ನಟಿ ಇಲಿಯಾನ‌ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?

ನಟಿ ಇಲಿಯಾನ‌ ಪತಿಯೊಂದಿಗಿನ ಬ್ರೇಕಪ್ ಬಳಿಕ ಸಿನಿಮಾರಂಗದಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ಗುಟ್ಟಾಗಿ ಮದುವೆ ಆಗಿ ಬ್ರೇಕಪ್ ಆಗಿದ್ದು ಯಾಕೆ ಅನ್ನೊ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲಿಯಾನಾ ತೆಲುಗು ಚಿತ್ರರಂಗದ ಮೂಲಕ ಟಾಲಿವುಡ್​ಗೆ ಎಂಟ್ರಿಕೊಟ್ಟು, ಕಾಲಿವುಡ್​ ಬಾಲಿವುಡ್​ನಲ್ಲೂ ಮೋಡಿ ಮಾಡಿದ ಬೆಡಗಿ. ಆರು ವರ್ಷಗಳಿಂದ ಬಾಲಿವುಡ್​ನಲ್ಲೇ ಬ್ಯುಸಿಯಾಗಿದ್ದ ಇಲಿಯಾನಾ, ಸಿಕ್ಕ ಗ್ಯಾಪ್​ನಲ್ಲಿ ಲವ್​ ಮೂಡ್​ನಲ್ಲಿದ್ರು. ಇಲಿಯಾನ ಸೀಕ್ರೆಟ್ ಮ್ಯಾರೇಜ್: ರೀಲ್​ನಂತೆ ರಿಯಲ್ ಲೈಫ್​ನಲ್ಲೂ ಲವ್​ ಮಾಡ್ತಿದ್ರೂ, ಇದ್ಯಾವುದೂ ಅಭಿಮಾನಿಗಳಿಗೇ ಗೊತ್ತೇ ಆಗದಂತೆ ಮೆಂಟೇನ್ ಮಾಡಿದ್ರು. ಆದ್ರೆ, ಎರಡು ವರ್ಷಗಳ […]

ನಟಿ ಇಲಿಯಾನ‌ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?
Follow us
ಸಾಧು ಶ್ರೀನಾಥ್​
| Updated By: Skanda

Updated on:Nov 24, 2020 | 7:47 AM

ನಟಿ ಇಲಿಯಾನ‌ ಪತಿಯೊಂದಿಗಿನ ಬ್ರೇಕಪ್ ಬಳಿಕ ಸಿನಿಮಾರಂಗದಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ಗುಟ್ಟಾಗಿ ಮದುವೆ ಆಗಿ ಬ್ರೇಕಪ್ ಆಗಿದ್ದು ಯಾಕೆ ಅನ್ನೊ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇಲಿಯಾನಾ ತೆಲುಗು ಚಿತ್ರರಂಗದ ಮೂಲಕ ಟಾಲಿವುಡ್​ಗೆ ಎಂಟ್ರಿಕೊಟ್ಟು, ಕಾಲಿವುಡ್​ ಬಾಲಿವುಡ್​ನಲ್ಲೂ ಮೋಡಿ ಮಾಡಿದ ಬೆಡಗಿ. ಆರು ವರ್ಷಗಳಿಂದ ಬಾಲಿವುಡ್​ನಲ್ಲೇ ಬ್ಯುಸಿಯಾಗಿದ್ದ ಇಲಿಯಾನಾ, ಸಿಕ್ಕ ಗ್ಯಾಪ್​ನಲ್ಲಿ ಲವ್​ ಮೂಡ್​ನಲ್ಲಿದ್ರು.

ಇಲಿಯಾನ ಸೀಕ್ರೆಟ್ ಮ್ಯಾರೇಜ್: ರೀಲ್​ನಂತೆ ರಿಯಲ್ ಲೈಫ್​ನಲ್ಲೂ ಲವ್​ ಮಾಡ್ತಿದ್ರೂ, ಇದ್ಯಾವುದೂ ಅಭಿಮಾನಿಗಳಿಗೇ ಗೊತ್ತೇ ಆಗದಂತೆ ಮೆಂಟೇನ್ ಮಾಡಿದ್ರು. ಆದ್ರೆ, ಎರಡು ವರ್ಷಗಳ ಹಿಂದೆ ಇನ್​ಸ್ಟ್ರಾಗ್ರಾಂನಲ್ಲಿ ಫೋಟೊವೊಂದನ್ನ ಅಪ್​ಲೋಡ್ ಮಾಡಿ, ಮೈ ಹಬ್ಬಿ ಅಂತಾ ಕ್ಯಾಪ್ಷನ್ ಕೊಟ್ಟಿದ್ರು. ಆಗ್ಲೇ ಇಲಿಯಾನ ಗುಟ್ಟಾಗಿ ಮದುವೆ ಆಗಿದ್ದಾರೆ ಅನ್ನೋ ವಿಚಾರ ತಿಳಿದಿದ್ದು.

ಪ್ರೀತಿ ಮತ್ತು ಮದುವೆ ಬಗ್ಗೆ ಎಲ್ಲೂ ಬಾಯ್ಬಿಡದ ಇಲಿಯಾನಾ, ಏಕಾಏಕಿ ಬ್ರೇಕ್ ಅಪ್​ ಆಗಿದ್ದು ಸದ್ದು ಮಾಡ್ತಿದೆ. ಇಲಿಯಾನಾ ತನ್ನ ವಿದೇಶಿ ಪತಿಯಿಂದ ದೂರವಾಗಿದ್ದು ಯಾಕೆ ಅನ್ನೋ ಸುದ್ದಿ ಸಿನಿರಂಗದ ಗಲ್ಲಿಯಲ್ಲಿ ಓಡಾಡ್ತಿದೆ. ಪತಿ ಆ್ಯಂಡ್ಯೂ ನೀಬೋನ್ ಮತ್ತು ತನ್ನ ನಡುವೆ ಬಿರುಕು ಮೂಡಲು ಕಾರಣ ಏನು ಅನ್ನೋದನ್ನ ರಿವೀಲ್ ಮಾಡಿದ್ದಾರೆ.

ಪತಿ ಪತ್ನಿ ಪ್ರೀತಿಯಲ್ಲಿ ಬಿರುಕು: ಆಂಡ್ರ್ಯೂ ನೀಬೋನ್ ಮತ್ತು ಇಲಿಯಾನಾ ನಡುವೆ ಹೊಂದಾಣಿಕೆ ಸರಿಯಿ ಇರಲಿಲ್ಲವಂತೆ. ಹಲವು ವಿಷಯಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು. ಮನಸ್ತಾಪ ಹೆಚ್ಚಾದ ಮೇಲೆ ಈ ಜೋಡಿ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿತು ಎನ್ನಲಾಗಿದೆ.

ಇನ್ನೂ ಬ್ರೇಕಪ್ ಆಗುತ್ತಿದ್ದಂತೆಯೇ ಆಂಡ್ರ್ಯೂ ನೀಬೋನ್ ಜೊತೆಗಿನ ಫೊಟೋಗಳೆಲ್ಲವನ್ನು ಸೋಷಿಯಲ್ ಮೀಡಿಯಾದಿಂದ ಇಲಿಯಾನ ಡಿಲಿಟ್ ಮಾಡಿದ್ದಾರೆ. ಸದ್ಯ ಬ್ರೇಕಪ್ ಬಗೆಗಿನ ಬೇಸರ ಮರೆತು ಸಿನಿಮಾಗಳಲ್ಲಿ ಬ್ಯುಸಿಯಾಗಲು ಇಲಿಯಾನ ಮುಂದಾಗಿದ್ದಾರೆ. ಆದ್ರೆ, ಥೇಟ್ ಸಿನಿಮಾದಂತೆ ಟ್ವಿಸ್ಟ್ ಕೊಟ್ಟಿದ್ದ ನಟಿಯ ಬದುಕಲ್ಲೂ ಬ್ರೇಕ್ ಅಪ್ ಟ್ವಿಸ್ಟ್ ಕೊಟ್ಟಿದ್ದು ಅಭಿಮಾನಿಗಳ ಮನಸ್ಸಿಗೆ ಘಾಸಿಯಾಗಿದೆ.

Published On - 3:13 pm, Fri, 22 November 19

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು