AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಬಿಗ್​ಬಾಸ್ ಸ್ಪರ್ಧಿ ಮೇಲೆ ಸಂಬಂಧಿಕರಿಂದ ಹಲ್ಲೆ, ದೂರು ಸ್ವೀಕರಿಸದೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಅಧಿಕಾರಿ

Rajasthan Shakira: ರಾಜಸ್ಥಾನದ ಶಕೀರಾ ಎಂದೇ ಖ್ಯಾತವಾಗಿರುವ ನೃತ್ಯಗಾರ್ತಿ, ಮಾಜಿ ಬಿಗ್​ಬಾಸ್ ಸ್ಪರ್ಧಿ ಗೋರಿ ನಗೋರಿ ಹಾಗೂ ಅವರ ತಂಡದ ಮೇಲೆ ಅವರ ಭಾವ ಹಾಗೂ ಅವರ ಗೆಳೆಯರು ಹಲ್ಲೆ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡಿದ್ದಾರೆ ಗೋರಿ ನಗೋರಿ.

ಮಾಜಿ ಬಿಗ್​ಬಾಸ್ ಸ್ಪರ್ಧಿ ಮೇಲೆ ಸಂಬಂಧಿಕರಿಂದ ಹಲ್ಲೆ, ದೂರು ಸ್ವೀಕರಿಸದೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಅಧಿಕಾರಿ
ಗೋರಿ ನಗೋರಿ
ಮಂಜುನಾಥ ಸಿ.
|

Updated on: May 26, 2023 | 4:34 PM

Share

ರಾಜಸ್ಥಾನದ ಶಕೀರಾ (Rajasthan Shakira) ಎಂದೇ ಜನಪ್ರಿಯವಾಗಿರುವ ಜನಪ್ರಿಯ ನೃತ್ಯಗಾರ್ತಿ, ಮಾಜಿ ಬಿಗ್​ಬಾಸ್ (Bigg Boss) ಸ್ಪರ್ಧಿ ಗೋರಿ ನಗೋರಿ ಹಾಗೂ ಅವರ ತಂಡದ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಗೋರಿ ನಗೋರಿ (Gori Nagori), ತಮ್ಮ ಭಾವ ಹಾಗೂ ಅವನ ಗೆಳೆಯರು ತನ್ನ ಹಾಗೂ ತನ್ನ ತಂಡದ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ. ಹಲ್ಲೆಯ ವಿಡಿಯೋವನ್ನು ಸಹ ಗೋರಿ ಹಂಚಿಕೊಂಡಿದ್ದು, ಗುಂಪೊಂದು ಚೇರುಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸುತ್ತಿರುವುದ ದೃಶ್ಯ ವಿಡಿಯೋದಲ್ಲಿದೆ. ಒಬ್ಬರಿಗೆ ತಲೆಗೆ ಗಂಭೀರ ಗಾಯವಾಗಿರುವುದು ಸಹ ವಿಡಿಯೋದಿಂದ ಗೊತ್ತಾಗುತ್ತಿದೆ.

ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿರುವ ಗೋರಿ, ನಾನು ಮೆರ್ಟಾ ನಗರದಲ್ಲಿ ವಾಸವಾಗಿದ್ದೀನಿ, ನನ್ನ ತಂದೆ ಅಥವಾ ಅಣ್ಣ ಇಲ್ಲ. ನಾನು ಸಹೋದರಿಯ ಮದುವೆ ಮಾಡಬೇಕಿತ್ತು. ಆಗ ನನ್ನ ಭಾವ, ನೀವು ಕಿಶನ್​ಘಡ್​ನಲ್ಲಿ ಮದುವೆ ಮಾಡು ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದ. ಸರಿ ಎಂದು ನಾನು ಕಿಶನ್​ಘಡ್​ನಲ್ಲಿ ಮದುವೆ ಮಾಡಲು ನಿಶ್ಚಯಿಸಿದೆ. ಆದರೆ ನನ್ನ ಭಾವ ಜಾವೆದ್ ಹುಸೇನ್ ಮೊದಲೇ ಎಲ್ಲ ಸಂಚುಗಳನ್ನು ರೂಪಿಸಿಕೊಂಡಿದ್ದ, ಮೇ 22 ರಂದು ಭಾವ ಜಾವೆದ್ ಹುಸೇನ್, ಅವನ ಸಹೋದರರು ಹಾಗೂ ಅವನ ಕೆಲವು ಗೆಳೆಯರು ಸೇರಿಕೊಂಡ ನನ್ನ ಹಾಗೂ ನನ್ನ ತಂಡದ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ” ಎಂದಿದ್ದಾರೆ.

ಬಳಿಕ ನಾನು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಅವರು ಸರಿಯಾಗಿ ಸಹಕರಿಸಲಿಲ್ಲ, ನನ್ನನ್ನು ಬಹಳ ಹೊತ್ತು ಕಾಯುವಂತೆ ಮಾಡಿದರು ಕೊನೆಗೆ ಇದು ಮನೆಯ ವಿಷಯ ಮನೆಯಲ್ಲಿಯೇ ಸರಿ ಮಾಡಿಕೊಳ್ಳಿ ಎಂದರು. ದೂರು ಸ್ವೀಕರಿಸಿದೆ ಕೊನೆಯಲ್ಲಿ ನನ್ನೊಟ್ಟಿಗೆ ಸೆಲ್ಫಿ ತೆಗೆದುಕೊಂಡು ಕಳಿಸಿದರು” ಎಂದು ದೂರಿದ್ದಾರೆ ಗೋರಿ.

ನಾನು ಮತ್ತು ನನ್ನ ತಾಯಿ ಇಬ್ಬರೇ ಇದ್ದೇವೆ. ನನ್ನ ಪ್ರಾಣಕ್ಕೇನಾದರೂ ಆಗಿದ್ದರೆ ಯಾರು ಜವಾಭ್ದಾರಿ. ನನ್ನ ಭಾವ ಹಾಗೂ ಅವರ ಗೆಳೆಯರಿಂದ ನಮಗೆ ಅಪಾಯವಿದೆ, ನನ್ನ ತಾಯಿ, ನನ್ನ ತಂಡ, ನಂತರ ಈ ಜನರಿಗೆ ಏನಾದರೂ ಆದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದಿರುವ ಗೋರಿ, ತಮ್ಮ ಹಾಗೂ ತಮ್ಮ ತಂಡದ ಮೇಲೆ ಹಲ್ಲೆ ನಡೆಸಿದವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ”ರಾಜಸ್ಥಾನದ ಜನರು ನನ್ನನ್ನು ಬೆಂಬಲಿಸುವಂತೆ ನಾನು ವಿನಂತಿಸುತ್ತೇನೆ. ರಾಜಸ್ಥಾನ ಸರ್ಕಾರವು ಸರ್ ಅಶೋಕ್ ಗೆಹ್ಲೋಟ್ ಜಿ ಮತ್ತು ಸಚಿನ್ ಪೈಲಟ್ ಅವರು ನನಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ಆದಷ್ಟು ಬೇಗ ನ್ಯಾಯ ದೊರಕಿಸಿ ಮತ್ತು ತಪ್ಪಿತಸ್ಥನನ್ನು ಶಿಕ್ಷಿಸಿ, ನನ್ನ ಜೀವಕ್ಕೆ ಅಪಾಯವಿದೆ, ಭದ್ರತೆ ಕಲ್ಪಿಸಿ ಎಂದು ಅವರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ.

ಗೋರಿ, ರಾಜಸ್ಥಾನ, ಪಂಜಾಬ್ ಇನ್ನಿತರೆ ಉತ್ತರದ ರಾಜ್ಯಗಳಲ್ಲಿ ಬಹು ಜನಪ್ರಿಯ ನೃತ್ಯಗಾರ್ತಿ, ಅವರ ಫೋಟೊ ನಿಕಾಲ್ ಲೊ ಹಾಡು ಬಹಳ ಜನಪ್ರಿಯ. ಹಿಂದಿಯ ಬಿಗ್​ಬಾಸ್ ಸೀಸನ್ 16ರಲ್ಲಿ ಗೋರಿ ಭಾಗವಹಿಸಿದ್ದರು. ಶೋಗೆ ಅತಿಥಿಯಾಗಿ ಆಗಮಿಸಿದ್ದ ನಟಿ ಜಾನ್ಹವಿ ಕಪೂರ್, ತಾವು ಗೋರಿಯ ನೃತ್ಯದ ಫ್ಯಾನ್ ಎಂದು ಹೇಳಿಕೊಂಡಿದ್ದರು. ಸಲ್ಮಾನ್ ಖಾನ್ ಸಹ ಗೋರಿ ಜೊತೆಗೆ ನೃತ್ಯ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ