- Kannada News Photo gallery Tejasswi Prakash Says We are going strong amid break up romour with Karan Kundrra
ಕರಣ್ ಕುಂದ್ರಾ ಜೊತೆ ಬ್ರೇಕಪ್ ಮಾಡಿಕೊಂಡ ತೇಜಸ್ವಿ ಪ್ರಕಾಶ್? ನಿಗೂಢವಾಗಿ ಉತ್ತರಿಸಿದ ನಟಿ
ತೇಜಸ್ವಿ ಪ್ರಕಾಶ್ ಹಾಗೂ ಕರಣ್ ಕುಂದ್ರಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡರು ಎನ್ನುವ ಸುದ್ದಿ ಕೇಳಿ ಬಂತು. ಈ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿದ್ದಾರೆ.
Updated on: Mar 11, 2023 | 6:30 AM

ನಟಿ ತೇಜಸ್ವಿ ಪ್ರಕಾಶ್ ಅವರು ಇತ್ತೀಚೆಗೆ ಸಾಕಷ್ಟು ಪ್ರಚಲಿತದಲ್ಲಿದ್ದಾರೆ. ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ ವಿನ್ ಆದರು. ನಂತರ ‘ನಾಗಿನ್ 6’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ.

ತೇಜಸ್ವಿ ಪ್ರಕಾಶ್ ಹಾಗೂ ಕರಣ್ ಕುಂದ್ರಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡರು ಎನ್ನುವ ಸುದ್ದಿ ಕೇಳಿ ಬಂತು. ಈ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿದ್ದಾರೆ.

‘ಮದುವೆ ನನ್ನ ಜೀವನದ ಬಹಳ ಮುಖ್ಯ ವಿಷಯ. ಅದು ನಡೆಯುವವರೆಗೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನಾನು ಅದನ್ನು ರಹಸ್ಯವಾಗಿಡಲು ಬಯಸುತ್ತೇನೆ. ನಮ್ಮ ಸಂಬಂಧ ಮತ್ತಷ್ಟು ಗಟ್ಟಿ ಆಗುತ್ತಿದೆ. ನಮ್ಮ ನಮ್ಮ ಕಂಪನಿಯನ್ನು ಎಂಜಾಯ್ ಮಾಡುತ್ತಿದ್ದೇವೆ’ ಎಂದಿದ್ದಾರೆ ತೇಜಸ್ವಿ.

ತೇಜಸ್ವಿ ಪ್ರಕಾಶ್ ನೀಡಿರುವ ಹೇಳಿಕೆ ಕರಣ್ ಕುಂದ್ರಾ ಅವರ ಕುರಿತು ಎಂದು ಎಲ್ಲರೂ ಊಹಿಸುತ್ತಿದ್ದಾರೆ. ತೇಜಸ್ವಿ ಹಾಗೂ ಕರಣ್ ಮಧ್ಯೆ ಪ್ರೀತಿ ಇದೆ ಎನ್ನುವ ವಿಚಾರ ತಿಳಿದು ಅನೇಕರಿಗೆ ಖುಷಿ ಆಗಿದೆ.

ತೇಜಸ್ವಿ ಪ್ರಕಾಶ್ ಅವರು ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಆ್ಯಕ್ಟೀವ್ ಆಗುತ್ತಿದ್ದಾರೆ. ಅಲ್ಲಿಯೂ ಅವರು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.
























