ನಟ ವಿಕ್ಕಿ ಕೌಶಲ್ ಅನ್ನು ಬದಿಗೆ ತಳ್ಳಿದ ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ, ವಿಡಿಯೋ ವೈರಲ್

Salman Khan: ಅವಾರ್ಡ್ ಕಾರ್ಯಕ್ರಮದ ಎಂಟ್ರಿ ಗೇಟ್​ನಲ್ಲಿ ದಾರಿಯಲ್ಲಿ ನಿಂತಿದ್ದ ಬಾಲಿವುಡ್ ನಟ ವಿಕ್ಕಿ ಕೌಶಲ್ ಅನ್ನು ಸಲ್ಮಾನ್ ಖಾನ್​ರ ಭದ್ರತಾ ಸಿಬ್ಬಂದಿ ಬದಿಗೆ ತಳ್ಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ನಟ ವಿಕ್ಕಿ ಕೌಶಲ್ ಅನ್ನು ಬದಿಗೆ ತಳ್ಳಿದ ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ, ವಿಡಿಯೋ ವೈರಲ್
ಸಲ್ಮಾನ್ ಖಾನ್
Follow us
ಮಂಜುನಾಥ ಸಿ.
|

Updated on:May 26, 2023 | 9:24 PM

ಸಲ್ಮಾನ್ ಖಾನ್ (Salman Khan), ಸ್ಟಾರ್​ಗಳಿಗೆ ಸ್ಟಾರ್. ಸಾಮಾನ್ಯ ಜನರಿರಲಿ, ಬಾಲಿವುಡ್​ನ (Bollywood) ಹಲವು ನಟರಿಗೂ ಸಲ್ಮಾನ್ ಖಾನ್ ಸುಲಭಕ್ಕೆ ಎಟುಕದ ವ್ಯಕ್ತಿ. ಹೊಸ ತಲೆಮಾರಿನ ಯುವನಟರಂತೂ ಸಲ್ಮಾನ್ ಖಾನ್ ಎದುರು ಸಾಮಾನ್ಯ ಪ್ರೇಕ್ಷಕರೇ ಆಗಿಬಿಡುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಬಾಲಿವುಡ್​ನ ಯುವನಟ ವಿಕ್ಕಿ ಕೌಶಲ್ (Vicky Kaushal)​ ಅನ್ನು ಸಲ್ಮಾನ್ ಖಾನ್ ಬಾಡಿಗಾರ್ಡ್​ಗಳು ಬದಿಗೆ ತಳ್ಳಿರುವ ಘಟನೆ ಇತ್ತೀಚೆಗಷ್ಟೆ ನಡೆದಿದೆ.

ವಿಕ್ಕಿ ಕೌಶಲ್ ಸಾಮಾನ್ಯ ನಟರೇನೂ ಅಲ್ಲ. ಸಣ್ಣ-ಪುಟ್ಟ ಸಿನಿಮಾಗಳನ್ನು ಮಾಡುತ್ತಾ ಬಂದು ಈಗ ಸ್ಟಾರ್ ಯುವನಟರಾಗಿ ಬೆಳೆದು ನಿಂತಿದ್ದಾರೆ. ಐಫಾ 2023 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಕ್ಕಿ ಕೌಶಲ್​, ಕಾರ್ಯಕ್ರಮದ ಎಂಟ್ರಿ ಗೇಟ್​ಬಳಿ ಕೆಲವು ಅಭಿಮಾನಿಗಳೊಟ್ಟಿಗೆ ಫೋಟೊ ತೆಗೆಸಿಕೊಳ್ಳುತ್ತಾ ನಿಂತಿದ್ದರು. ಆಗಲೇ ಅಲ್ಲಿದ್ದ ಜನರ ಚಲನೆ ಜೋರಾಯ್ತು, ಸಣ್ಣಗೆ ನೂಕು-ನುಗ್ಗಲು ಆರಂಭವಾಯ್ತು. ಅದಕ್ಕೆ ಕಾರಣ ಸಲ್ಮಾನ್ ಖಾನ್ ಎಂಟ್ರಿ. ಸಲ್ಮಾನ್ ಖಾನ್ ಬರುವ ದಾರಿಯಲ್ಲಿ ನಿಂತಿದ್ದ ವಿಕ್ಕಿ ಕೌಶಲ್ ಅನ್ನು ಸಲ್ಮಾನ್ ಖಾನ್​ರ ಭದ್ರತಾ ಸಿಬ್ಬಂದಿ ಅನಾಮತ್ತು ಪಕ್ಕಕ್ಕೆ ಸರಿಸಿಬಿಟ್ಟರು. ವಿಕ್ಕಿ ಕೌಶಲ್, ಸಲ್ಮಾನ್ ಖಾನ್​ಗೆ ಹಸ್ತಲಾಘವ ಕೊಡಲು ಯತ್ನಿಸಿದರಾದರೂ ಅದು ಸಹ ಸಾಧ್ಯವಾಗಲಿಲ್ಲ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಲ್ಮಾನ್ ಖಾನ್​ರ ‘ಹವಾ’ ಬಗ್ಗೆ ಅವರ ಅಭಿಮಾನಿಗಳು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ವಿಕ್ಕಿ ಕೌಶಲ್ ಅನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

ವಿಡಿಯೋದಲ್ಲಿ ವಿಕ್ಕಿ ಕೌಶಲ್, ಸಲ್ಮಾನ್ ಖಾನ್ ಜೊತೆ ಏನೋ ಮಾತನಾಡಲು ಯತ್ನಿಸಿದ್ದಾರೆ. ಸಲ್ಮಾನ್ ಖಾನ್ ಸಹ ವಿಕ್ಕಿಯನ್ನು ನೋಡುತ್ತಾರಾದರೂ ಹಾಗೆಯೇ ಮುಂದೆ ಹೋಗಿಬಿಟ್ಟಿದ್ದಾರೆ. ವಿಡಿಯೋ ಬಗ್ಗೆ ಹಲವು ವಿಧವಾದ ಪ್ರತಿಕ್ರಿಯೆಗಳು ಆರಂಭವಾಗಿವೆ. ಕೆಲವರಂತೂ, ಸಲ್ಮಾನ್ ಖಾನ್​ರ ಮಾಜಿ ಗರ್ಲ್​ಫ್ರೆಂಡ್ ಕತ್ರಿನಾ ಕೈಫ್​ಳನ್ನು ವಿಕ್ಕಿ ಕೌಶಲ್ ಮದುವೆ ಆಗಿದ್ದಾರೆ ಆ ಕಾರಣಕ್ಕೆ ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಮಾತಿನ ಬಗ್ಗೆ ಗಮನ ಕೊಡದೆ ನಿರ್ಲಕ್ಷಿಸಿ ಮುಂದೆ ಹೋಗಿದ್ದಾರೆ ಎಂದು ಕುಹುಕವಾಡಿದ್ದಾರೆ.

ವಿಕ್ಕ ಕೌಶಲ್ ತಂದೆ ಶಾಮ್ ಕೌಶಲ್ ಸಲ್ಮಾನ್ ಖಾನ್​ರ ಆಪ್ತ. ಶಾರುಖ್ ಖಾನ್​ಗೂ ಬಹಳ ಆಪ್ತರವರು. ಇಬ್ಬರಿಗೂ ಸ್ಟಂಟ್ ನಿರ್ದೇಶಕರಾಗಿ ಶಾಮ್ ಕೌಶಲ್ ಕೆಲಸ ಮಾಡಿದ್ದಾರೆ. ವಿಕ್ಕಿ ಕೌಶಲ್​ ಸಹ ಬಹಳ ಕಷ್ಟಪಟ್ಟು ಬಾಲಿವುಡ್​ನಲ್ಲಿ ತಮ್ಮದೇ ಆದ ನೆಲೆ ಕಂಡುಕೊಂಡಿದ್ದಾರೆ. ಮಸಾನ್ ಅಂಥಹಾ ಸಣ್ಣ ಸಿನಿಮಾಗಳಲ್ಲಿ ನಟಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಜೊತೆಗೆ ಉರಿ ಅಂಥವಾ ಸಿನಿಮಾಗಳ ಮೂಲಕ ದೊಡ್ಡ ಹೆಸರುಗಳಿಸಿಕೊಂಡವರು. ಬಾಲಿವುಡ್​ನ ಪ್ರತಿಭಾವಂತ ಯುವನಟರಲ್ಲಿ ಒಬ್ಬರು ವಿಕ್ಕಿ ಕೌಶಲ್.

ಇನ್ನು ಸಲ್ಮಾನ್ ಖಾನ್​ಗೆ ಭದ್ರತೆ ಇತ್ತೀಚೆಗೆ ತುಸು ಹೆಚ್ಚಾಗಿದೆ. ಅದರಲ್ಲಿಯೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ ಹೆಚ್ಚು ಭದ್ರತೆ ಒದಗಿಸಲಾಗುತ್ತಿದೆ. ಇದಕ್ಕೆ ಕಾರಣ, ಅವರಿಗಿರುವ ಜೀವ ಬೆದರಿಕೆ. ಇದೇ ಕಾರಣದಿಂದ ಸಲ್ಮಾನ್ ಖಾನ್​ರ ಭದ್ರತಾ ಸಿಬ್ಬಂದಿ ವಿಕ್ಕಿ ಕೌಶಲ್ ಅವರನ್ನೂ ಸಹ ಬದಿಗೆ ತಳ್ಳಿ ಸಲ್ಮಾನ್ ಖಾನ್​ಗೆ ದಾರಿ ಮಾಡಿಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Fri, 26 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ