Aamir Khan: ‘ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್ ಖಾನ್ ಮದುವೆ ಆಗ್ತಾರೆ’; ಬ್ರೇಕಿಂಗ್ ನ್ಯೂಸ್ ನೀಡಿದ ಕೆಆರ್ಕೆ
Aamir Khan 3rd Marriage: ಈ ರೀತಿ ಟ್ವೀಟ್ ಮಾಡುವ ಮೂಲಕ ಕಮಾಲ್ ಆರ್. ಖಾನ್ ಅವರು ಸನ್ಸೇಷನ್ ಸೃಷ್ಟಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
‘ಬ್ರೇಕಿಂಗ್ ನ್ಯೂಸ್: ಆಮಿರ್ ಖಾನ್ ಅವರು ತಮ್ಮ ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಜೊತೆ ಮದುವೆ ಆಗ್ತಾರೆ. ಅವರಿಬ್ಬರು ‘ದಂಗಲ್’ ಸಿನಿಮಾದ ಕಾಲದಿಂದಲೂ ಡೇಟಿಂಗ್ ಮಾಡುತ್ತಿದ್ದಾರೆ’. ಈ ರೀತಿ ಟ್ವೀಟ್ ಮಾಡುವ ಮೂಲಕ ಕಮಾಲ್ ಆರ್. ಖಾನ್ (Kamaal R Khan) ಅವರು ಸನ್ಸೇಷನ್ ಸೃಷ್ಟಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ. ಬಾಲಿವುಡ್ನಲ್ಲಿ ನಟನಾಗಿ, ವಿಮರ್ಶಕನಾಗಿ ಕಮಾಲ್ ಆರ್. ಖಾನ್ ಅಲಿಯಾಸ್ ಕೆಆರ್ಕೆ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳ ಬಗ್ಗೆ ಅವರು ಆಕ್ಷೇಪಾರ್ಹವಾಗಿ ಟ್ವೀಟ್ ಮಾಡುತ್ತಾರೆ. ಈಗ ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ (Fatima Sana Shaikh) ನಡುವಿನ ಸಂಬಂಧದ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಆಮಿರ್ ಖಾನ್ (Aamir Khan) ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ.
ಆಮಿರ್ ಖಾನ್ ಅವರು ಕಿರಣ್ ರಾವ್ ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದರು. ವಿಚ್ಛೇದನ ನೀಡಿದ ಬಳಿಕ ಅವರ ಬಗ್ಗೆ ಅನೇಕ ಬಗೆಯ ಗಾಸಿಪ್ಗಳು ಹಬ್ಬಿದ್ದುಂಟು. ಅವರು ನಟಿ ಫಾತಿಮಾ ಸಹಾ ಶೇಖ್ ಜೊತೆ ಹೆಚ್ಚು ಆಪ್ತವಾಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರಿಬ್ಬರ ನಡುವೆ ಇರುವಂತಹ ಸಂಬಂಧ ಎಂಥದ್ದು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಅವರು ಮದುವೆ ಆಗಬಹುದು ಎಂಬ ಗುಮಾನಿ ಕೂಡ ಅನೇಕರಿಗೆ ಇದೆ. ಆ ಗುಮಾನಿ ಹೆಚ್ಚಾಗುವ ರೀತಿಯಲ್ಲಿ ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿತ್ತು.
Breaking News:- Aamir Khan is going to get married with his daughter’s age Fatima Sana Shaikh soon. Aamir Khan is dating Sana from the time of their film #Dangal.
— KRK (@kamaalrkhan) May 25, 2023
ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಒಟ್ಟಾಗಿ ಆಟ ಆಡಿದ್ದಾರೆ. ಆ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆಮಿರ್ ಖಾನ್ ಅಥವಾ ಫಾತಿಮಾ ಸನಾ ಶೇಖ್ ಅವರು ಪ್ರತಿಕ್ರಿಯೆ ನೀಡಬಹುದು ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.
ಆಮಿರ್ ಖಾನ್ ಕುಟುಂಬದ ಜೊತೆ ಫಾತಿಮಾ ಸನಾ ಶೇಖ್ ಅವರು ಹೆಚ್ಚು ಆಪ್ತವಾಗಿದ್ದಾರೆ. ಆಮಿರ್ ಖಾನ್ ಪುತ್ರಿ ಇರಾ ಖಾನ್ ಜೊತೆ ಫಾತಿಮಾಗೆ ಸ್ನೇಹ ಇದೆ. ಈ ಹಿಂದೆ ‘ದಂಗಲ್’ ಮತ್ತು ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಫತಿಮಾ ಸನಾ ಶೇಖ್ ಅವರು ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಆಪ್ತತೆ ಹೆಚ್ಚಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.