Ileana D’cruz: ನಟಿ ಇಲಿಯಾನಾ ಡಿಕ್ರೂಜ್ ಈಗ ತುಂಬು ಗರ್ಭಿಣಿ; ಆದರೆ ಮಗುವಿನ ತಂದೆ ಯಾರು ಎಂಬುದೇ ತಿಳಿದಿಲ್ಲ
Ileana D'cruz Pregnancy Photoshoot: ‘ಎಲ್ಲಿಯತನಕ ಈ ವಿಚಾರ ಮುಚ್ಚಿಡುತ್ತೀರಿ ಇಲಿಯಾನಾ? ಈಗ ನೀವು ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಲು ಸೂಕ್ತ ಸಮಯ ಬಂದಿದೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸೆಲೆಬ್ರಿಟಿಗಳ ಜೀವನಶೈಲಿ ಬಹಳ ಭಿನ್ನವಾಗಿರುತ್ತದೆ. ಲವ್, ಡೇಟಿಂಗ್, ಮದುವೆ, ಮಕ್ಕಳು, ವಿಚ್ಛೇದನ ಮುಂತಾದ ವಿಚಾರದಲ್ಲಿ ಅವರು ಜನಸಾಮಾನ್ಯರಿಗಿಂತ ಡಿಫರೆಂಟ್ ಆದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ (Ileana D’cruz). ಇತ್ತೀಚೆಗೆ ಅವರು ಒಂದು ಬ್ರೇಕಿಂಗ್ ನ್ಯೂಸ್ ನೀಡಿದ್ದರು. ತಾವು ಪ್ರೆಗ್ನೆಂಟ್ (Pregnant) ಎಂಬುದನ್ನು ಅವರು ಘೋಷಿಸಿದ್ದರು. ಅಚ್ಚರಿ ಎಂದರೆ ಇಲಿಯಾನಾ ಡಿಕ್ರೂಜ್ ಅವರಿಗೆ ಇನ್ನೂ ಮದುವೆ ಆಗಿಲ್ಲ. ಅಲ್ಲದೇ, ಅವರು ಮಗು ಪಡೆಯುತ್ತಿರುವುದು ಯಾರಿಂದ ಎಂಬ ವಿಷಯ ಕೂಡ ಬಹಿರಂಗ ಆಗಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೂ ಮುನ್ನವೇ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ (Baby Bump Photo) ವೈರಲ್ ಆಗಿದೆ.
‘ಬಂಪ್ ಅಲರ್ಟ್’ ಎಂಬ ಕ್ಯಾಪ್ಷನ್ ಜೊತೆಗೆ ಇಲಿಯಾನಾ ಡಿಕ್ರೂಜ್ ಅವರು ಈ ಫೋಟೋ ಹಂಚಿಕೊಂಡಿದ್ದಾರೆ. ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ‘ಎಲ್ಲಿಯತನಕ ಈ ವಿಚಾರ ಮುಚ್ಚಿಡುತ್ತೀರಿ ಇಲಿಯಾನಾ? ಈಗ ನೀವು ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಲು ಸೂಕ್ತ ಸಮಯ ಬಂದಿದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಕತ್ರಿನಾ ಸಹೋದರನ ಜತೆ ಇಲಿಯಾನಾ ಡಿಕ್ರೂಜ್ ಡೇಟಿಂಗ್? ಒಂದು ಫೋಟೋ ಮೂಲಕ ಹೊರಬಿತ್ತು ಸತ್ಯ
ಇಲಿಯಾನಾ ಡಿಕ್ರೂಜ್ ಅವರು ಏಪ್ರಿಲ್ 14ರಂದು ತಾವು ಪ್ರೆಗ್ನೆಂಟ್ ಎಂಬ ವಿಷಯ ಬಹಿರಂಗಪಡಿಸಿದ್ದರು. ‘ಕಮಿಂಗ್ ಸೂನ್.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್ ಡಾರ್ಲಿಂಗ್’ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮ ಎಂಬ ಡಾಲರ್ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಜ್ ಕೂಡ ಕಮೆಂಟ್ ಮಾಡಿದ್ದರು. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದರು.
ಬಿಕಿನಿಯಲ್ಲಿ ಮಿಂಚಿದ ಇಲಿಯಾನಾ ಡಿಕ್ರೂಜ್
2006ರಿಂದಲೂ ಇಲಿಯಾನಾ ಡಿಕ್ರೂಜ್ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಏಪ್ರಿಲ್ 24ರಂದು ಅವರ ಹೊಸ ಸಾಂಗ್ ಬಿಡುಗಡೆ ಆಗಿದೆ.
ಅಡ್ವಾನ್ಸ್ ಹಣ ಪಡೆದು ಮೋಸ ಮಾಡಿದ ಆರೋಪ; ತಮಿಳು ಚಿತ್ರರಂಗದಲ್ಲಿ ನಟಿ ಇಲಿಯಾನಾ ಬ್ಯಾನ್?
ಇಲಿಯಾನಾ ಡಿಕ್ರೂಜ್ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡಿತು ಎಂದು ವರದಿ ಆಯಿತು. ಇತ್ತೀಚೆಗೆ ಇಲಿಯಾನಾ ಡಿಕ್ರೂಜ್ ಅವರು ನಟಿ ಕತ್ರಿನಾ ಕೈಫ್ ಸಹೋದರ ಸೆಬ್ಬಾಸ್ಟಿಯನ್ ಲೊರಾನ್ ಮಿಶಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.