ಬಂದೂಕಿನೊಂದಿಗೆ ಆಟ, ಮಾಜಿ ಬಿಗ್​ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲು

Abdu Rozik: ಮಾಜಿ ಬಿಗ್​ಬಾಸ್ ಸ್ಪರ್ಧಿ, ಗಾಯಕ ಅಬ್ದು ರೋಜಿಕ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂದೂಕಿನೊಂದಿಗೆ ಆಟ, ಮಾಜಿ ಬಿಗ್​ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲು
ಅಬ್ದು ರೋಜಿಕ್
Follow us
ಮಂಜುನಾಥ ಸಿ.
|

Updated on: May 12, 2023 | 10:23 PM

ಹಿಂದಿ ಬಿಗ್​ಬಾಸ್​ನ (Hindi Bigg Boss) ಕಳೆದ ಸೀಸನ್ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಜನಪ್ರಿಯ ರ್ಯಾಪರ್ ಎಂಸಿ ಸ್ಟ್ಯಾನ್ (MC Stan) ಆ ಸೀಸನ್​ನ ವಿಜೇತರಾದರು. ಆದರೆ ಆ ಸೀಸನ್​ನಲ್ಲಿ ಎಂಸಿ ಸ್ಟ್ಯಾನ್ ಮಾತ್ರವಲ್ಲದೆ ಕುಬ್ಜ ಅಬ್ದು ರೋಜಿಕ್ (Abdu Rozik) ಸಹ ಬಹಳ ಜನಪ್ರಿಯತೆ ಗಳಿಸಿದ್ದರು. ನೋಡಲು ಸಣ್ಣ ಮಗುವಿನ ಕಾಣುವ ಅಬ್ದು ವಯಸ್ಸು 20 ವರ್ಷ. ತಜಕೀಸ್ತಾನ ಮೂಲದ ಅಬ್ದು ರೋಜಿಕ್ ಈಗ ಹೆಚ್ಚಿನ ಸಮಯವನ್ನು ಭಾರತದಲ್ಲಿಯೇ ಕಳೆಯುತ್ತಿದ್ದು, ಭಾರತದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇದೀಗ ಅಬ್ದು ರೋಜಿಕ್ ಸಂಕಷ್ಟಕ್ಕೆ ಸಿಲುಕಿದ್ದು ಅವರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬ್ದು ರೋಜಿಕ್​ರ ವಿಡಿಯೋ ಒಂದು ಇತ್ತೀಚೆಗೆ ಸಖತ್ ವೈರಲ್ ಆಗಿತ್ತು. ಹೋಟೆಲ್ ಒಂದರಲ್ಲಿದ್ದ ಅಬ್ದು ಲೋಡ್ ಆಗಿರುವ ಬಂದೂಕೊಂದನ್ನು ಹಿಡಿದುಕೊಂಡು ಫೋಸ್ ನೀಡುತ್ತಾ ಆಟವಾಡುತ್ತಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಮುಂಬೈ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಅಬ್ದು ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅಬ್ದು ಅನ್ನು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸಿದ್ದರು.

ಅಸಲಿಗೆ, ಅಬ್ದು ಕೈಗೆ ಲೋಡೆಡ್ ಬಂದೂಕು ಸಿಗಲು ಕಾರಣ ಗೋಲ್ಡನ್ ಬ್ರದರ್ಸ್ ಎಂದೇ ಖ್ಯಾತಿಯಾಗಿರುವ ಸನ್ನಿ ಹಾಗೂ ಸಂಜಯ್ ಅವರುಗಳಿಂದ. ಮೈಮೇಲೆ ಕೇಜಿಗಟ್ಟಲೆ ಚಿನ್ನ ಧರಿಸಿಕೊಂಡು ಓಡಾಡುವ ಸನ್ನಿ ಹಾಗೂ ಸಂಜಯ್ ಅವರುಗಳ ಬಾಡಿಗಾರ್ಡ್​ಗಳ ಬಂದೂಕು ಹಿಡಿದುಕೊಂಡು ಅಬ್ದು ಫೋಸು ನೀಡಿದ್ದರು. ವಿಡಿಯೋ ಮಾಡಿಕೊಂಡಿದ್ದರು. ಅದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಸ್ತ್ರಾಸ್ತ್ರ ಕಾಯ್ದೆಯನ್ವಯ ಯಾವ ವ್ಯಕ್ತಿಯ ಬಳಿ ಬಂದೂಕಿನ ಪರವಾನಗಿ ಇರುತ್ತದೆಯೋ ಆ ವ್ಯಕ್ತಿಯ ಹೊರತಾಗಿ ಇನ್ಯಾರೂ ಬಂದೂಕು ಮುಟ್ಟುವಂತಿಲ್ಲ. ಹಾಗಾಗಿ ಈಗ ಅಬ್ದು ಹಾಗೂ ಬಂದೂಕಿನ ಪರವಾನಗಿ ಹೊಂದಿದ್ದ ಗೋಲ್ಡನ್ ಬ್ರದರ್ಸ್​ರ ಬಾಡಿಗಾರ್ಡ್ ವಿರುದ್ಧ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅಬ್ದುಗೆ ಸಂಬಂಧಿಸಿದವರು ಮಾಧ್ಯಮಗಳಿಗೆ ಹೇಳಿರುವಂತೆ, ಅಬ್ದು ಕೇವಲ ಕೆಲವೇ ಸೆಕೆಂಡ್​ಗಳಿಗಾಗಿ ಬಂದೂಕನ್ನು ಎತ್ತಿಕೊಂಡು ಹಾಗೆಯೇ ವಾಪಸ್ ಇಟ್ಟುಬಿಟ್ಟಿದ್ದರು ಎಂದಿದ್ದಾರೆ.

ಅಬ್ದು ರೋಜಿಕ್ ತಜಿಕಿಸ್ತಾನದ ನಾಗರೀಕ. ಅಲ್ಲಿನ ಜನಪ್ರಿಯ ರ್ಯಪರ್ ಬರೋನ್ ಬೆಂಬಲದಿಂದ ಹಾಡುವುದು ಪ್ರಾರಂಭಿಸಿದರು. ಕೆಲವು ತಜಿಕಿಸ್ತಾನ ಹಾಡುಗಳನ್ನು ಹಾಡಿದ್ದ ಅಬ್ದು, ಒಮ್ಮೆ ಅರಿಜಿತ್​ರ ಹಿಂದಿ ಹಾಡೊಂದನ್ನು ಹಾಡಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದು ಬಹಳ ವೈರಲ್ ಆಗಿತ್ತು. ಆ ಬಳಿಕ ಅಬ್ದು ಅವರನ್ನು ದುಬೈನಲ್ಲಿ ನಡೆದ ಫಿಲಂಫೇರ್​ ಕಾರ್ಯಕ್ರಮಕ್ಕೆ ಆಹ್ವಾನಿಸಿ ಹಾಡಲು ಅವಕಾಶ ನೀಡಲಾಯ್ತು. ಅಲ್ಲಿಯೂ ಉತ್ತಮವಾಗಿ ಪ್ರದರ್ಶನ ನೀಡಿ ಜನಮನ ಗೆದ್ದರು ಅಬ್ದು. ಆ ಬಳಿಕ ಅವರಿಗೆ ಬಿಗ್​ಬಾಸ್ 16 ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಸಲ್ಮಾನ್ ಖಾನ್​ರ ಇತ್ತೀಚೆಗಿನ ಸಿನಿಮಾ ಕಿಸಿ ಕ ಭಾಯ್ ಕಿಸಿ ಕೀ ಜಾನ್ ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ. ಇದೀಗ ಗಾಯನದ ಜೊತೆಗೆ ಯೂಟ್ಯೂಬರ್ ಸಹ ಆಗಿರುವ ಅಬ್ದು, ಮುಂಬೈನಲ್ಲಿ ರೆಸ್ಟೊರೆಂಟ್ ಒಂದನ್ನು ಸಹ ತೆರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ