- Kannada News Photo gallery Cricket photos ICC Test Rankings Ravichandran Ashwin new World No 1 Test bowler
IND vs AUS: ಅಶ್ವಿನ್ ಈಗ ನಂ.1 ಟೆಸ್ಟ್ ಬೌಲರ್; ಕನ್ನಡಿಗ ಕುಂಬ್ಳೆ ದಾಖಲೆಯೂ ಉಡೀಸ್!
ICC Test Rankings: ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ 6 ವಿಕೆಟ್ ಉರುಳಿಸಿದ ಆರ್. ಅಶ್ವಿನ್ ಐಸಿಸಿ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.
Updated on:Mar 10, 2023 | 5:18 PM

ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ 6 ವಿಕೆಟ್ ಉರುಳಿಸಿದ ಆರ್. ಅಶ್ವಿನ್ ಐಸಿಸಿ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನ ಜೇಮ್ಸ್ ಆಂಡರ್ಸನ್ ಮತ್ತು ಆರ್. ಅಶ್ವಿನ್ ಇಬ್ಬರೂ 859 ಅಂಕಗಳನ್ನು ಹೊಂದಿದ್ದು, ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು.

ಆದರೆ ಇದೀಗ ನಾಲ್ಕನೇ ಟೆಸ್ಟ್‌ನಲ್ಲಿ ಆರು ವಿಕೆಟ್ ಪಡೆದ ಆರ್. ಅಶ್ವಿನ್ ಈಗ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಐಸಿಸಿ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ಅಶ್ವಿನ್ ಪ್ರಥಮ, ಜೇಮ್ಸ್ ಆ್ಯಂಡರ್ಸನ್ ದ್ವಿತೀಯ, ಪ್ಯಾಟ್ ಕಮಿನ್ಸ್ ತೃತೀಯ, ಕಗಿಸೊ ರಬಾಡ ನಾಲ್ಕನೇ ಹಾಗೂ ಶಾಹೀನ್ ಅಫ್ರಿದಿ ಐದನೇ ಸ್ಥಾನದಲ್ಲಿದ್ದಾರೆ.

ನಾಲ್ಕನೇ ಟೆಸ್ಟ್‌ನಲ್ಲಿ ಅಶ್ವಿನ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ ಅವರನ್ನು ಔಟ್ ಮಾಡಿದರು.

ಇದರೊಂದಿಗೆ ಅಶ್ವಿನ್, ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದಿದ್ದ ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅಶ್ವಿನ್ ದಾಖಲೆ ಮುರಿಯಲು 5 ವಿಕೆಟ್‌ಗಳ ಅಗತ್ಯವಿತ್ತು.

ಹಾಗೆಯೇ ಭಾರತದಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್ಗಳ ಪೈಕಿ ಅಶ್ವಿನ್, ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ. ಭಾರತದಲ್ಲಿ ಅಶ್ವಿನ್ 5 ವಿಕೆಟ್ಗಳನ್ನು 2 ಬಾರಿ ಪಡೆದಿದ್ದು, ಕುಂಬ್ಳೆ 25 ಬಾರಿ ಈ ಸಾಧನೆ ಮಾಡಿದ್ದರು.
Published On - 5:18 pm, Fri, 10 March 23
























