- Kannada News Photo gallery Cricket photos WPL 2023 alyssa healy hits 96 runs vs rcb highest score in wpl 2023
WPL 2023: 19 ಎಸೆತಗಳಲ್ಲಿ 78 ರನ್! ಆರ್‌ಸಿಬಿ ಗೆಲುವಿಗೆ ಎಳ್ಳು ನೀರು ಬಿಟ್ಟ ಅಲಿಸ್ಸಾ ಹೀಲಿ
WPL 2023: ಹೀಲಿ ಅವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿತ್ತು. ಅಂದರೆ ಕೇವಲ ಬೌಂಡರಿ, ಸಿಕ್ಸರ್ಗಳಿಂದಲೇ ಹೀಲಿ 78 ರನ್ ಕಲೆಹಾಕಿದರು.
Updated on: Mar 11, 2023 | 10:16 AM

ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್‌ಸಿಬಿ ತಂಡದ ಸೋಲಿನ ಸರಣಿ ಮುಂದುವರೆದಿದೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಸ್ಮೃತಿ ಪಡೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ನಿನ್ನೆ ಅಂದರೆ ಮಾ.10 ರಂದು ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಆರ್‌ಸಿಬಿ ಮುಗ್ಗರಿಸಿತು. ತಂಡದ ಗೆಲುವಿಗಾಗಿ ಅಬ್ಬರದ ಇನ್ನಿಂಗ್ಸ್ ಆಡಿದ ಅಲಿಸ್ಸಾ ಹೀಲಿ ಗೆಲುವಿನ ರೂವಾರಿ ಎನಿಸಿಕೊಂಡರು. ಇದರೊಂದಿಗೆ ಕೇವಲ 4 ರನ್ಗಳಿಂದ ಶತಕ ಬಾರಿಸುವ ಅವಕಾಶವನ್ನು ಕಳೆದುಕೊಂಡರು.

ಆರ್‌ಸಿಬಿ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿದ ಅಲಿಸ್ಸಾ, ಕೇವಲ 29 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದರ ನಂತರ ಇನ್ನಷ್ಟು ಆಕ್ರಮಣಕಾರಿಯಾದ ಹೀಲಿ, 47 ಎಸೆತಗಳಲ್ಲಿ 96 ರನ್ ಗಳಿಸಿದರು. ಹೀಲಿ ಅವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿತ್ತು. ಅಂದರೆ ಕೇವಲ ಬೌಂಡರಿ ಸಿಕ್ಸರ್ಗಳಿಂದಲೇ ಹೀಲಿ 78 ರನ್ ಕಲೆಹಾಕಿದರು.

ವಾಸ್ತವವಾಗಿ ಹೀಲಿಗೆ ಡಬ್ಲ್ಯುಪಿಎಲ್‌ನಲ್ಲಿ ಮೊದಲ ಶತಕ ಗಳಿಸುವ ಅವಕಾಶವಿತ್ತು ಆದರೆ ಅದಕ್ಕೂ ಮೊದಲು ಯುಪಿ ವಾರಿಯರ್ಸ್ 7 ಓವರ್‌ಗಳು ಬಾಕಿ ಇರುವಂತೆಯೇ 139 ರನ್‌ಗಳ ಗೆಲುವಿನ ಗುರಿಯನ್ನು ಸಾಧಿಸಿತು. 13ನೇ ಓವರ್ನ ಐದನೇ ಎಸೆತದಲ್ಲಿ ಹೀಲಿ ಬೌಂಡರಿ ಬಾರಿಸಿ 95 ರನ್ ಗಳಿಸಿದರು. ಆಗ ಗೆಲುವಿಗೆ ಕೇವಲ 1 ರನ್ ಬೇಕಿತ್ತು. ಹೀಲಿ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ. ಅಂತಿಮವಾಗಿ 1 ರನ್ನೊಂದಿಗೆ ಪಂದ್ಯವನ್ನು ಮುಗಿಸಿದರು.

ಶತಕ ಗಳಿಸಲು ಸಾಧ್ಯವಾಗದಿದ್ದರೂ, ಹೀಲಿ ಡಬ್ಲ್ಯುಪಿಎಲ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಬಾರಿಸಿದ ದಾಖಲೆ ಮಾಡಿದರು. ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 90 ರನ್ ಗಳಿಸಿದ ತಮ್ಮದೇ ತಂಡದ ತಹ್ಲಿಯಾ ಮೆಕ್‌ಗ್ರಾತ್ ಅವರ ದಾಖಲೆಯನ್ನು ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಮುರಿದರು.

ಬ್ಯಾಟಿಂಗ್ನಿಂದ ಮಾತ್ರವಲ್ಲಿ ನಾಯಕತ್ವದಲ್ಲೂ ಮಿಂಚಿದ ಹೀಲಿ ಆರ್‌ಸಿಬಿ ತಂಡವನ್ನು ಕೇವಲ 138 ರನ್‌ಗಳಿಗೆ ಆಲೌಟ್ ಮಾಡಿದರು. ನಂತರ ಸ್ಫೋಟಕ ಬ್ಯಾಟಿಂಗ್ ಮಾಡಿ ಕೇವಲ 13 ಓವರ್‌ಗಳಲ್ಲಿ 10 ವಿಕೆಟ್‌ಗಳಿಂದ ತಂಡಕ್ಕೆ ಜಯ ತಂದಿತ್ತರು.



















