ಒಂದೆಡೆ ಸೇರಿದ ಆಮಿರ್, ಸಲ್ಮಾನ್ ಹಾಗೂ ಶಾರುಖ್ ಖಾನ್; ಮುಂಜಾನೆ ನಾಲ್ಕು ಗಂಟೆವರೆಗೆ ಪಾರ್ಟಿ

ಸೆಲೆಬ್ರಿಟಿಗಳ ಮನೆಯಲ್ಲಿ ಆಗಾಗ ಪಾರ್ಟಿ ನಡೆಯುತ್ತಿರುತ್ತದೆ. ಆದರೆ, ಈ ವಿಚಾರ ಗುಟ್ಟಾಗಿ ಇಡಲಾಗುತ್ತದೆ. ಈಗ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿ ವಿಚಾರ ಲೀಕ್ ಆಗಿದೆ.

ಒಂದೆಡೆ ಸೇರಿದ ಆಮಿರ್, ಸಲ್ಮಾನ್ ಹಾಗೂ ಶಾರುಖ್ ಖಾನ್; ಮುಂಜಾನೆ ನಾಲ್ಕು ಗಂಟೆವರೆಗೆ ಪಾರ್ಟಿ
ಶಾರುಖ್​, ಶಾರುಖ್​, ಆಮಿರ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: May 26, 2023 | 8:21 AM

ಆಮಿರ್ ಖಾನ್, ಸಲ್ಮಾನ್ ಖಾನ್ (Salman Khan) ಹಾಗೂ ಶಾರುಖ್ ಖಾನ್ ಬಾಲಿವುಡ್​ನ ಸಕ್ಸಸ್​ಫುಲ್ ಹೀರೋಗಳು. ಇವರ ಮಧ್ಯೆ ಆಗಾಗ ಭಿನ್ನಾಭಿಪ್ರಾಯ ಬಂದು ಒಬ್ಬರ ಮುಖ ಒಬ್ಬರು ನೋಡಿಕೊಳ್ಳದೇ ಇರುವ ಪರಿಸ್ಥಿತಿ ಬಂದಿದ್ದೂ ಇದೆ. ಆದರೆ, ಈಗ ಕಾಲ ಬದಲಾಗಿದೆ. ಮೂವರ ಮಧ್ಯೆ ಅನ್ಯೋನ್ಯತೆ ಇದೆ. ಇತ್ತೀಚೆಗೆ ಈ ಮೂವರು ಒಂದೆಡೆ ಸೇರಿದ್ದಾರೆ. ಒಟ್ಟಾಗಿ ಮೂವರು ಪಾರ್ಟಿ ಮಾಡಿದ್ದಾರೆ. ಮುಂಜಾನೆ ನಾಲ್ಕು ಗಂಟೆವರೆಗೆ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ.

ಸೆಲೆಬ್ರಿಟಿಗಳ ಮನೆಯಲ್ಲಿ ಆಗಾಗ ಪಾರ್ಟಿ ನಡೆಯುತ್ತಿರುತ್ತದೆ. ಆದರೆ, ಈ ವಿಚಾರ ಗುಟ್ಟಾಗಿ ಇಡಲಾಗುತ್ತದೆ. ಈಗ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿ ವಿಚಾರ ಲೀಕ್ ಆಗಿದೆ. ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದಲ್ಲಿರುವ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಈ ಮೂವರು ಸೇರಿದ್ದಾರೆ. ಮೇ 16ರಂದು ಈ ಗೆಟ್​​ಟುಗೆದರ್ ನಡೆದಿದೆ.

ಆಮಿರ್ ಖಾನ್ ಅವರು ಈ ಪಾರ್ಟಿಗೆ ಮೊದಲು ಬಂದರು. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ‘ಟೈಗರ್ 3’ ಸೆಟ್​ನಿಂದ ನೇರವಾಗಿ ಈ ಪಾರ್ಟಿಗೆ ತೆರಳಿದ್ದಾರೆ. ಈ ಪಾರ್ಟಿ ವೇಳೆ ತಮ್ಮ ವೃತ್ತಿ ಜೀವನಗಳ ಬಗ್ಗೆ ಇವರು ಚರ್ಚೆ ಮಾಡಿದ್ದಾರೆ.

ಸಲ್ಲು, ಶಾರುಖ್​ ಹಾಗೂ ಆಮಿರ್​ಗೆ ಇತ್ತೀಚಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿದ್ದರು. ಈ ಪೈಕಿ ಶಾರುಖ್ ಖಾನ್​ ‘ಟೈಗರ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸಾಧಾರಣ ಗೆಲುವು ಕಂಡಿದೆ. ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: Salman Khan: ಸಲ್ಲುನ ಓಡಿ ಬಂದು ತಬ್ಬಿದ ಅಭಿಮಾನಿ; ನಟನ ರಿಯಾಕ್ಷನ್ ಹೇಗಿತ್ತು?

ರಂಜಾನ್ ಸಂದರ್ಭದಲ್ಲಿ ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಒಂದೆಡೆ ಸೇರಿದ್ದರು. ಈ ವೇಳೆ ಶಾರುಖ್ ಖಾನ್ ಮಿಸ್ ಆಗಿದ್ದರು. ಶಾರುಖ್ ಖಾನ್ ಮಿಸ್ಸಿಂಗ್ ಎಂದು ಅನೇಕರು ಕಮೆಂಟ್ ಮಾಡಿದ್ದರು. ಈಗ ಈ ಮೂವರು ಒಂದೆಡೆ ಸೇರಿದ್ದಾರೆ. ಈ ಫೋಟೋನ ಅವರು ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ