- Kannada News Photo gallery Cricket photos IND vs AUS 4th test cameron green century india vs australia ahmedabad test
IND vs AUS: ಭಾರತ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಗ್ರೀನ್! ರೋಹಿತ್ ಪಡೆಗೆ ಸಂಕಷ್ಟ
IND vs AUS: ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಗ್ರೀನ್, ಖವಾಜಾ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದಲ್ಲದೆ, ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.
Updated on: Mar 10, 2023 | 12:53 PM

ಅಹಮದಾಬಾದ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಪ್ರಾಬಲ್ಯ ಮುಂದುವರಿದಿದೆ. ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರ ಅದ್ಭುತ ಶತಕದ ನಂತರ, ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಸ್ಫೋಟಕ ಶತಕ ಬಾರಿಸಿದ್ದಾರೆ.

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಗ್ರೀನ್, ಖವಾಜಾ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದಲ್ಲದೆ, ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

ವಾಸ್ತವವಾಗಿ ಗ್ರೀನ್ 4 ಇನ್ನಿಂಗ್ಸ್ಗಳಲ್ಲಿ ಶತಕದಂಚಿಗೆ ಬಂದು ಎಡವಿದ್ದರು. ಇದರೊಂದಿಗೆ ಚೊಚ್ಚಲ ಶತಕ ಬಾರಿಸುವ ಅವಕಾಶ ಕೂಡ ಕಳೆದುಕೊಂಡಿದ್ದರು. ಗ್ರೀನ್, ಕಳೆದ ವರ್ಷ ನಾಲ್ಕು ಬಾರಿ 70 ಮತ್ತು 80 ರ ನಡುವೆ ಔಟಾಗಿದ್ದರು. ಅಲ್ಲದೆ 2021 ರಲ್ಲಿ ಭಾರತದ ವಿರುದ್ಧ 84 ರನ್ ಗಳಿಸಿ ಶತಕ ವಂಚಿತರಾಗಿದ್ದರು.

ಇನ್ನು ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 143 ಎಸೆತಗಳನ್ನು ಎದುರಿಸಿದ ಗ್ರೀನ್, 16 ಬೌಂಡರಿಗಳ ನೆರವಿನಿಂದ ಗ್ರೀನ್ ಸೆಂಚುರಿ ಬಾರಿಸಿದರು. ಇದರೊಂದಿಗೆ ಭಾರತ ಪ್ರವಾಸದಲ್ಲಿ ಮೊದಲ ಶತಕ ಬಾರಿಸಿದ ದಾಖಲೆ ಬರೆದ ಗ್ರೀನ್, ಏಷ್ಯನ್ ನೆಲದಲ್ಲಿ ಮೂರನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಹಾಗೆಯೇ ಚೊಚ್ಚಲ ಶತಕದೊಂದಿಗೆ ಭಾರತದಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಆಸ್ಟ್ರೇಲಿಯನ್ ತಂಡದ 6ನೇ ಆಟಗಾರ ಎಂಬ ಕೀರ್ತಿಗೆ ಗ್ರೀನ್ ಪಾತ್ರರಾಗಿದ್ದಾರೆ. ಗ್ರೀನ್ಗೂ ಮುನ್ನ ಲೆಸ್ ಫಾವೆಲ್, ಪಾಲ್ ಶೀಹನ್, ಡೀನ್ ಜೋನ್ಸ್, ಮೈಕೆಲ್ ಕ್ಲಾರ್ಕ್, ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ್ದರು.



















