ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ಬೌಲರ್ ಟಿಮ್ ಸೌಥಿ 15ನೇ ಬಾರಿಗೆ 5 ವಿಕೆಟ್ ಪಡೆದು ವಿಶ್ವ ದಾಖಲೆ ಬರೆದಿದ್ದಾರೆ.
1 / 5
ಶ್ರೀಲಂಕಾ ವಿರುದ್ಧ ಕ್ರೈಸ್ಟ್ ಚರ್ಚ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌಥಿ, 64 ರನ್‌ಗಳಿಗೆ 5 ವಿಕೆಟ್ ಪಡೆದರು. ಲಂಕಾದ ಓಷಾದ ಫೆರ್ನಾಂಡೋ, ಕುಸಾಲ್ ಮೆಂಡಿಸ್, ದಿನೇಶ್ ಚಾಂಡಿಮಾಲ್, ಧನಂಜಯ್ ಡಿ ಸಿಲ್ವಾ ಮತ್ತು ಅಸಿತಾ ಫೆರ್ನಾಂಡೋ ಅವರನ್ನು ಬಲಿಪಶುಗಳನ್ನಾಗಿ ಮಾಡಿದ ಸೌಥಿ. ಟೆಸ್ಟ್ ಕ್ರಿಕೆಟ್‌ನಲ್ಲಿ 15ನೇ ಬಾರಿಗೆ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಅದ್ಭುತ ಸಾಧನೆ ಮಾಡಿದರು.
2 / 5
ಇದರೊಂದಿಗೆ ಟಿಮ್ ಸೌಥಿ ಅತಿ ಹೆಚ್ಚು ವಿಕೆಟ್ ಪಡೆದ ಕಿವೀಸ್ ಬೌಲರ್ ಎನಿಸಿಕೊಂಡರು. ಅಲ್ಲದೆ ಈ ಹಿಂದೆ ಕಿವೀಸ್ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನೂ ಸೌಥಿ ಮುರಿದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 354 ಪಂದ್ಯಗಳನ್ನಾಡಿರುವ ಸೌಥಿ, 708 ವಿಕೆಟ್‌ಗಳನ್ನು ಪಡೆಯುವುದರೊಂದಿಗೆ 705 ವಿಕೆಟ್ ಪಡೆದು ದಾಖಲೆ ಬರೆದಿದ್ದ ವೆಟ್ಟೋರಿ ಅವರ ದಾಖಲೆಯನ್ನು ಮುರಿದಿದ್ದಾರೆ.
3 / 5
2008 ರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದ ಸೌಥಿ, ತಂಡದ ಪರ 93 ಟೆಸ್ಟ್, 154 ಏಕದಿನ ಮತ್ತು 107 ಟಿ20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಇದುವರೆಗೆ ಟೆಸ್ಟ್‌ನಲ್ಲಿ 364, ಏಕದಿನ ಪಂದ್ಯದಲ್ಲಿ 201 ಮತ್ತು ಟಿ20 ಮಾದರಿಯಲ್ಲಿ 134 ವಿಕೆಟ್‌ಗಳನ್ನು ಪಡೆದಿದ್ದಾರೆ.
4 / 5
ಇನ್ನು ಮೊದಲ ಟೆಸ್ಟ್ ಪಂದ್ಯದ ವಿಚಾರಕ್ಕೆ ಬಂದರೆ ಸೌಥಿ ಮಾರಕ ದಾಳಿಗೆ ನಲುಗಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್ನಲ್ಲಿ 355 ರನ್‌ಗಳಿಗೆ ಆಲೌಟ್ ಆಗಿದೆ. ಲಂಕಾ ಪರ ಕುಸಾಲ್ ಮೆಂಡಿಸ್ ಗರಿಷ್ಠ 87 ರನ್ ಗಳಿಸಿದರೆ, ಕಿವೀಸ್ ಪರ ಸೌಥಿ ಹೊರತಾಗಿ ಮ್ಯಾಟ್ ಹೆನ್ರಿ 80 ರನ್ ನೀಡಿ 4 ವಿಕೆಟ್ ಪಡೆದರು.