Ileana D’Cruz: ಅಡ್ವಾನ್ಸ್ ಹಣ ಪಡೆದು ಮೋಸ ಮಾಡಿದ ಆರೋಪ; ತಮಿಳು ಚಿತ್ರರಂಗದಲ್ಲಿ ನಟಿ ಇಲಿಯಾನಾ ಬ್ಯಾನ್?
Tamil Film Industry | Kollywood News: ತಮಿಳು ಚಿತ್ರರಂಗದ ಜೊತೆ ಇಲಿಯಾನಾ ಡಿಕ್ರೂಜ್ ಅವರು ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ ಈಗ ಅವರನ್ನು ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.
ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ (Ileana D’Cruz) ಅವರು ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಅಭಿಮಾನಿಗಳಿಗೆ ಬೇಸರ ಆಗುವಂತಹ ಒಂದು ಸುದ್ದಿ ಕೇಳಿಬಂದಿದೆ. ತಮಿಳು ಚಿತ್ರರಂಗದಲ್ಲಿ (Tamil Film Industry) ಇಲಿಯಾನಾ ಡಿಕ್ರೂಜ್ ಅವರನ್ನು ಬ್ಯಾನ್ ಮಾಡಲಾಗಿದೆ ಎಂದು ವರದಿ ಆಗಿದೆ. ಈ ಬಗ್ಗೆ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗಿದ್ದರೂ ಕೂಡ ತಮಿಳಿನ ಕೆಲವು ವೆಬ್ಸೈಟ್ಗಳಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಕಾಲಿವುಡ್ನ (Kollywood) ನಿರ್ಮಾಪಕರೊಬ್ಬರಿಂದ ಅಡ್ವಾನ್ಸ್ ಹಣ ಪಡೆದು, ಶೂಟಿಂಗ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಇಲಿಯಾನಾ ಡಿಕ್ರೂಜ್ ಅವರನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ನಲ್ಲಿ ಇಲಿಯಾನಾ ಡಿಕ್ರೂಜ್ ಅವರು ಹಲವು ಸಿನಿಮಾಗಳನ್ನು ಮಾಡಿದ್ದಾರೆ. ‘ಬರ್ಫಿ’, ‘ಬಾದ್ಶಾಹೋ’, ‘ದಿ ಬಿಗ್ ಬುಲ್’, ‘ರುಸ್ತುಂ’ ಮುಂತಾದ ಸಿನಿಮಾಗಳಲ್ಲಿ ಅವರ ನಟನೆಯಲ್ಲಿ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ದಕ್ಷಿಣ ಭಾರತದಲ್ಲೂ ಇಲಿಯಾನಾ ಡಿಕ್ರೂಜ್ ಅವರು ನಟಿಸುವ ಮೂಲಕ ಇಲ್ಲಿನ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಆದರೆ ಅಡ್ವಾನ್ಸ್ ಹಣ ಪಡೆದ ಮೋಸ ಮಾಡಿದ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಅವರು ಶೂಟಿಂಗ್ಗೆ ಬಾರದ ಕಾರಣ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ನಟಿ ಇಲಿಯಾನಾ ಪ್ರೆಗ್ನೆಂಟ್ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದು ನಿಜವೇ? ಎಲ್ಲದಕ್ಕೂ ಸಿಕ್ತು ಈಗ ಉತ್ತರ
ಇಲಿಯಾನಾ ಡಿಕ್ರೂಜ್ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರು ಯಾರು? ಅವರು ಒಪ್ಪಿಕೊಂಡಿದ್ದ ಸಿನಿಮಾ ಯಾವುದು ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಹೊರಬರಬೇಕಿದೆ. ಈ ಆರೋಪಗಳ ಬಗ್ಗೆ ಶೀಘ್ರದಲ್ಲೇ ಇಲಿಯಾನಾ ಡಿಕ್ರೂಜ್ ಅವರು ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ. ಅಲ್ಲಿಯೇ ಅವರು ಸ್ಪಷ್ಟನೆ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಕತ್ರಿನಾ ಸಹೋದರನ ಜತೆ ಇಲಿಯಾನಾ ಡಿಕ್ರೂಜ್ ಡೇಟಿಂಗ್? ಒಂದು ಫೋಟೋ ಮೂಲಕ ಹೊರಬಿತ್ತು ಸತ್ಯ
ತಮಿಳು ಚಿತ್ರರಂಗದ ಜೊತೆ ಇಲಿಯಾನಾ ಡಿಕ್ರೂಜ್ ಅವರು ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಕಾಲಿವುಡ್ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. 2012ರಲ್ಲಿ ತೆರೆಕಂಡಿದ್ದ ‘ನನ್ಬನ್’ ಸಿನಿಮಾದಲ್ಲಿನ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಬಳಿಕ ಅವರು ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚಿಲ್ಲ.
ಆಸ್ಪತ್ರೆಗೆ ದಾಖಲಾಗಿದ್ದ ಇಲಿಯಾನಾ ಡಿಕ್ರೂಜ್:
ಕೆಲವೇ ದಿನಗಳ ಹಿಂದೆ ಇಲಿಯಾನಾ ಡಿಕ್ರೂಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಬೆಡ್ನಲ್ಲಿ ಮಲಗಿರುವ ಅವರು ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಅವುಗಳನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಹೆಲ್ತ್ ಬಗ್ಗೆ ಅಪ್ಡೇಟ್ ನೀಡಿದ್ದರು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.