿಕ್ಕ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿಗೆ ಕಂಗನಾ ರಣಾವತ್​ ಕ್ಲಾಸ್​; ವೈರಲ್​ ಆಯ್ತು ಫೋಟೋ

Kangana Ranaut Twitter: ನಟಿ ಕಂಗನಾ ರಣಾವತ್​ ಅವರು ಸಿನಿಮಾ ಮಾತ್ರವಲ್ಲದೇ ಇತರೆ ಅನೇಕ ಕಾರಣಗಳಿಂದಲೂ ಸುದ್ದಿ ಆಗುತ್ತಾರೆ. ಈಗ ಅವರೊಂದು ಪೋಸ್ಟ್​ ಮಾಡಿದ್ದು, ಯುವತಿಯೊಬ್ಬರ ಬಟ್ಟೆ ಬಗ್ಗೆ ಕಮೆಂಟ್​ ಮಾಡಿದ್ದಾರೆ.

Kangana Ranaut: ಚಿಕ್ಕ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿಗೆ ಕಂಗನಾ ರಣಾವತ್​ ಕ್ಲಾಸ್​; ವೈರಲ್​ ಆಯ್ತು ಫೋಟೋ
ಕಂಗನಾ ರಣಾವತ್, ಯುವತಿಯ ವೈರಲ್​ ಫೋಟೋ
Follow us
|

Updated on: May 26, 2023 | 11:35 AM

ನಟಿ ಕಂಗನಾ ರಣಾವತ್​ (Kangana Ranaut) ಅವರು ಸಿನಿಮಾ ಮಾತ್ರವಲ್ಲದೇ ಇತರೆ ಅನೇಕ ಕಾರಣಗಳಿಂದಲೂ ಸುದ್ದಿ ಆಗುತ್ತಾರೆ. ಈಗ ಅವರೊಂದು ಪೋಸ್ಟ್​ ಮಾಡಿದ್ದು, ಯುವತಿಯೊಬ್ಬರ ಬಟ್ಟೆ ಬಗ್ಗೆ ಕಮೆಂಟ್​ ಮಾಡಿದ್ದಾರೆ. ದೇವಸ್ಥಾನಕ್ಕೆ ಬರುವಾಗ ಸರಿಯಾಗಿ ಬಟ್ಟೆ ಧರಿಸಿಕೊಂಡು ಬರಬೇಕು ಎಂದು ಕಂಗನಾ ಅವರು ವಾದಿಸಿದ್ದಾರೆ. ಅವರ ಈ ಅಭಿಪ್ರಾಯದ ಬಗ್ಗೆ ನೆಟ್ಟಿಗರಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ. ಹಿಮಾಚಲ ಪ್ರದೇಶದ ಬೈಜನಾಥ್ ದೇವಸ್ಥಾನಕ್ಕೆ ಬಂದ ಯುವತಿಯು ಚಿಕ್ಕ ಬಟ್ಟೆ ಧರಿಸಿದ್ದರು. ಆ ಫೋಟೋವನ್ನು ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ಅವರು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ. ‘ನೈಟ್​ ಡ್ರೆಸ್​ ಧರಿಸಿದ ಈ ಕೋಡಂಗಿಗಳು ಇದನ್ನೇ ಸಹಜವಾದ ಬಟ್ಟೆ ಎಂದುಕೊಳ್ಳುತ್ತಾರೆ. ಇಂಥವರು ಸೋಮಾರಿಗಳಲ್ಲದೇ ಮತ್ತೇನೂ ಅಲ್ಲ. ಅದನ್ನು ಹೊರತುಪಡಿಸಿ ಅವರಿಗೆ ಬೇರೆ ಯಾವುದೇ ಉದ್ದೇಶ ಇರುತ್ತದೆ ಅಂತ ನನಗೆ ಅನಿಸಲ್ಲ. ಇಂಥ ಮೂರ್ಖರಿಗಾಗಿ ಕಠಿಣ ನಿಯಮ ಇರಬೇಕು’ ಎಂದು ಕಂಗನಾ ರಣಾವತ್​ ಅವರು ಟ್ವೀಟ್​ (Kangana Ranaut Tweet) ಮಾಡಿದ್ದಾರೆ.

‘ಇವೆಲ್ಲವೂ ಪಾಶ್ಚಿಮಾತ್ಯ ಜನರು ಸಿದ್ಧಪಡಿಸಿದ ಮತ್ತು ಪ್ರಮೋಟ್​ ಮಾಡಿದ ಬಟ್ಟೆಗಳು. ನಾನು ಒಮ್ಮೆ ವ್ಯಾಟಿಕನ್​ ಸಿಟಿಗೆ ಹೋಗಿದ್ದೆ. ಶಾರ್ಟ್ಸ್​ ಮತ್ತು ಟಿ ಶರ್ಟ್​ ಧರಿಸಿದ್ದಕ್ಕೆ ನನ್ನನ್ನು ಒಳಗೆ ಬಿಡಲಿಲ್ಲ. ನಾನು ವಾಪಸ್​ ಹೋಟೆಲ್​ಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಬೇಕಾಯಿತು’ ಎಂದು ಕಂಗನಾ ರಣಾವತ್​ ಅವರು ಟ್ವೀಟ್​ ಮಾಡಿದ್ದಾರೆ. ಕೆಲವರು ಕಂಗನಾ ಮಾತಿಗೆ ಸಹಮತ ಸೂಚಿಸಿದ್ದಾರೆ. ಆದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಇದು ಬರೀ ಬೂಟಾಟಿಕೆ. ನೀವು ಸಿನಿಮಾದಲ್ಲಿ ಇಂಥ ಬಟ್ಟೆಗಳನ್ನು ಪ್ರಮೋಟ್​ ಮಾಡುತ್ತೀರಿ. ಅದನ್ನೇ ಜನರು ಹಾಕಿಕೊಂಡಾಗ ನಿಮಗೆ ತೊಂದರೆ ಆಗುತ್ತದೆ’ ಎಂದು ನೆಟ್ಟಿಗರೊಬ್ಬರು ಟೀಕೆ ಮಾಡಿದ್ದಾರೆ. ‘ಈಗ ಸ್ತ್ರೀವಾದಿಗಳೆಲ್ಲ ಬಂದು ಬಿಡುತ್ತಾರೆ ನೋಡಿ..’ ಎಂಬ ಕಮೆಂಟ್​ ಕೂಡ ಬಂದಿದೆ.

ಕೇದರನಾಥ ದೇವಸ್ಥಾನಕ್ಕೆ ತೆರಳಿದ ಕಂಗನಾ:

ಇತ್ತೀಚೆಗೆ ವಿಜಯೇಂದ್ರ ಪ್ರಸಾದ್​, ಕಂಗನಾ ರಣಾವತ್​ ಮುಂತಾದವರು ಕೇದರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಕಂಗನಾ ರಣಾವತ್​ ಫ್ಯಾನ್ಸ್​ ಖಾತೆಗಳಲ್ಲಿ ಈ ಫೋಟೋಗಳು ವೈರಲ್​ ಆಗಿತ್ತು. ವಿಶೇಷವಾದ ವಿಡಿಯೋವನ್ನು ಕೂಡ ಕಂಗನಾ ಅವರು ಹಂಚಿಕೊಂಡಿದ್ದರು. ಇದರಲ್ಲಿ ಅವರು ‘ಹರ ಹರ ಮಹದೇವ’ ಎಂದು ಶಿವನ ಸ್ಮರಣೆ ಮಾಡಿದ್ದರು. ದೇವರ ಬಗ್ಗೆ ಕಂಗನಾ ರಣಾವತ್​ ಅವರಿಗೆ ತುಂಬ ಭಕ್ತಿ ಇದೆ. ಹಬ್ಬಗಳನ್ನು ಅವರು ಶ್ರದ್ಧೆಯಿಂದ ಆಚರಿಸುತ್ತಾರೆ. ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ‘ಅಂತೂ ಇವತ್ತು ಕೇದಾರನಾಥದಲ್ಲಿ ದೇವರ ದರ್ಶನ ಆಯಿತು. ಅದು ಕೂಡ ಪೂಜ್ಯರಾದ ಕೈಲಾಸಾನಂದ ಮಹಾರಾಜ್​ ಮತ್ತು ವಿಜಯೇಂದ್ರ ಪ್ರಸಾದ್​ ಅವರ ಜೊತೆ. ಧನ್ಯವಾದಗಳು ಉಮೇಶ್​ ಅಣ್ಣ’ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: Kangana Ranaut: ಕಂಗನಾ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್

ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಗನಾ ರಣಾವತ್ ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಈ ಸಿನಿಮಾ ಪೋಸ್ಟ್​ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ವಿಶೇಷ ಎಂದರೆ ವಿಜಯೇಂದ್ರ ಪ್ರಸಾದ್ ಅವರು ಈ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ್ದಾರೆ. ಅವರಿಗೆ ಈ ಸಿನಿಮಾ ಇಷ್ಟವಾಗಿದೆ. ಅಷ್ಟೇ ಅಲ್ಲ ಅನೇಕ ದೃಶ್ಯಗಳನ್ನು ನೋಡಿ ಅವರು ಕಣ್ಣೀರು ಹಾಕಿದ್ದಾರೆ ಎಂಬ ವಿಚಾರವನ್ನು ಸ್ವತಃ ಕಂಗನಾ ರಣಾವತ್ ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!